
Namma Metro | ಮೆಟ್ರೋ ಹಸಿರು ಮಾರ್ಗದಲ್ಲಿ ತಾಂತ್ರಿಕ ಅಡಚಣೆ; ಸಂಚಾರದಲ್ಲಿ ವ್ಯತ್ಯಯ
ರಾಜಾಜಿನಗರ ಮೆಟ್ರೋ ನಿಲ್ದಾಣದಲ್ಲಿ ಸುಮಾರು ಐದು ನಿಮಿಷಗಳಿಗೂ ಹೆಚ್ಚು ಕಾಲ ಮೆಟ್ರೋ ರೈಲು ಸಂಚಾರ ಸ್ಥಗಿತಗೊಳಿಸಿತು. ತಾಂತ್ರಿಕ ಅಡಚಣೆ ಸರಿಪಡಿಸಿದ ಬಳಿಕ ಮೆಟ್ರೋ ರೈಲು ಸಂಚಾರ ಪುನರಾರಂಭಿಸಿತು.
ಬೆಂಗಳೂರಿನ ರೇಷ್ಮೆ ಸಂಸ್ಥೆಯಿಂದ ಮಾದಾವರ ಕಡೆ ಸಾಗುವ ಹಸಿರು ಮಾರ್ಗದಲ್ಲಿ ತಾಂತ್ರಿಕ ಅಡಚಣೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ʼನಮ್ಮ ಮೆಟ್ರೋʼ ರೈಲು ಸಂಚಾರದಲ್ಲಿ ವ್ಯತ್ಯಯ ಉಂಟಾಯಿತು.
ರಾಜಾಜಿನಗರ ಮೆಟ್ರೋ ನಿಲ್ದಾಣದಲ್ಲಿ ಸುಮಾರು ಐದು ನಿಮಿಷಗಳಿಗೂ ಹೆಚ್ಚು ಕಾಲ ಮೆಟ್ರೋ ರೈಲು ಸಂಚಾರ ಸ್ಥಗಿತಗೊಳಿಸಿತು. ತಾಂತ್ರಿಕ ಅಡಚಣೆ ಸರಿಪಡಿಸಿದ ಬಳಿಕ ಮೆಟ್ರೋ ರೈಲು ಸಂಚಾರ ಪುನರಾರಂಭಿಸಿತು.
ಮೆಟ್ರೋ ಮಾರ್ಗದಲ್ಲಿ ಉಂಟಾದ ಅಡಚಣೆಯಿಂದ ರಾಜಾಜಿನಗರ ಅಲ್ಲದೇ ಮಾದಾವರವರೆಗಿನ ರೈಲು ನಿಲ್ದಾಣಗಳಲ್ಲೂ ಸಂಚಾರ ವಿಳಂಬವಾಯಿತು. ರಜೆ ದಿನವಾದ ಭಾನುವಾರ ವಿವಿಧೆಡೆ ತೆರಳಬೇಕಿದ್ದವರು ಮೆಟ್ರೋ ವಿಳಂಬದಿಂದ ಸಮಸ್ಯೆ ಎದುರಿಸಬೇಕಾಯಿತು.
ಮೆಟ್ರೋ ಪ್ರಯಾಣ ದರ ಏರಿಕೆಯಿಂದ ಈಗಾಗಲೇ ಪ್ರಯಾಣಿಕರು ವಿಮುಖರಾಗುತ್ತಿದ್ದಾರೆ. ಇದರ ನಡುವೆ, ಆಗಿಂದಾಗ್ಗೆ ತಾಂತ್ರಿಕ ಅಡಚಣೆಗಳು ಕಾಣಿಸಿಕೊಳ್ಳುತ್ತಿದ್ದು, ಸುಗಮ ಸಂಚಾರಕ್ಕೆ ತೊಂದರೆಯಾಗಿದೆ.
ಮೆಟ್ರೋ ನಿಲ್ದಾಣಗಳಲ್ಲಿ ಸಾಕಷ್ಟು ಮುಂಜಾಗ್ರತೆ ವಹಿಸಿದ್ದರೂ ಎಡವಟ್ಟುಗಳು ನಡೆಯುತ್ತಿವೆ. ಒಂದು ತಿಂಗಳ ಹಿಂದೆ ಜಾಲಹಳ್ಳಿ ಮೆಟ್ರೋ ರೈಲು ನಿಲ್ದಾಣದಲ್ಲಿ ಯುವಕನೊಬ್ಬ ಆತ್ಮಹತ್ಯೆಗೆ ಪ್ರಯತ್ನಿಸಿದ ಹಿನ್ನೆಲೆಯಲ್ಲಿ ಈ ಮಾರ್ಗದ ರೈಲು ಗಳ ಸಂಚಾರದಲ್ಲಿ ಸುಮಾರು 25 ನಿಮಿಷ ವಿಳಂಬವಾಗಿತ್ತು. ಇದೇ ನಿಲ್ದಾಣದಲ್ಲಿ ಕೆಲ ತಿಂಗಳ ಹಿಂದೆ ವ್ಯಕ್ತಿಯೊಬ್ಬ ಹಳಿಗೆ ಬಿದ್ದು ಮೃತಪಟ್ಟಿದ್ದರು.