ರೈಲ್ವೆ ಭದ್ರತಾ ಪಡೆಗೆ ಮೊದಲ ಮಹಿಳಾ ಡಿಜಿ: ಐಪಿಎಸ್ ಅಧಿಕಾರಿ ಸೋನಾಲಿ ಮಿಶ್ರಾ ಅಧಿಕಾರ ಸ್ವೀಕಾರ
x

ಸೋನಾಲಿ ಮಿಶ್ರಾ

ರೈಲ್ವೆ ಭದ್ರತಾ ಪಡೆಗೆ ಮೊದಲ ಮಹಿಳಾ ಡಿಜಿ: ಐಪಿಎಸ್ ಅಧಿಕಾರಿ ಸೋನಾಲಿ ಮಿಶ್ರಾ ಅಧಿಕಾರ ಸ್ವೀಕಾರ

1993ರ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿರುವ ಸೋನಾಲಿ ಮಿಶ್ರಾ ಅವರನ್ನು, ಮನೋಜ್ ಯಾದವ್ ಅವರಿಂದ ತೆರವಾದ ಸ್ಥಾನಕ್ಕೆ ನೇಮಿಸಿ ಕೇಂದ್ರ ಸರ್ಕಾರವು ಜುಲೈ 14ರಂದು ಆದೇಶ ಹೊರಡಿಸಿತ್ತು.


ಹಿರಿಯ ಐಪಿಎಸ್ ಅಧಿಕಾರಿ ಸೋನಾಲಿ ಮಿಶ್ರಾ ಅವರು ರೈಲ್ವೆ ಭದ್ರತಾ ಪಡೆಯ (ಆರ್‌ಪಿಎಫ್) ನೂತನ ಮಹಾನಿರ್ದೇಶಕಿಯಾಗಿ (ಡಿಜಿ) ಅಧಿಕಾರ ಸ್ವೀಕರಿಸಿದ್ದಾರೆ. ಈ ಮೂಲಕ ಅವರು ಪ್ರತಿಷ್ಠಿತ ಹುದ್ದೆ ಅಲಂಕರಿಸಿದ ಮೊದಲ ಮಹಿಳಾ ಅಧಿಕಾರಿ ಎಂಬ ಐತಿಹಾಸಿಕ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

1993ರ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿರುವ ಸೋನಾಲಿ ಮಿಶ್ರಾ ಅವರನ್ನು, ಮನೋಜ್ ಯಾದವ್ ಅವರಿಂದ ತೆರವಾದ ಸ್ಥಾನಕ್ಕೆ ನೇಮಿಸಿ ಕೇಂದ್ರ ಸರ್ಕಾರವು ಜುಲೈ 14ರಂದು ಆದೇಶ ಹೊರಡಿಸಿತ್ತು. ಅವರು 2026ರ ಅಕ್ಟೋಬರ್ 31ರವರೆಗೆ ಈ ಹುದ್ದೆಯಲ್ಲಿ ಮುಂದುವರಿಯಲಿದ್ದಾರೆ.

ಆರ್‌ಪಿಎಫ್ ಮುಖ್ಯಸ್ಥರಾಗಿ ನೇಮಕಗೊಳ್ಳುವ ಮುನ್ನ, ಸೋನಾಲಿ ಮಿಶ್ರಾ ಅವರು ಮಧ್ಯಪ್ರದೇಶ ಪೊಲೀಸ್ ಇಲಾಖೆಯಲ್ಲಿ ಹೆಚ್ಚುವರಿ ಮಹಾನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದರು. ತಮ್ಮ ಸುದೀರ್ಘ ವೃತ್ತಿಜೀವನದಲ್ಲಿ ಅವರು ಸಿಬಿಐ, ಬಿಎಸ್‌ಎಫ್‌ನಂತಹ ಪ್ರಮುಖ ಸಂಸ್ಥೆಗಳಲ್ಲಿ ಹಾಗೂ ಕೊಸೊವೊದಲ್ಲಿ ನಡೆದ ವಿಶ್ವಸಂಸ್ಥೆಯ ಶಾಂತಿಪಾಲನಾ ಕಾರ್ಯಾಚರಣೆಯಲ್ಲೂ ಕಾರ್ಯನಿರ್ವಹಿಸಿದ ಅಪಾರ ಅನುಭವ ಹೊಂದಿದ್ದಾರೆ.

ಅವರ ವಿಶಿಷ್ಟ ಮತ್ತು ಗಣನೀಯ ಸೇವೆಗಾಗಿ ಅವರಿಗೆ ರಾಷ್ಟ್ರಪತಿಗಳ ಪೊಲೀಸ್ ಪದಕ ಸೇರಿದಂತೆ ಹಲವು ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.

Read More
Next Story