ಧರ್ಮಸ್ಥಳ ಪ್ರಕರಣ | ಕೋಮು ಭಾವನೆಗೆ ಧಕ್ಕೆ ತರುವ ಹೇಳಿಕೆ ; ವಸಂತ್ ಗಿಳಿಯಾರ್ ವಿರುದ್ಧ ಮತ್ತೊಂದು‌ ಎಫ್ಐಆರ್
x

ಧರ್ಮಸ್ಥಳ ಪ್ರಕರಣ | ಕೋಮು ಭಾವನೆಗೆ ಧಕ್ಕೆ ತರುವ ಹೇಳಿಕೆ ; ವಸಂತ್ ಗಿಳಿಯಾರ್ ವಿರುದ್ಧ ಮತ್ತೊಂದು‌ ಎಫ್ಐಆರ್

ಹಿಂದುಗಳ ಮನೆಯ ಮುಂದೆ ತುಳಸಿಕಟ್ಟೆ ಹೊಡೆದು ಹಾಕಿರುವ ಯಾವುದೇ ಘಟನೆ ನಡೆದಿಲ್ಲ. ಗ್ರಾಮೀಣಾಭಿವೃದ್ಧಿ ಯೋಜನೆಯಲ್ಲಿ ಎಲ್ಲಾ ಧರ್ಮದವರಿದ್ದು, ಯಾವುದೇ ದ್ವೇಷ ಭಾವನೆ ಹೊಂದಿಲ್ಲ ಎಂದು ದೂರುದಾರರು ತಿಳಿಸಿದ್ದಾರೆ.


ಕೋಮುಭಾವನೆಗೆ ಧಕ್ಕೆ ತರುವಂತಹ ಹೇಳಿಕೆ ನೀಡಿದ ಆರೋಪದ ಮೇಲೆ ಧರ್ಮಸ್ಥಳ ಪರ ಹೋರಾಟಗಾರ ವಸಂತ ಗಿಳಿಯಾರ್ ವಿರುದ್ಧ ಬೆಳ್ತಂಗಡಿ ಠಾಣೆಯಲ್ಲಿ ದೂರು ದಾಖಲಾಗಿದೆ.

ಶೇಖರ್ ಲಾಯಿಲ ಎಂಬುವರು ಆಗಸ್ಟ್ 26ರಂದು ನೀಡಿರುವ ದೂರಿನ ಪ್ರಕಾರ ಆರೋಪಿಯು ತನ್ನ ಯೂಟ್ಯೂಬ್ ಚಾನೆಲ್ ನಲ್ಲಿ,'ಕ್ರಿಸ್ತ ಮಿಷನರಿಗಳು ಹಿಂದೂ ಮನೆಗಳ ಎದುರಿಗೆ ಇದ್ದ ತುಳಸಿ ಕಟ್ಟೆ ಒಡೆದು ಶಿಲುಬೆ ಸ್ಥಾಪನೆ ಮಾಡಿದ್ದಾರೆ. ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಜಾರಿಯಾದ ಬಳಿಕ ತುಳಸಿಕಟ್ಟೆ ಮರುಸ್ಥಾಪನೆ ಆಗಿದೆ', ಎಂದು ಹೇಳಿಕೆ ನೀಡಿದ್ದು, ಧರ್ಮಗಳ ನಡುವೆ ಕೋಮುಸೌಹಾರ್ದ ಹಾಳು ಮಾಡುವ ಪ್ರಯತ್ನ ನಡೆಸಿದ್ದಾರೆ ಎಂದು ದೂರಲಾಗಿದೆ.

ಹಿಂದುಗಳ ಮನೆಯ ಮುಂದೆ ತುಳಸಿಕಟ್ಟೆ ಹೊಡೆದು ಹಾಕಿರುವ ಯಾವುದೇ ಘಟನೆ ನಡೆದಿಲ್ಲ. ಗ್ರಾಮೀಣಾಭಿವೃದ್ಧಿ ಯೋಜನೆಯಲ್ಲಿ ಎಲ್ಲಾ ಧರ್ಮದವರಿದ್ದು, ಯಾವುದೇ ದ್ವೇಷ ಭಾವನೆ ಹೊಂದಿಲ್ಲ.

'ಇಂತಹ ಸುಳ್ಳು ಹೇಳಿಕೆ ಮೂಲಕ ಸಮಾಜದ ಶಾಂತಿ ಕದಡುತ್ತಿದ್ದಾರೆ' ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ವಸಂತ್ ಗಿಳಿಯಾರ್ ವಿರುದ್ಧ ಬೆಳ್ತಂಗಡಿ ಠಾಣೆಯಲ್ಲಿ ಬಿಎನ್ ಎಸ್ ಕಲಂ 196(1)(a) ಮತ್ತು 353(2) ಪ್ರಕಾರ ಎಫ್ಐಆರ್ ದಾಖಲಾಗಿದೆ.

ಆಗಸ್ಟ್ 9ರಂದು ಬೆಳ್ತಂಗಡಿ ಠಾಣೆಯಲ್ಲಿ ಇದೇ ವ್ಯಕ್ತಿಯ ವಿರುದ್ಧ ಸಮಾನ ಸೆಕ್ಷನ್ ಗಳಡಿ ಎಫ್ಐಆರ್ ದಾಖಲಾಗಿತ್ತು. ಆದರೂ, ಕೋಮು ಭಾವನೆ ಕೆರಳಿಸುವ ಹೇಳಿಕೆಗಳನ್ನು ಪುನರಾವರ್ತನೆ ಮಾಡಿರುವುದಾಗಿ ಆಪಾದಿಸಲಾಗಿದೆ.

Read More
Next Story