
ಗಾಯಕ ಸೋನು ನಿಗಮ್
ತಪ್ಪು ನಂದಲ್ಲ, ಫಿಲ್ಮ್ ಛೇಂಬರ್ ಅಸಹಾಕಾರದ ಬಳಿಕ ಸುದೀರ್ಘ ಪತ್ರ ಬರೆದ ಸೋನು ನಿಗಮ್
ನನ್ನ ಮಗನಷ್ಟು ಕಿರಿಯವನು ನನ್ನನ್ನು ಸಾವಿರಾರು ಜನರ ಮುಂದೆ ಭಾಷೆಯ ಹೆಸರಿನಲ್ಲಿ ಬೆದರಿಸಲು ಪ್ರಯತ್ನಿಸಿದಾಗ, ಅದು ನನ್ನ ಕೆಲಸದ ವಿಚಾರದಲ್ಲಿ ಎರಡನೇ ಭಾಷೆಯಾದ ಕನ್ನಡವೇ ಆಗಿರಲಿ ನಾನು ಪ್ರತಿಕ್ರಿಯಿಸುದು ಸಹಜ.
ಸೋನು ನಿಗಮ್‌ಗೆ ಕನ್ನಡ ಚಿತ್ರರಂಗದಿಂದ ಅಸಹಕಾರ, ಸುದೀರ್ಘ ಪತ್ರದ ಮೂಲಕ ಸ್ಪಷ್ಟನೆ
ಗಾಯಕ ಸೋನು ನಿಗಮ್ ಅವರು ಬೆಂಗಳೂರಿನ ಕಾನ್ಸರ್ಟ್‌ನಲ್ಲಿ ಕನ್ನಡದ ಕುರಿತು ನೀಡಿದ ವಿವಾದಾತ್ಮಕ ಹೇಳಿಕೆಯಿಂದಾಗಿ ಕನ್ನಡಿಗರ ತೀವ್ರ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಈ ಘಟನೆಯ ಬೆನ್ನಲ್ಲೇ ಕರ್ನಾಟಕ ಫಿಲ್ಮ್ ಚೇಂಬರ್ ಆಫ್ ಕಾಮರ್ಸ್ (KFCC) ಸೋನು ನಿಗಮ್‌ಗೆ ಕನ್ನಡ ಚಿತ್ರರಂಗದಲ್ಲಿ 'ಅಸಹಕಾರ' ತೋರಿಸುವ ನಿರ್ಧಾರ ಕೈಗೊಂಡಿದೆ. ಈ ವಿವಾದಕ್ಕೆ ಸಂಬಂಧಿಸಿದಂತೆ ಸೋನು ನಿಗಮ್ ಸಾಮಾಜಿಕ ಜಾಲತಾಣದಲ್ಲಿ ಸುದೀರ್ಘ ಪತ್ರ ಬರೆದು ಸ್ಪಷ್ಟನೆ ನೀಡಿದ್ದಾರೆ.
ಮೇ 5ರಂದು ಬೆಂಗಳೂರಿನಲ್ಲಿ ನಡೆದ ಕರ್ನಾಟಕ ಫಿಲ್ಮ್ ಚೇಂಬರ್ ಆಫ್ ಕಾಮರ್ಸ್ (KFCC) ಸಭೆಯಲ್ಲಿ, ಸೋನು ನಿಗಮ್‌ಗೆ ಕನ್ನಡ ಚಿತ್ರರಂಗದಲ್ಲಿ ಯಾವುದೇ ಸಹಕಾರ ನೀಡದಿರುವ ನಿರ್ಧಾರ ಕೈಗೊಳ್ಳಲಾಯಿತು. ಈ ಸಭೆಯಲ್ಲಿ ಸಂಗೀತ ನಿರ್ದೇಶಕರ ಸಂಘ, ನಿರ್ದೇಶಕರ ಸಂಘ, ಮತ್ತು ನಿರ್ಮಾಪಕರ ಸಂಘದ ಪ್ರಮುಖರು ಇದ್ದರು. ಕೆಎಫ್ಸಿಸಿ ಅಧ್ಯಕ್ಷ ಎಂ. ನರಸಿಂಹಲು ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸೋನು ನಿಗಮ್ ಒಂದು ವಾರದೊಳಗೆ ಕ್ಷಮೆಯಾಚಿಸದಿದ್ದರೆ ಜೀವಮಾನದ ನಿಷೇಧ ವಿಧಿಸುವ ಬಗ್ಗೆ ಚರ್ಚಿಸಲಾಗುವುದು ಎಂದು ತಿಳಿಸಿದ್ದಾರೆ. ಈ ನಿರ್ಧಾರವನ್ನು "ಅಸಹಕಾರ" ಎಂದು ಕರೆಯಲಾಗಿದೆ.
ಈ ನಿರ್ಧಾರದ ಬಳಕಕ ಸೋನು ನಿಗಮ್, ಸಾಮಾಜಿಕ ಜಾಲತಾಣದಲ್ಲಿ 'ಜಸ್ಟ್ ಲವ್' ಎಂಬ ಶೀರ್ಷಿಕೆಯಡಿ ಸುದೀರ್ಘ ವೀಡಿಯೊ ಮತ್ತು ಪತ್ರವನ್ನು ಹಂಚಿಕೊಂಡಿದ್ದಾರೆ. ಈ ಸ್ಪಷ್ಟನೆಯಲ್ಲಿ, ಅವರು ಕನ್ನಡ ಭಾಷೆ, ಸಂಸ್ಕೃತಿ, ಸಂಗೀತ, ಮತ್ತು ಕನ್ನಡಿಗರ ಬಗ್ಗೆ ತಮಗಿರುವ ಅಪಾರ ಗೌರವವನ್ನು ವ್ಯಕ್ತಪಡಿಸಿದ್ದಾರೆ. ಕನ್ನಡವು ತಮ್ಮ "ಎರಡನೇ ಭಾಷೆ" ಎಂದು ಕರೆದ ಅವರು, ತಾವು ಯಾವಾಗಲೂ ಕನ್ನಡ ಗೀತೆಗಳನ್ನು ಹೆಮ್ಮೆಯಿಂದ ಹಾಡಿರುವುದಾಗಿ ಮತ್ತು ಕರ್ನಾಟಕದಲ್ಲಿ ತಮಗೆ ಕುಟುಂಬದಂತಹ ಪ್ರೀತಿ ಸಿಕ್ಕಿರುವುದಾಗಿ ಹೇಳಿಕೊಂಡಿದ್ದಾರೆ.
ಭಾಷೆಯ ಹೆಸರಿನಲ್ಲಿ ಬೆದರಿಕೆ
‘ ನಾನು ಇನ್ನೂ ಬಾಲಕನಲ್ಲ. ಯಾರಿಂದಲಾದರೂ ಅವಮಾನ ಸಹಿಸುವ ವಯಸ್ಸಲ್ಲ. ನನಗೆ ಈಗ 51 ವರ್ಷ, ಜೀವನದ ದ್ವಿತೀಯಾರ್ಧಕ್ಕೆ ಹೆಜ್ಜೆ ಇಟ್ಟಿದ್ದೇನೆ. ನನ್ನ ಮಗನಷ್ಟು ಕಿರಿಯ ವಯಸ್ಸಿನವ ಸಾವಿರಾರು ಜನರ ಮುಂದೆ ಭಾಷೆಯ ಹೆಸರಿನಲ್ಲಿ ನನ್ನನ್ನು ಬೆದರಿಸಲು ಪ್ರಯತ್ನಿಸಿದಾಗ, ಅದೂ ನನ್ನ ಕೆಲಸದ ವಿಚಾರದಲ್ಲಿ ಪ್ರತಿಕ್ರಿಯಿಸಬೇಕಾಯಿತು. ನಾನು ಮೊದಲ ಹಾಡು ಹಾಡಿದ ತಕ್ಷಣವೇ. ಅವನು ಇನ್ನೂ ಕೆಲವರನ್ನು ಪ್ರಚೋದಿಸಿದ. ಅವರ ಗುಂಪಿನ ಜನರೇ ಬುದ್ದಿಮಾತು ಹೇಳುತ್ತಿದ್ದರೂ ಕೇಳಲಿಲ್ಲʼ ಎಂದು ವಿವಾದ ಸೃಷ್ಟಿಯಾದ ಕುರಿತು ಕನ್ನಡಿಗರಿಗೆ ಮನವರಿಕೆ ಮಾಡಿಕೊಡುವ ಯತ್ನ ಮಾಡಿದ್ದಾರೆ.
'ಕರ್ನಾಟಕದಲ್ಲಿ ಸಂಗೀತ ಕಾರ್ಯಕ್ರಮ ನಡೆಯುವ ಮೊದಲು ಒಂದು ಗಂಟೆಗಳಿಗೂ ಅಧಿಕ ಕನ್ನಡ ಹಾಡುಗಳನ್ನು ಹಾಡುತ್ತೇನೆ. ನಾನು ಯಾರಿಂದಲೂ ಅವಮಾನ ಎದುರಿಸುವಷ್ಟು ಚಿಕ್ಕ ಹುಡುಗನಲ್ಲ. ನನಗೆ 51 ವರ್ಷ, ನನ್ನ ಜೀವನದ ದ್ವಿತೀಯಾರ್ಧಕ್ಕೆ ಹೆಜ್ಜೆ ಇಟ್ಟಿದ್ದೇನೆ' ಎಂದು ಸೋನು ನಿಗಮ್ ಬರೆದುಕೊಂಡಿದ್ದಾರೆ.
'ಕೆಲಸದ ವಿಚಾರದಲ್ಲಿ ಕನ್ನಡ ನನ್ನ ಎರಡನೇ ಭಾಷೆ. ನನ್ನ ಮಗನಷ್ಟು ಕಿರಿಯವನು ನನ್ನನ್ನು ಸಾವಿರಾರು ಜನರ ಮುಂದೆ ಭಾಷೆಯ ಹೆಸರಿನಲ್ಲಿ ಬೆದರಿಸಲು ಯತ್ನಿಸಿದಾಗ, ನಾನು ಪ್ರತಿಕ್ರಿಯಿಸಬೇಕಾಯಿತು. ಅವರ ಪ್ರಚೋದನೆಗೆ ನಾನು ಬಗ್ಗಲಿಲ್ಲ. ನಾನು ಅವರಿಗೆ ತುಂಬಾ ವಿನಮ್ರವಾಗಿ ಮತ್ತು ಪ್ರೀತಿಯಿಂದ ಕಾರ್ಯಕ್ರಮ ಇದೀಗ ಪ್ರಾರಂಭವಾಗಿದೆ. ಇದು ನನ್ನ ಮೊದಲ ಹಾಡು. ನಾನು ನಿಮ್ಮನ್ನು ನಿರಾಸೆಗೊಳಿಸುವುದಿಲ್ಲ ಎಂದು ಹೇಳಿದ್ದೆ, ಎಂದು ಅವರು ಸೋನು ಬರೆದಿದ್ದಾರೆ.
'ಕಲಾವಿದರು ಹಾಡಿನ ಪಟ್ಟಿಯೊಂದನ್ನು ಸಿದ್ಧಪಡಿಸಿಕೊಂಡಿರುತ್ತಾರೆ. ಸಂಗೀತಗಾರರು ಮತ್ತು ತಂತ್ರಜ್ಞರು ಎಲ್ಲರೂ ಅದರ ಪ್ರಕಾರ ಸಮನ್ವಯ ಸಾಧಿಸುತ್ತಾರೆ. ಅವರು ಬೆದರಿಸಲು ಮುಂದಾದರು. ಇಲ್ಲಿ ತಪ್ಪು ಯಾರದ್ದು ಎಂದು ನೀವೆ ಹೇಳಿ' ಎಂದು ಅವರು ಪ್ರಶ್ನಿಸಿದ್ದಾರೆ.
'ನಾನು ದೇಶಭಕ್ತನಾಗಿರುವುದರಿಂದ ಭಾಷೆ, ಜಾತಿ ಅಥವಾ ಧರ್ಮದ ಹೆಸರಿನಲ್ಲಿ ದ್ವೇಷ ಸೃಷ್ಟಿಸಲು ಪ್ರಯತ್ನಿಸುವವರನ್ನು ಬಿಡುವುದಿಲ್ಲ. ವಿಶೇಷವಾಗಿ ಪಹಲ್ಗಾಮ್‌ನಲ್ಲಿ ನಡೆದ ಘಟನೆಯನ್ನು ನೋಡಿದ ಬಳಿಕ. ನಾನು ಅವರಿಗೆ ಬುದ್ದಿವಾದ ಹೇಳಬೇಕಾಯಿತು. ಅದಕ್ಕಾಗಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ನನ್ನನ್ನು ಹುರಿದುಂಬಿಸಿದರು. ಬಳಿಕ ನಾನು ಒಂದು ಗಂಟೆಗೂ ಹೆಚ್ಚು ಕಾಲ ಕನ್ನಡ ಹಾಡು ಹಾಡಿದೆ. ಸಾಮಾಜಿಕ ಮಾಧ್ಯಮದಲ್ಲಿ ಇದೆಲ್ಲವೂ ಇದೆ' ಎಂದು ಅವರು ಹೇಳಿದ್ದಾರೆ.
'ಇಲ್ಲಿ ತಪ್ಪು ಯಾರದ್ದು ಎಂಬ ನಿರ್ಧಾರ ತೆಗೆದುಕೊಳ್ಳುವುದಕ್ಕೆ ಕರ್ನಾಟಕದ ಪ್ರಜ್ಞಾವಂತ ಜನತೆಗೆ ಬಿಟ್ಟು ಬಿಡುತ್ತೇನೆ. ನಿಮ್ಮ ತೀರ್ಪನ್ನು ನಾನು ಸೌಜನ್ಯದಿಂದ ಸ್ವೀಕರಿಸುತ್ತೇನೆ. ಕರ್ನಾಟಕದ ಕಾನೂನು ವ್ಯವಸ್ಥೆ ಮತ್ತು ಪೊಲೀಸ್ ಇಲಖೆಯ ಮೇಲೆ ಗೌರವ ಮತ್ತು ನಂಬಿಕೆಯಿದೆ. ನನ್ನಿಂದ ನಿರೀಕ್ಷಿಸಬಹುದಾದ ಎಲ್ಲ ಸಹಕಾರವನ್ನು ನೀಡಲಿ ಸಿದ್ದನಿದ್ದೇನೆ,'' ಎಂದು ಅವರು ಬರೆದುಕೊಂಡಿದ್ದಾರೆ.