H. D. Kumaraswamy: ಹೆಚ್.ಡಿ.ಕುಮಾರಸ್ವಾಮಿ ಆರೋಗ್ಯದಲ್ಲಿ ದಿಢೀ‌ರ್ ಏರುಪೇರು!
x

ಹೆಚ್‌ ಡಿ ಕುಮಾರಸ್ವಾಮಿ 

H. D. Kumaraswamy: ಹೆಚ್.ಡಿ.ಕುಮಾರಸ್ವಾಮಿ ಆರೋಗ್ಯದಲ್ಲಿ ದಿಢೀ‌ರ್ ಏರುಪೇರು!

ಜಿಂದಾಲ್‌ನಲ್ಲಿ ಕುಮಾರಸ್ವಾಮಿ ಇತ್ತೀಚೆಗೆ ಚಿಕಿತ್ಸೆ ಪಡೆದಿದ್ದರು. ನಂತರ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆಗೊಳಗಾಗಿದ್ದರು. ಚೇತರಿಕೆ ಕಾಣದ ಕಾರಣ ಒಂದು ವಾರದವರೆಗೆ ಚಿಕಿತ್ಸೆ ಪಡೆಯಲು ಸಿಂಗಾಪುರಕ್ಕೆ ಹೊರಡುವ ಸಾಧ್ಯತೆ ಇದೆ.


ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಹೆಚ್ಚಿನ ಚಿಕಿತ್ಸೆಗೆಂದು ವಿದೇಶಕ್ಕೆ ತೆರಳಲಿದ್ದಾರೆ ಎಂದು ತಿಳಿದುಬಂದಿದೆ.

ಶ್ವಾಸಕೋಶ ಸೋಂಕಿಗೆ ತುತ್ತಾಗಿದ್ದ ಅವರಿಗೆ ಕೆಮ್ಮು ಕಡಿಮೆಯಾಗಿಲ್ಲ. ಚನ್ನಪಟ್ಟಣ ಕ್ಷೇತ್ರದ ಉಪಚುನಾವಣೆ ಮುನ್ನ ಅವರ ಮೂಗಿನಿಂದ ರಕ್ತಸ್ರಾವ ಕೂಡಾ ಆಗಿತ್ತು. ಅವರ ಶ್ವಾಸಕೋಶದ ಸೋಂಕು ಮತ್ತಷ್ಟು ಹೆಚ್ಚಿದ್ದು, ವೈದ್ಯರ ಸಲಹೆಯ ಮೇರೆಗೆ ಹೆಚ್ಚಿನ ಚಿಕಿತ್ಸೆಗೆಂದು ವಿದೇಶಕ್ಕೆ ತೆರಳಲು ಸಜ್ಜಾಗಿದ್ದಾರೆ ಎಂದು ವರದಿಯಾಗಿದೆ.

ಜಿಂದಾಲ್‌ನಲ್ಲಿ ಕುಮಾರಸ್ವಾಮಿ ಇತ್ತೀಚೆಗೆ ಚಿಕಿತ್ಸೆ ಪಡೆದಿದ್ದರು. ನಂತರ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆಗೊಳಗಾಗಿದ್ದರು. ಚೇತರಿಕೆ ಕಾಣದ ಕಾರಣ ಒಂದು ವಾರದವರೆಗೆ ಚಿಕಿತ್ಸೆ ಪಡೆಯಲು ಸಿಂಗಾಪುರಕ್ಕೆ ಹೊರಡುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.

ಕುಮಾರಸ್ವಾಮಿಗೆ ಹಲವರು ಬಾರಿ ಅನಾರೋಗ್ಯ

ಎಚ್.ಡಿ. ಕುಮಾರಸ್ವಾಮಿ ಅವರು ಈ ಹಿಂದೆ ಹಲವಾರು ಆರೋಗ್ಯ ಸಮಸ್ಯೆಗಳನ್ನು ಎದುರಿಸಿದ್ದಾರೆ. ವಿಶೇಷವಾಗಿ ಹೃದಯ ಸಂಬಂಧಿತ ತೊಂದರೆಗಳು. ಕೆಲವು ಪ್ರಮುಖ ಆರೋಗ್ಯ ಸಂಬಂಧಿತದ ಸಮಸ್ಯೆಗಳು ಕುಮಾರಸ್ವಾಮಿ ಅವರನ್ನು ಕಾಡಿದ್ದವು.

ಕುಮಾರಸ್ವಾಮಿ ಅವರು 2007ರಲ್ಲಿ ತೀವ್ರವಾದ ಹೃದಯ ಸಮಸ್ಯೆಗೆ ಒಳಗಾಗಿ ಓಪನ್ ಹಾರ್ಟ್ ಸರ್ಜರಿಗೆ ಒಳಗಾಗಿದ್ದರು. ಸೆಪ್ಟೆಂಬರ್ 2017ರಲ್ಲಿ, ಅವರು ತೀವ್ರವಾದ ಆರ್ಟಿಕ್ ರಿಗರ್ಜಿಟೇಶನ್ (ಹೃದಯ ಕವಾಟದ ಸೋರಿಕೆ) ಸಮಸ್ಯೆಗೆ ಚಿಕಿತ್ಸೆ ಪಡೆದಿದ್ದರು. ಶಸ್ತ್ರಚಿಕಿತ್ಸೆಯನ್ನು ಬೆಂಗಳೂರಿನ ಅಪೋಲೋ ಆಸ್ಪತ್ರೆಯಲ್ಲಿ ಡಾ. ಸತ್ಯಕಿ ಮಾಂಬಾಲ ನೇತೃತ್ವದಲ್ಲಿ ನಡೆಸಲಾಯಿತು.

2023ರ ಆಗಸ್ಟ್ ೩೦ರಂದು ಕುಮಾರಸ್ವಾಮಿ ಅವರು ಬೆಂಗಳೂರಿನ ಜಯನಗರದ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದರು. ಆ ವೇಳೆ ಅವರು ʻಮೈಲ್ಡ್ ಸ್ಟ್ರೋಕ್‌ʼಗೆ ಒಳಗಾಗಿದ್ದರು. ಡಾ. ಪಿ. ಸತೀಶ್ ಚಂದ್ರ ನೇತೃತ್ವದ ತಂಡವು ಚಿಕಿತ್ಸೆ ನೀಡಿತ್ತು ಮತ್ತು ಅವರು ಶೀಘ್ರವಾಗಿ ಚೇತರಿಸಿಕೊಂಡಿದ್ದರು.

೨೦೨೪ರ ಮಾರ್ಚ್ 21ರಂದು, ಕುಮಾರಸ್ವಾಮಿ ಅವರು ಚೆನ್ನೈನ ಅಪೋಲೋ ಆಸ್ಪತ್ರೆಯಲ್ಲಿ ಟ್ರಾನ್ಸ್‌ಕ್ಯಾಥೆಟರ್ ಆರ್ಟಿಕ್ ವಾಲ್ವ್ ಇಂಪ್ಲಾಂಟೇಶನ್ (TAVI) ಎಂಬ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಇದು ಅವರ ಮೂರನೇ ಹೃದಯ ಶಸ್ತ್ರಚಿಕಿತ್ಸೆಯಾಗಿತ್ತು.

೨೦೨೪ರ ಜುಲೈ 28ರಂದು, ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿಯ ವೇಳೆ ಕುಮಾರಸ್ವಾಮಿ ಅವರ ಮೂಗಿನಿಂದ ರಕ್ತಸ್ರಾವವಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ಅವರಿಗೆ ರಕ್ತ ತೆಳುವಾಗಿಸುವ ಔಷಧಗಳನ್ನು ನೀಡಲಾಗಿತ್ತು.

Read More
Next Story