ಪ್ರಜ್ವಲ್‌ ಸೋದರ ಸೂರಜ್‌ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯಆರೋಪ ಮಾಡಿದವನ ಮೇಲೆ   ಎಫ್‌ಐಆರ್
x

ಪ್ರಜ್ವಲ್‌ ಸೋದರ ಸೂರಜ್‌ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯಆರೋಪ ಮಾಡಿದವನ ಮೇಲೆ ಎಫ್‌ಐಆರ್


ದೇಶಾದ್ಯಂತ ಸದ್ದು ಮಾಡಿದ್ದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಜೈಲು ಪಾಲಾಗಿದ್ದಾರೆ. ಇದೇ ವೇಳೆ ಅವರ ಸಹೋದರ ವಿಧಾನ ಪರಿಷತ್ ಸದಸ್ಯ ಡಾ.ಸೂರಜ್ ರೇವಣ್ಣ ವಿರುದ್ಧ ಅಸಹಜ ಲೈಂಗಿಕ ದೌರ್ಜನ್ಯ ಆರೋಪ ಮಾಡಿದ ಯುವಕನ ವಿರುದ್ಧ ಹೊಳೆನರಸೀಪುರ ನಗರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಅರಕಲಗೂಡು ಮೂಲದ ಸಂತ್ರಸ್ತ ಯುವಕ ಬೆಂಗಳೂರಿನಲ್ಲಿ ಸೂರಜ್ ರೇವಣ್ಣ ವಿರುದ್ಧ ದೂರು ನೀಡಿದ್ದಾರೆ. ತನ್ನ ಮೇಲೆ ಸೂರಜ್‌ ರೇವಣ್ಣ ಅವರು ಲೈಂಗಿಕ ದೌರ್ಜ್ಯ ನಡೆಸಿದ್ದಾರೆ ಎಂದು ೧೬ ಪುಟಗಳ ವಿವರವಾದ ದೂರನ್ನು ನೀಡಿದ್ದಾರೆ.

ತಾನು JDS ಕಾರ್ಯಕರ್ತನಾಗಿದ್ದು, ಲೋಕಸಭಾ ಚುನಾವಣೆಯಲ್ಲಿ ಕೆಲಸ ಮಾಡಿದ್ದೇನೆ. ಚುನಾವಣಾ ಪ್ರಚಾರದ ವೇಳೆ ರೇವಣ್ಣ ಪರಿಚಯವಾಗಿತ್ತು. ಲೈಫ್ ಸೆಟಲ್ ಮಾಡುತ್ತೇನೆ, ನಾನು ಹೇಳಿದಂತೆ ಕೇಳು ಎಂದು ಆಮಿಷ ಒಡ್ಡಿದ್ದರು. ತೋಟದ ಮನೆಗೆ ಕರೆಸಿಕೊಂಡು ಅಸಹಜ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಮುಂದೆಯೂ, ಕರೆದಾಗಲೆಲ್ಲಾ ಸಹಕರಿಸುವಂತೆ ಬೆದರಿಕೆ ಹಾಕಿದ್ದಾರೆ. ಹೇಳಿದಂತೆ ಕೇಳದಿದ್ದರೆ ಕೊಲೆ ಮಾಡ್ತೀನಿ ಅಂತಾ ಬೆದರಿಕೆ ಹಾಕಿದ್ದಾರೆಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ ಎನ್ನಲಾಗಿದೆ.

ಲೈಂಗಿಕ ದೌರ್ಜನ್ಯದ ಸುಳ್ಳು ಪ್ರಕರಣ ದಾಖಲಿಸುವುದಾಗಿ ಬೆದರಿಸಿ ಪಕ್ಷದ ಎಂಎಲ್‌ಸಿ ಸೂರಜ್ ರೇವಣ್ಣ ಅವರಿಂದ ಹಣ ವಸೂಲಿ ಮಾಡಲು ಯತ್ನಿಸಿದ ಆರೋಪದ ಮೇಲೆ ಇಬ್ಬರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಜೆಡಿಎಸ್ ಕಾರ್ಯಕರ್ತ ಮತ್ತು ಅವರ ಸಂಬಂಧಿಕರ ವಿರುದ್ಧ ಶುಕ್ರವಾರ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಎಂಎಲ್‌ಸಿ ಸೂರಜ್ ರೇವಣ್ಣ ಅವರ ಆಪ್ತ ಸಹಾಯಕ ಶಿವಕುಮಾರ್ ಶುಕ್ರವಾರ ದೂರು ದಾಖಲಿಸಿದ್ದು, ದೂರಿನ ಆಧಾರದ ಮೇಲೆ ಆರೋಪ ಮಾಡಿರುವ ಯುವಕ ಮತ್ತು ಅವರ ಸೋದರ ಮಾವನ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.

ʻʻಆರೋಪ ಮಾಡಿರುವ ವ್ಯಕ್ತಿ ತನ್ನ ಸ್ನೇಹಿತ ಹಾಗೂ ಸೂರಜ್‌ರೇವಣ್ಣ ಬ್ರಿಗೇಡ್‌ಗಾಗಿ ಕೆಲಸ ಮಾಡಿದ್ದಾನೆ. ಆತನ‌ ಕುಟುಂಬದ ಖರ್ಚಿಗೆ ಹಣ ಕೇಳಿದ್ದನು, ಆದರೆ ಹಣ ನೀಡಲು ನಿರಾಕರಿಸಿದಾಗ ಸೂರಜ್‌ ರೇವಣ್ಣ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ಪೊಲೀಸ್ ದೂರು ನೀಡುವುದಾಗಿ ಬೆದರಿಕೆ ಹಾಕಿದ್ದಾನೆ. 5 ಕೋಟಿಗೆ ಬೇಡಿಕೆ ಇಟ್ಟಿದ್ದು, ನಂತರ 2 ಕೋಟಿ ನೀಡುವಂತೆ ಕೇಳಿದ್ದರುʼʼ ಎಂದು ಶಿವಕುಮಾರ್ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ. ದೂರಿನ ಆಧಾರದ ಮೇಲೆ ಪೊಲೀಸರು ಆರೋಪ ಮಾಡಿರುವ ವ್ಯಕ್ತಿ ಮತ್ತು ಅವರ ಸೋದರ ಮಾವನ ವಿರುದ್ಧ ಐಪಿಸಿ ಸೆಕ್ಷನ್ 384 (ಸುಲಿಗೆ), 506 (ಕ್ರಿಮಿನಲ್ ಬೆದರಿಕೆ) ಮತ್ತು 34 (ಪಿತೂರಿಯಲ್ಲಿ ಇತರರ ಶಾಮೀಲು) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Read More
Next Story