ಆಗಸ್ಟ್​ 16ರಂದು ನಿಗದಿಯಾಗಿದ್ದ ಸಚಿವ ಸಂಪುಟದ ವಿಶೇಷ ಸಭೆ ಮುಂದೂಡಿಕೆ
x

ಆಗಸ್ಟ್​ 16ರಂದು ನಿಗದಿಯಾಗಿದ್ದ ಸಚಿವ ಸಂಪುಟದ ವಿಶೇಷ ಸಭೆ ಮುಂದೂಡಿಕೆ

ಈ ಸಭೆಯನ್ನು ಆಗಸ್ಟ್ 19, ಮಂಗಳವಾರದಂದು ಸಂಜೆ 5 ಗಂಟೆಗೆ ಮುಂದೂಡಲಾಗಿದೆ. ಸಭೆ ಮುಂದೂಡಿಕೆಗೆ ನಿರ್ದಿಷ್ಟ ಕಾರಣವನ್ನು ಸುತ್ತೋಲೆಯಲ್ಲಿ ಉಲ್ಲೇಖಿಸಲಾಗಿಲ್ಲ.


ಒಳಮೀಸಲಾತಿ ವರದಿ ಜಾರಿ ಬಗ್ಗೆ ಚರ್ಚಿಸಲು ಆಗಸ್ಟ್ 16 ರಂದು ನಿಗದಿಯಾಗಿದ್ದ ರಾಜ್ಯ ಸಚಿವ ಸಂಪುಟದ ವಿಶೇಷ ಸಭೆ ಮುಂದೂಡಲಾಗಿದ್ದು, ಪರಿಷ್ಕೃತ ದಿನಾಂಕವನ್ನು ಸರ್ಕಾರ ಪ್ರಕಟಿಸಿದೆ. ಈ ಸಭೆಯು ಇದೀಗ ಮಂಗಳವಾರ, ಆಗಸ್ಟ್ 19ರಂದು ನಡೆಯಲಿದೆ.

ಈ ಕುರಿತು ಸರ್ಕಾರದ ಸಚಿವ ಸಂಪುಟ ವಿಭಾಗದ ಅಪರ ಕಾರ್ಯದರ್ಶಿ ಆರ್. ಚಂದ್ರಶೇಖರ್ ಅವರು ಆಗಸ್ಟ್ 14ರಂದು ಅಧಿಕೃತ ಸುತ್ತೋಲೆ ಹೊರಡಿಸಿದ್ದಾರೆ. ಪೂರ್ವ ನಿಗದಿಯಂತೆ ಸಭೆಯು ಆಗಸ್ಟ್ 16ರಂದು ಸಂಜೆ 4 ಗಂಟೆಗೆ ವಿಧಾನಸೌಧದ ಸಚಿವ ಸಂಪುಟ ಸಭಾಂಗಣದಲ್ಲಿ ನಡೆಯಬೇಕಿತ್ತು. ಆದರೆ, ಈಗ ಈ ಸಭೆಯನ್ನು ಆಗಸ್ಟ್ 19, ಮಂಗಳವಾರದಂದು ಸಂಜೆ 5 ಗಂಟೆಗೆ ಮುಂದೂಡಲಾಗಿದೆ. ಸಭೆ ಮುಂದೂಡಿಕೆಗೆ ನಿರ್ದಿಷ್ಟ ಕಾರಣವನ್ನು ಸುತ್ತೋಲೆಯಲ್ಲಿ ಉಲ್ಲೇಖಿಸಲಾಗಿಲ್ಲ.

ಈ ಸೂಚನಾ ಪತ್ರವನ್ನು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಎಲ್ಲಾ ಸಚಿವರುಗಳು ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರಿಗೆ ರವಾನಿಸಲಾಗಿದೆ. ಸಾಮಾನ್ಯವಾಗಿ, ತುರ್ತು ಅಥವಾ ಪ್ರಮುಖ ನೀತಿ ನಿರೂಪಣಾ ವಿಷಯಗಳ ಕುರಿತು ಚರ್ಚಿಸಲು ವಿಶೇಷ ಸಚಿವ ಸಂಪುಟ ಸಭೆಗಳನ್ನು ಕರೆಯಲಾಗುತ್ತದೆ. ಇದೀಗ ಸಭೆ ಮುಂದೂಡಿಕೆಯಾಗಿರುವುದು ರಾಜಕೀಯ ವಲಯದಲ್ಲಿ ಸಹಜವಾಗಿಯೇ ಕುತೂಹಲಕ್ಕೆ ಕಾರಣವಾಗಿದೆ.

Read More
Next Story