
ಅಕ್ರಮ ಗಣಿಗಾರಿಕೆ: ಕಲ್ಲು ಸಿಡಿದು ಗರ್ಭಿಣಿ ಚಿರತೆ, ಹೊಟ್ಟೆಯಲ್ಲಿದ್ದ ಮೂರು ಮರಿಗಳು ಸಾವು
ಕಲ್ಲುಗಣಿಗಾರಿಕೆಯಿಂದ ಭಾರೀ ಗಾತ್ರದ ಕಲ್ಲೊಂದು ಸಿಡಿದು ಗರ್ಭ ಧರಿಸಿದ್ದ ಹೆಣ್ಣು ಚಿರತೆಯೊಂದು ತನ್ನ ಹೊಟ್ಟೆಯೊಳಗಿನ ಮೂರು ಮರಿಗಳ ಸಮೇತ ಸಾವನ್ನಪ್ಪಿರುವ ಘಟನೆ ಬೆಂಗಳೂರು ಕಗ್ಗಲಿಪುರದ ಬಳಿ ನಡೆದಿದೆ.
ಕಲ್ಲುಗಣಿಗಾರಿಕೆಯಿಂದ ಭಾರೀ ಗಾತ್ರದ ಕಲ್ಲೊಂದು ಸಿಡಿದು ಗರ್ಭ ಧರಿಸಿದ್ದ ಹೆಣ್ಣು ಚಿರತೆಯೊಂದು ತನ್ನ ಹೊಟ್ಟೆಯೊಳಗಿನ ಮೂರು ಮರಿಗಳ ಸಮೇತ ಸಾವನ್ನಪ್ಪಿರುವ ಘಟನೆ ಬೆಂಗಳೂರು ಕಗ್ಗಲಿಪುರದ ಬಳಿ ನಡೆದಿದೆ.
ಘಟನೆ ಬಗ್ಗೆ ಡಿಸೆಂಬರ್ 27ರಂದು (ಕಳೆದ ಶನಿವಾರ) ಮಾಹಿತಿ ಸಿಕ್ಕಿದೆ. ಅದಕ್ಕಿಂತ ಮೂರು ದಿನಗಳ ಹಿಂದೆಯೇ ಈ ಘಟನೆ ನಡೆದಿರಬಹುದು ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.
ಅರಣ್ಯ ಇಲಾಖೆಯ ಬೆಂಗಳೂರು ನಗರ ವಿಭಾಗ ಕಗ್ಗಲಿಪುರ ವಲಯದ ಬಸವನತಾರ ಅರಣ್ಯ ಪ್ರದೇಶದಲ್ಲಿ ಸಿಬ್ಬಂದಿ ಗಸ್ತು ನಡೆಸುವಾಗ ಸೂಲಿವಾರ ಸರ್ವೆ ನಂ. 51ರಲ್ಲಿ ಚಿರತೆಯ ಮೃತದೇಹ ಪತ್ತೆಯಾಗಿದ್ದು, ಇದು 3-4 ವರ್ಷ ವಯಸ್ಸಿನ ಹೆಣ್ಣು ಚಿರತೆ ಎಂದು ಖಚಿತವಾಗಿದೆ.
ಮರಣೋತ್ತರ ಪರೀಕ್ಷೆಯ ವೇಳೆ ಚಿರತೆಯ ಹೊಟ್ಟೆಯಲ್ಲಿ ಮೂರು ಮರಿಗಳು ಇರುವುದು ಪತ್ತೆಯಾಗಿದೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಅರಣ್ಯ ಪ್ರದೇಶದ ಸುತ್ತುಮುತ್ತಲೂ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಗಳು ಇಂತಹ ಘಟನೆಗಳಿಗೆ ಕಾರಣವಾಗಿದೆ . ಕಲ್ಲುಗಣಿ ಸ್ಫೋಟದ ಸಂದರ್ಭದಲ್ಲಿ ಭಾರಿ ಗಾತ್ರದ ಕಲ್ಲು ಸಿಡಿದು ಈ ಚಿರತೆ ಮೃತಪಟ್ಟಿರುವುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ಈ ಸಂಬಂಧ ಪ್ರಥಮ ಮಾಹಿತಿ ವರದಿ (ಎಫ್.ಐ.ಆರ್.) ದಾಖಲಿಸಲಾಗಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.
ಈ ಸಂಬಂದ ಯಶವಂತಪುರ ಶಾಸಕರಾದ ಎಸ್.ಟಿ. ಸೋಮಶೇಖರ್ ಅವರು ಅಕ್ರಮ ಕಲ್ಲುಗಣಿಗಾರಿಕೆ ಸಂಬಂಧ ಗಂಭೀರ ಸ್ವರೂಪದ ಆರೋಪ ಮಾಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು, "ಕೂಡಲೇ ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆ ನಡೆಯುತ್ತಿದೆಯೇ ಎಂಬ ಬಗ್ಗೆ ಸಮಗ್ರ ತನಿಖೆ ನಡೆಸಲು ಮತ್ತು ವನ್ಯಜೀವಿಯ ಸಾವಿಗೆ ಕಾರಣರಾದವರ ವಿರುದ್ಧ ನಿಯಮಾನುಸಾರ ಕ್ರಮ ಜರುಗಿಸಬೇಕು," ಎಂದು ಅರಣ್ಯಾಧಿಕಾರಿಗಳಿಗೆ

