ವಿಧಾನಸೌಧದಲ್ಲಿ ನಾಯಿಗಳ ಉಪಟಳ ತಡೆಗೆ ಯೋಜನೆ ರೂಪಿಸಿ; ಸರ್ಕಾರಕ್ಕೆ ಪತ್ರ ಬರೆದ ಸ್ಪೀಕರ್‌
x

ವಿಧಾನಸೌಧದಲ್ಲಿ ನಾಯಿಗಳ ಉಪಟಳ ತಡೆಗೆ ಯೋಜನೆ ರೂಪಿಸಿ; ಸರ್ಕಾರಕ್ಕೆ ಪತ್ರ ಬರೆದ ಸ್ಪೀಕರ್‌

ನಾಯಿಗಳನ್ನು ಸ್ಥಳಾಂತರ ಮಾಡಿದರೆ ಬೇರೆ ನಾಯಿಗಳ ಜೊತೆ ಹೊಂದಿಕೊಳ್ಳುವುದಿಲ್ಲ. ಹೊಸ ಗುಂಪಿನೊಂದಿಗೆ ಸೇರಿವುದಿಲ್ಲ. ಹಾಗಾಗಿ ವಿಧಾನಸೌಧ ಆವರಣದಲ್ಲೇ ಸೂಕ್ತ ಜಾಗ ಗುರುತಿಸಿ, ಅವುಗಳಿಗೆ ಆಶ್ರಯ ಕಲ್ಪಿಸಬೇಕು ಎಂದು ಸ್ಪೀಕರ್‌ ಯು.ಟಿ. ಖಾದರ್‌ ಹೇಳಿದ್ದಾರೆ.


ಬೆಂಗಳೂರಿನ ವಿಧಾನಸೌಧದ ಆವರಣದಲ್ಲಿ ನಾಯಿಗಳ ಹಾವಳಿ ತಡೆಯಲು ಸೂಕ್ತ ಕ್ರಮ ಕೈಗೊಳ್ಳುವಂತೆ ಸ್ಪೀಕರ್ ಯು.ಟಿ. ಖಾದರ್ ಅವರು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.

ವಿಧಾನಸೌಧದಲ್ಲಿ ಪ್ರಸ್ತುತ 53ನಾಯಿಗಳಿವೆ. ನಾಯಿಗಳ ಉಪಟಳದ ಕುರಿತು ಹಲವು ಶಾಸಕರು ದೂರು ನೀಡಿದ್ದಾರೆ. ಕೆಲವರು ನಾಯಿಗಳನ್ನು ಸ್ಥಳಾಂತರಿಸುವಂತೆ ಶಿಫಾರಸು ಮಾಡಿದ್ದಾರೆ. ಆದರೆ, ಇದ್ಯಾವುದರಿಂದಲೂ ಸಮಸ್ಯೆ ಬಗೆಹರಿಯುವುದಿಲ್ಲ. ಹಾಗಾಗಿ ಪರ್ಯಾಯ ಕ್ರಮ ಕೈಗೊಳ್ಳುವಂತೆ ಖಾದರ್ ಅವರು ಸೂಚಿಸಿದ್ದಾರೆ.

ನಾಯಿಗಳನ್ನು ಸ್ಥಳಾಂತರ ಮಾಡಿದರೆ ಬೇರೆ ನಾಯಿಗಳ ಜೊತೆ ಹೊಂದಿಕೊಳ್ಳುವುದಿಲ್ಲ. ಹೊಸ ಗುಂಪಿನೊಂದಿಗೆ ಸೇರಿಸುವುದಿಲ್ಲ. ಹಾಗಾಗಿ ವಿಧಾನಸೌಧ ಆವರಣದಲ್ಲೇ ಸೂಕ್ತ ಜಾಗ ಗುರುತಿಸಿ, ಅವುಗಳಿಗೆ ಆಶ್ರಯ ಕಲ್ಪಿಸಬೇಕು. ಎಲ್ಲೆಂದರಲ್ಲಿ ಓಡಾಡಲು ಬಿಡಬಾರದು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ನಾಯಿಗಳ ಹಾವಳಿ ತಡೆ ಸಂಬಂಧ ಚರ್ಚಿಸಲು ಶುಕ್ರವಾರ ಸಭಾಪತಿಗಳು, ಪೊಲೀಸ್ ಅಧಿಕಾರಿಗಳು ಹಾಗೂ ಬಿಬಿಎಂಪಿ ಅಧಿಕಾರಿಗಳೊಂದಿಗೆ ಸ್ಪೀಕರ್‌ ಚರ್ಚಿಸಿದ್ದು, ನಾಯಿಗಳ ಆರೋಗ್ಯ, ಆಹಾರದ ವ್ಯವಸ್ಥೆ ನೋಡಿಕೊಳ್ಳಲು ಯೋಜನೆ ರೂಪಿಸಬೇಕು. ಅವುಗಳ ನಿರ್ವಹಣೆಯನ್ನು ಎನ್‌ಜಿಒ ವಹಿಸಬೇಕು ಎಂದು ಹೇಳಿದ್ದಾರೆ.

ಪ್ರಾಣಿಗಳಿಗೆ ನಮಗಿಂತ ಹೆಚ್ಚು ಬದುಕುವ ಹಕ್ಕಿದೆ. ನಾಯಿಗಳು ಗರಿಷ್ಠ 15 ವರ್ಷ ಬದುಕಬಲ್ಲವು. ನಾವು ಯೋಜಿಸಿ ಮನವಿ ಸಲ್ಲಿಸಿದ್ದೇವೆ. ಈಗ ಸರ್ಕಾರದ ಆದೇಶ ಎದುರು ನೋಡುತ್ತಿದ್ದೇವೆ ಎಂದು ಸ್ಪೀಕರ್‌ ಯು.ಟಿ.ಖಾದರ್‌ ಅವರು ಹೇಳಿದ್ದಾರೆ.

ಕಳೆದ ಫೆ. 4 ರಂದು ಕೂಡ ಸಭೆ ನಡೆಸಿದ್ದ ಸ್ಪೀಕರ್ ಯು.ಟಿ ಖಾದರ್ ಅವರು ಬೀದಿ ನಾಯಿಗಳ ಹಾವಳಿ ನಿಯಂತ್ರಣ ಮತ್ತು ಅವುಗಳ ರಕ್ಷಣೆ ಕುರಿತು ಚರ್ಚಿಸಿದ್ದರು.

Read More
Next Story