Student dragged to toilet in engineering college and raped, accused arrested
x

ಸಾಂದರ್ಭಿಕ ಚಿತ್ರ

ಬೆಂಗಳೂರಿನ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಅತ್ಯಾಚಾರ; ಕಿರಿಯ ವಿದ್ಯಾರ್ಥಿನಿಂದ ಕೃತ್ಯ

ಅತ್ಯಾಚಾರ ಪ್ರಕರಣವು ಅ.10ರಂದು ನಡೆದಿದ್ದು, ಅ.15ರಂದು ಸಂತ್ರಸ್ಥ ಯುವತಿಯ ಪೋಷಕರು ನೀಡಿದ ದೂರು ಆಧರಿಸಿ ಆರೋಪಿಯನ್ನು ಬಂಧಿಸಲಾಗಿದೆ.


Click the Play button to hear this message in audio format

ಬೆಂಗಳೂರಿನ ಎಂಜಿನಿಯರಿಂಗ್‌ ಕಾಲೇಜೊಂದರಲ್ಲಿ ಹಿರಿಯ ವಿದ್ಯಾರ್ಥಿನಿಯನ್ನು ಪುರುಷರ ಶೌಚಾಲಯಕ್ಕೆ ಎಳೆದೊಯ್ದು ಅತ್ಯಾಚಾರ ಎಸಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಯೊಬ್ಬನನ್ನು ಹನುಮಂತನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬಸವನಗುಡಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಐದನೇ ಸೆಮಿಸ್ಟರ್ ವ್ಯಾಸಂಗ ಮಾಡುತ್ತಿದ್ದ ಜೀವನ್‌ ಗೌಡ (21) ಬಂಧಿತ ಆರೋಪಿ. ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು, ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲಾಗಿದೆ.

ದೂರಿನಲ್ಲಿ ಏನಿದೆ?

ಅ.10 ರಂದು ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ನಡೆದಿದ್ದು, ಘಟನೆಯಿಂದ ಯುವತಿ ಆಘಾತಕ್ಕೆ ಒಳಗಾಗಿದ್ದರು. ಚೇತರಿಸಿಕೊಂಡ ಬಳಿಕ ಪೋಷಕರಿಗೆ ಘಟನೆ ಕುರಿತು ಮಾಹಿತಿ ನೀಡಿದ್ದಳು.ಅ.15 ರಂದು ಯುವತಿಯ ಪೋಷಕರು ನೀಡಿದ ದೂರು ಆಧರಿಸಿ ಆರೋಪಿ ವಿರುದ್ಧ ಬಿಎನ್‌ಎಸ್‌ ಸೆಕ್ಷನ್‌ 64ರಡಿ ಪ್ರಕರಣ ದಾಖಲಿಸಲಾಗಿತ್ತು.

ಘಟನೆಯ ನಡೆದ ದಿನದಂದು ವಿದ್ಯಾರ್ಥಿನಿ ಬೆಳಿಗ್ಗೆ 8.55ರ ಸುಮಾರಿಗೆ ಕಾಲೇಜಿಗೆ ತೆರಳಿದ್ದರು. ಆ ಸಂದರ್ಭದಲ್ಲಿ ಆರೋಪಿಯು, ವಿದ್ಯಾರ್ಥಿನಿ ಜತೆಗೆ ಮಾತನಾಡಬೇಕು ಎಂದು ಹೇಳಿದ್ದ. ಊಟದ ವಿರಾಮದಲ್ಲೂ ಪದೇ ಪದೇ ಪೀಡಿಸುತ್ತಿದ್ದ. ಕೊನೆಗೆ ಏಳನೇ ಬ್ಲಾಕ್‌ಗೆ ಮಾತನಾಡಲು ಹೋದಾಗ ಬಲವಂತವಾಗಿ ಚುಂಬಿಸಲು ಪ್ರಯತ್ನಿಸಿದ್ದ. ಆರೋಪಿಯಿಂದ ತಪ್ಪಿಸಿಕೊಂಡು ಲಿಫ್ಟ್ ಹತ್ತಿ ಆರನೇ ಮಹಡಿಗೆ ವಿದ್ಯಾರ್ಥಿನಿ ತೆರಳಿದ್ದರು. ಆದರೂ ಹಿಂಬಾಲಿಸಿ ಬಂದು ಪುರುಷರ ಶೌಚಾಲಯಕ್ಕೆ ಎಳೆದೊಯ್ದು ಅತ್ಯಾಚಾರ ಎಸಗಿದ್ದ. ಮಧ್ಯಾಹ್ನ 1.30ರಿಂದ 1.50ರ ನಡುವೆ ಈ ಘಟನೆ ನಡೆದಿತ್ತು. ಘಟನಾ ಸ್ಥಳದಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಮಾಡಿದ್ದರೆ, ಇಲ್ಲವೇ ಎಂಬುದನ್ನು ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

Read More
Next Story