
ಮನೆಗಳಿಗೆ ಅಂಟಿಸಲು ಸಿದ್ದಪಡಿಸಿರುವ ಸ್ಟಿಕ್ಕರ್‌ಗಳು
ಸಾಮಾಜಿಕ- ಶೈಕ್ಷಣಿಕ ಸಮೀಕ್ಷೆ: ಮುಖ್ಯಮಂತ್ರಿಗಳ ನಿವಾಸಕ್ಕೆ ಸ್ಟಿಕ್ಕರ್ ಅಂಟಿಸುವ ಮೂಲಕ ಚಾಲನೆ
ರಾಜ್ಯದ ಪ್ರತಿಯೊಂದು ಕುಟುಂಬದ ನಿಖರವಾದ ಮಾಹಿತಿಯನ್ನು ಸಂಗ್ರಹಿಸುವ ಗುರಿ ಹೊಂದಿದೆ. ಮೊದಲ ಹಂತದಲ್ಲಿ, ಆಯೋಗದ ಸಿಬ್ಬಂದಿಯು ಪ್ರತಿ ಮನೆಗೆ ಭೇಟಿ ನೀಡಿ, ಮನೆಯ ರೆಸಿಡೆನ್ಷಿಯಲ್ ಆರ್.ಆರ್. ಸಂಖ್ಯೆಯನ್ನು ಆಧರಿಸಿ ಒಂದು 'ಹೌಸ್‌ಹೋಲ್ಡ್ ಐಡಿ'ಯನ್ನು ಜನರೇಟ್ ಮಾಡುತ್ತಾರೆ.
ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ರಾಜ್ಯಾದ್ಯಂತ ಎಲ್ಲಾ ಜನರ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳನ್ನು ಅರಿಯಲು ಬೃಹತ್ ಸಮೀಕ್ಷಾ ಕಾರ್ಯಕ್ಕೆ ಚಾಲನೆ ನೀಡಿದೆ. ಇದರ ಮೊದಲ ಹಂತವಾಗಿ, 'ಮನೆ ಪಟ್ಟಿ' (House Listing) ಮಾಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಇದಕ್ಕೆ ಸಾಂಕೇತಿಕವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ 'ಕಾವೇರಿ' ನಿವಾಸಕ್ಕೆ ಆಯೋಗದ ಸಿಬ್ಬಂದಿ ಸ್ಟಿಕ್ಕರ್ ಅಂಟಿಸುವ ಮೂಲಕ ಚಾಲನೆ ನೀಡಿದರು.
ಈ ಸಮೀಕ್ಷೆಯು ರಾಜ್ಯದ ಪ್ರತಿಯೊಂದು ಕುಟುಂಬದ ನಿಖರವಾದ ಮಾಹಿತಿಯನ್ನು ಸಂಗ್ರಹಿಸುವ ಗುರಿ ಹೊಂದಿದೆ. ಮೊದಲ ಹಂತದಲ್ಲಿ, ಆಯೋಗದ ಸಿಬ್ಬಂದಿಯು ಪ್ರತಿ ಮನೆಗೆ ಭೇಟಿ ನೀಡಿ, ಮನೆಯ ರೆಸಿಡೆನ್ಷಿಯಲ್ ಆರ್.ಆರ್. ಸಂಖ್ಯೆಯನ್ನು ಆಧರಿಸಿ ಒಂದು 'ಹೌಸ್‌ಹೋಲ್ಡ್ ಐಡಿ'ಯನ್ನು ಜನರೇಟ್ ಮಾಡುತ್ತಾರೆ. ಈ ವಿಶಿಷ್ಟ ಐಡಿಯು ಮುಂದಿನ ಹಂತದ ಸಮೀಕ್ಷೆಗೆ ಆಧಾರವಾಗಿರುತ್ತದೆ.
ಮನೆ ಪಟ್ಟಿ ಕಾರ್ಯ ಮುಗಿದ ನಂತರ, ಜನರೇಟ್ ಆದ ಹೌಸ್‌ಹೋಲ್ಡ್ ಐಡಿಗಳನ್ನು ಬಳಸಿ, ಆಯೋಗವು 'ಎನ್ಯುಮರೇಷನ್ ಬ್ಲಾಕ್'ಗಳನ್ನು (ಗಣತಿ ಬ್ಲಾಕ್‌ಗಳು) ರಚಿಸಲಿದೆ. ಈ ಪ್ರಕ್ರಿಯೆಯು ಸಮೀಕ್ಷೆಯನ್ನು ವ್ಯವಸ್ಥಿತವಾಗಿ ನಡೆಸಲು ಸಹಕಾರಿಯಾಗಿದೆ.
ನಂತರದ ಹಂತದಲ್ಲಿ, ಪ್ರತಿ ಗಣತಿ ಬ್ಲಾಕ್‌ಗೆ ಒಬ್ಬ ಶಿಕ್ಷಕರನ್ನು ನೇಮಿಸಲಾಗುವುದು. ಈ ಶಿಕ್ಷಕರು ಸೆಪ್ಟೆಂಬರ್ 22 ರಿಂದ ಮನೆ ಮನೆಗೆ ಭೇಟಿ ನೀಡಿ, ನಿಗದಿತ ಪ್ರಶ್ನಾವಳಿಗಳ ಮೂಲಕ ಕುಟುಂಬಗಳ ಸಾಮಾಜಿಕ ಮತ್ತು ಶೈಕ್ಷಣಿಕ ವಿವರಗಳನ್ನು ಸಂಗ್ರಹಿಸಲಿದ್ದಾರೆ.