
ಬೆಂಗಳೂರು ಬಿಜೆಪಿ ಕಚೇರಿ ಸ್ಫೋಟ: 30 ವರ್ಷಗಳ ಬಳಿಕ ಶಂಕಿತ ಉಗ್ರ ಆಂಧ್ರದಲ್ಲಿ ಸೆರೆ
ಸಿದ್ದಿಕ್ ವಿರುದ್ಧ ಇನ್ನು ಹಲವು ಗಂಭೀರ ಆರೋಪಗಳಿವೆ. 2011ರಲ್ಲಿ ಮಧುರೈನಲ್ಲಿ ಹಿರಿಯ ಬಿಜೆಪಿ ನಾಯಕ ಎಲ್‌ಕೆ ಆಡ್ವಾಣಿ ಅವರ ಯಾತ್ರೆಯ ಮಾರ್ಗದಲ್ಲಿ ಬಾಂಬ್ ಇಟ್ಟ ಪ್ರಕರಣದಲ್ಲಿಯೂ ಆತ ಶಂಕಿತನಾಗಿದ್ದ.
2013ರಲ್ಲಿ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಕರ್ನಾಟಕ ಬಿಜೆಪಿ ಕಚೇರಿ ಬಳಿ ನಡೆದ ಸ್ಫೋಟ ಸೇರಿದಂತೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ, ಕಳೆದ 30 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಶಂಕಿತ ಉಗ್ರ ನಾಗೂರ್ ಅಬುಬಕ್ಕರ್ ಸಿದ್ದಿಕ್‌ನನ್ನು ಆಂಧ್ರಪ್ರದೇಶದ ಅನ್ನಮಯ್ಯ ಜಿಲ್ಲೆಯಲ್ಲಿ ಬಂಧಿಸಲಾಗಿದೆ ಎಂದು ತಮಿಳುನಾಡು ಪೊಲೀಸರು ಮಂಗಳವಾರ ತಿಳಿಸಿದ್ದಾರೆ. ತಮಿಳುನಾಡು ಪೊಲೀಸರ ವಿಶೇಷ ತಂಡ ಆಂಧ್ರಪ್ರದೇಶಕ್ಕೆ ತೆರಳಿ ಆತನನ್ನು ವಶಕ್ಕೆ ಪಡೆದಿದೆ.
ಏಪ್ರಿಲ್ 17, 2013 ರಂದು ಬೆಂಗಳೂರಿನ ಬಿಜೆಪಿ ಕಚೇರಿ ಹೊರಗೆ ಬಾಂಬ್ ಸ್ಫೋಟಗೊಂಡು ಕನಿಷ್ಠ 16 ಜನರು ಗಾಯಗೊಂಡಿದ್ದರು. ರಾಜ್ಯದಲ್ಲಿ ವಿಧಾನಸಭೆ ಚುನಾವಣೆಗೆ ಕೇವಲ ಮೂರು ವಾರಗಳ ಮೊದಲು ಈ ಸ್ಫೋಟ ನಡೆದಿತ್ತು. ಈ ಘಟನೆಯಲ್ಲಿ ಸಿದ್ದಿಕ್ ಪ್ರಮುಖ ಪಾತ್ರ ವಹಿಸಿದ್ದಾನೆ ಎಂದು ಆರೋಪಿಸಲಾಗಿದೆ.
ಸಿದ್ದಿಕ್ ವಿರುದ್ಧ ಇನ್ನು ಹಲವು ಗಂಭೀರ ಆರೋಪಗಳಿವೆ. 2011ರಲ್ಲಿ ಮಧುರೈನಲ್ಲಿ ಹಿರಿಯ ಬಿಜೆಪಿ ನಾಯಕ ಎಲ್‌ಕೆ ಆಡ್ವಾಣಿ ಅವರ ಯಾತ್ರೆಯ ಮಾರ್ಗದಲ್ಲಿ ಬಾಂಬ್ ಇಟ್ಟ ಪ್ರಕರಣದಲ್ಲಿಯೂ ಆತ ಶಂಕಿತನಾಗಿದ್ದ. ಅಂದು ಬಾಂಬ್ ಅನ್ನು ನಿಷ್ಕ್ರಿಯಗೊಳಿಸುವ ಮೂಲಕ ದೊಡ್ಡ ಅನಾಹುತವನ್ನು ತಪ್ಪಿಸಲಾಗಿತ್ತು. ಇದಲ್ಲದೆ, 1995ರಲ್ಲಿ ಚೆನ್ನೈನ ಹಿಂದೂ ಮುನ್ನಾನಿ ಕಚೇರಿಯಲ್ಲಿ ನಡೆದ ಸ್ಫೋಟ, ನಾಗೂರ್ ತಂಗಮ್ ಮುತ್ತುಕೃಷ್ಣನ್ ಅವರ ನಿವಾಸದ ಹೊರಗೆ ಪಾರ್ಸೆಲ್ ಬಾಂಬ್ ಎಸೆದ ಪ್ರಕರಣ ಮತ್ತು 1999ರಲ್ಲಿ ಚೆನ್ನೈ ಪೊಲೀಸ್ ಆಯುಕ್ತರ ಕಚೇರಿ ಸೇರಿದಂತೆ ಏಳು ಸ್ಥಳಗಳಲ್ಲಿ ಬಾಂಬ್‌ಗಳನ್ನು ಇರಿಸಿದ್ದ ಪ್ರಕರಣಗಳಲ್ಲಿ ಸಿದ್ದಿಕ್ ಭಾಗಿಯಾಗಿದ್ದಾನೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇತರೆ ಸಂಬಂಧಿತ ಭಯೋತ್ಪಾದನಾ ಪ್ರಕರಣಗಳು
ಈ ಹಿಂದೆ 1998ರಲ್ಲಿ ಹಿರಿಯ ಬಿಜೆಪಿ ನಾಯಕ ಎಲ್‌ಕೆ ಆಡ್ವಾಣಿ ಅವರ ಕೊಯಮತ್ತೂರು ರ್ಯಾಲಿಯಲ್ಲಿ ಸರಣಿ ಸ್ಫೋಟಗಳು ಸಂಭವಿಸಿ ಸುಮಾರು 50 ಜನರು ಸಾವನ್ನಪ್ಪಿದ್ದರು. ಈ ಮಾರಣಾಂತಿಕ ಕೊಯಮತ್ತೂರು ಸ್ಫೋಟಗಳಿಗೆ ಅಲ್-ಉಮ್ಮಾದ ಸಂಸ್ಥಾಪಕ ಸದಸ್ಯ ಮೊಹಮ್ಮದ್ ಅಲಿ ಖಾನ್ ಕಾರಣ ಎಂದು ಹೇಳಲಾಗಿದೆ. ಅಲಿ ಕೂಡ ಕಳೆದ 26 ವರ್ಷಗಳಿಂದ ತಲೆಮರೆಸಿಕೊಂಡಿದ್ದು, ತಮಿಳುನಾಡು ಮತ್ತು ಕೇರಳದ ಏಳು ಸ್ಥಳಗಳಲ್ಲಿ ಬಾಂಬ್ ಇಟ್ಟ ಪ್ರಕರಣಗಳಲ್ಲಿಯೂ ಆರೋಪಿಯಾಗಿದ್ದಾನೆ.
ಸಿದ್ದಿಕ್‌ನ ಬಂಧನವು ಹಲವು ದಶಕಗಳ ಹಿಂದಿನ ಭಯೋತ್ಪಾದನಾ ಪ್ರಕರಣಗಳಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.