SSLC EXAM- 2 | ಎಸ್‌ಎಸ್‌ಎಲ್‌ಸಿ ಪರೀಕ್ಷೆ- 2 ದಿನಾಂಕ ಮುಂದಕ್ಕೆ
x

SSLC EXAM- 2 | ಎಸ್‌ಎಸ್‌ಎಲ್‌ಸಿ ಪರೀಕ್ಷೆ- 2 ದಿನಾಂಕ ಮುಂದಕ್ಕೆ


ಜೂನ್‌ 7 ರಂದು ಆರಂಭವಾಗಬೇಕಿದ್ದ ಎಸ್‌ಎಸ್‌ಎಲ್‌ಸಿಯ ಎರಡನೇ ಪರೀಕ್ಷೆಯನ್ನು ಮುಂದೂಡಲಾಗಿದ್ದು, ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಪರಿಷ್ಕೃತ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಆ ಪ್ರಕಾರ, ಜೂನ್‌ 14 ರಿಂದ ಪರೀಕ್ಷೆಗಳು ಆರಂಭವಾಗಲಿವೆ.

ಇದೇ ಮೊದಲ ಬಾರಿಗೆ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಹಂತಹಂತವಾಗಿ ಮೂರು ಪರೀಕ್ಷೆಗಳನ್ನು ಬರೆಯಲು ಅವಕಾಶ ಮಾಡಿಕೊಟ್ಟಿರುವ ಶಾಲಾ ಶಿಕ್ಷಣ ಇಲಾಖೆ, ಮೂರು ಪರೀಕ್ಷೆಯ ಪೈಕಿ ಯಾವುದರಲ್ಲಿ ಹೆಚ್ಚು ಅಂಕ ಗಳಿಸುತ್ತಾರೆಯೋ ಆ ಫಲಿತಾಂಶವನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವನ್ನೂ ಕಲ್ಪಿಸಿದೆ. ಆ ಹಿನ್ನೆಲೆಯಲ್ಲಿ ಕಳೆದ ಮಾರ್ಚ್‌ನಲ್ಲಿ ನಡೆದ ಮೊದಲ ಪರೀಕ್ಷೆಯ ಬಳಿಕ ಇದೀಗ ಜೂನ್‌ ನಲ್ಲಿ ಎರಡನೇ ಪರೀಕ್ಷೆ ನಡೆಸಲು ಮುಂದಾಗಿದೆ. ಜೊತೆಗೆ ಪ್ರತಿ ಪರೀಕ್ಷೆಗೂ ಹದಿನೈದು ದಿನಗಳ ಪೂರಕ ಬೋಧನೆ ತರಗತಿಗಳನ್ನು ನಡೆಸುವಂತೆಯೂ ಶಿಕ್ಷಕರಿಗೆ ಸೂಚಿಸಿದೆ.

ಜೂನ್‌ 7 ರಂದು ಪರೀಕ್ಷೆ ನಡೆಸುವ ಇಲಾಖೆಯ ಉದ್ದೇಶದಿಂದಾಗಿ ಮೇ 15 ರಿಂದಲೇ ಪೂರಕ ಬೋಧನಾ ತರಗತಿಗಳನ್ನು ಆರಂಭಿಸಲಾಗಿತ್ತು. ಆದರೆ, ಸದ್ಯ ಬೇಸಿಗೆ ರಜೆಯಲ್ಲಿರುವ ಪ್ರೌಢಶಾಲಾ ಶಿಕ್ಷಕರು ಹದಿನೈದು ದಿನಗಳ ರಜೆ ಕಡಿತವಾಗಲಿದೆ ಎಂಬ ಆಕ್ಷೇಪ ವ್ಯಕ್ತಪಡಿಸಿ ಪರೀಕ್ಷೆ ಮುಂದೂಡುವಂತೆ ಒತ್ತಾಯಿಸಿದ್ದರು. ಇದೀಗ ಶಿಕ್ಷಕರ ಒತ್ತಡಕ್ಕೆ ಮಣಿದ ಇಲಾಖೆ, ಪರೀಕ್ಷೆಯನ್ನು ಜೂನ್‌ 7 ಬದಲಾಗಿ ಜೂನ್‌ 14 ರಿಂದ ಆರಂಭಿಸಲು ನಿರ್ಧರಿಸಿ ಪರಿಷ್ಕೃತ ವೇಳಾಪಟ್ಟಿ ಪ್ರಕಟಿಸಿದೆ.

ಜೂನ್‌ 14 ರಿಂದ ಆರಂಭವಾಗುವ ಎಸ್‌ಎಸ್‌ಎಲ್‌ಸಿ ಪರೀಕ್ಷೆ-2, ಜೂನ್‌ 22ರಂದು ಮುಕ್ತಾಯವಾಗಲಿದೆ.

ವೇಳಾಪಟ್ಟಿಯ ವಿವರ ಇಂತಿದೆ;

ಪರೀಕ್ಷಾ ದಿನಾಂಕ ವಿಷಯ
14.06.2024ಪ್ರಥಮ ಭಾಷೆ: ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲಿಷ್, ಇಂಗ್ಲಿಷ್ (NCERT), ಸಂಸ್ಕೃತ

15.06.2024

ತೃತೀಯ ಭಾಷೆ: ಹಿಂದಿ, ಕನ್ನಡ, ಇಂಗ್ಲಿಷ್, ಅರೇಬಿಕ್, ಪರ್ಷಿಯನ್, ಉರ್ದು, ಸಂಸ್ಕೃತ, ಕೊಂಕಣಿ, ತುಳು ಹಾಗೂ ಎನ್ಎಸ್‌ಕ್ಯೂಎಫ್‌

18.06.2024

ಗಣಿತ

19.06.2024

ಅರ್ಥಶಾಸ್ತ್ರ, ಎಂಜಿನಿಯರಿಂಗ್

20.06.2024

ವಿಜ್ಞಾನ, ರಾಜ್ಯಶಾಸ್ತ್ರ, ಹಿಂದೂಸ್ತಾನಿ, ಕರ್ನಾಟಕ ಸಂಗೀತ

21.06.2024

ದ್ವಿತೀಯ ಭಾಷೆ: ಇಂಗ್ಲಿಷ್, ಕನ್ನಡ

22.06.2024

ಸಮಾಜ ವಿಜ್ಞಾನ

Read More
Next Story