ರಾಜ್ಯ ಸರ್ಕಾರ, ರೈತರಿಗೆ 'ಆತ್ಮಹತ್ಯೆಯ ದೌರ್ಭಾಗ್ಯ' ನೀಡಿದೆ: ಬಿಜೆಪಿ ಕಿಡಿ
ರಾಜ್ಯದಲ್ಲಿ ಕೇವಲ ಹದಿನೈದು ತಿಂಗಳಲ್ಲೇ ಸರಿ ಸುಮಾರು 1,182 ಅನ್ನದಾತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸುದ್ಧಿಸಂಸ್ಥೆಯೊಂದು ಮಾಡಿರುವ ವರದಿ ಉಲ್ಲೇಖಿಸಿ ರಾಜ್ಯ ಬಿಜೆಪಿ ಘಟಕ ಕಾಂಗ್ರೆಸ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.
ಈ ಕುರಿತು ತನ್ನ ಅಧಿಕೃತ ʼಎಕ್ಸ್ʼ ಖಾತೆಯಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ, ʻಅಭಿಮಾನಕ್ಕೆ ಹೆಸರಾಗಿದ್ದ ನಾಡಿಗೇ ಅನ್ನ ನೀಡುವ ರೈತ ಸಮುದಾಯ ರಾಜ್ಯ ಕಾಂಗ್ರೆಸ್ ಸರ್ಕಾರದ ರೈತ ವಿರೋಧಿ ನೀತಿಯಿಂದ ನೊಂದು, ಬೆಂದು, ಬಸವಳಿದು ಆತ್ಮಹತ್ಯೆಯ ಹಾದಿ ಹಿಡಿದಿದೆʼʼ ಎಂದು ಹೇಳಿದೆ.
ಸ್ವಾಭಿಮಾನಕ್ಕೆ ಹೆಸರಾಗಿದ್ದ ನಾಡಿಗೇ ಅನ್ನ ನೀಡುವ ರೈತ ಸಮುದಾಯ @INCKarnataka ಸರ್ಕಾರದ ರೈತ ವಿರೋಧಿ ನೀತಿಯಿಂದ ನೊಂದು, ಬೆಂದು, ಬಸವಳಿದು ಆತ್ಮಹತ್ಯೆಯ ಹಾದಿ ಹಿಡಿದಿದೆ.
— BJP Karnataka (@BJP4Karnataka) July 8, 2024
ರಾಜ್ಯದ ಪಾಲಿನ ಕಿಸಾನ್ ಸಮ್ಮಾನ್ ಸಹಾಯಧನ ರದ್ದು, 1087 ಕೋಟಿ ಪ್ರೋತ್ಸಾಹಧನ ಬಾಕಿ, ಹನಿ ನೀರಾವರಿ ಯೋಜನೆಯ ಸಹಾಯಧನ ಕಡಿತ, ಬೆಲೆ ಏರಿಕೆ ಮತ್ತು ಸಮರ್ಪಕವಾಗಿ ಬರ… pic.twitter.com/0ufwwmWZQ9
ʻʻರಾಜ್ಯದ ಪಾಲಿನ ಕಿಸಾನ್ ಸಮ್ಮಾನ್ ಸಹಾಯಧನ ರದ್ದು, 1087 ಕೋಟಿ ಪ್ರೋತ್ಸಾಹಧನ ಬಾಕಿ, ಹನಿ ನೀರಾವರಿ ಯೋಜನೆಯ ಸಹಾಯಧನ ಕಡಿತ, ಬೆಲೆ ಏರಿಕೆ ಮತ್ತು ಸಮರ್ಪಕವಾಗಿ ಬರ ಪರಿಹಾರ ನೀಡದ ರಾಜ್ಯ ಕಾಂಗ್ರೆಸ್ ಸರ್ಕಾರ, ರೈತರಿಗೆ 'ಆತ್ಮಹತ್ಯೆಯ ದೌರ್ಭಾಗ್ಯ' ನೀಡಿದೆʼʼ ಎಂದು ಬಿಜೆಪಿ ಕಿಡಿಕಾರಿದೆ.
ʻʻಸಿಎಂ ಸಿದ್ದರಾಮಯ್ಯನವರ ರೈತ ವಿರೋಧಿ ನಡೆಯಿಂದ ಕೇವಲ ಹದಿನೈದು ತಿಂಗಳಲ್ಲೇ ರಾಜ್ಯದ ಸರಿ ಸುಮಾರು 1,182 ಅನ್ನದಾತರು ಉಸಿರು ಚೆಲ್ಲಿದ್ದಾರೆ. ನೊಂದ ರೈತ ಕುಟುಂಬದ ಶಾಪ ಕಾಂಗ್ರೆಸ್ ಸರ್ಕಾರಕ್ಕೆ ತಟ್ಟದೇ ಇರಲಾರದುʼʼ ಎಂದು ಆಕ್ರೋಶ ವ್ಯಕ್ತಪಡಿಸಿದೆ.