ಧರ್ಮಸ್ಥಳ ಪ್ರಕರಣ | ಮಹಿಳೆಯ ಕೊಲೆ ಪ್ರಕರಣ ತನಿಖೆಗೆ ಪೊಲೀಸರ ನಿರ್ಲಕ್ಷ್ಯ ; ಸಾಮಾಜಿಕ ಕಾರ್ಯಕರ್ತ ಆರೋಪ
x

ಧರ್ಮಸ್ಥಳ ಪ್ರಕರಣ | ಮಹಿಳೆಯ ಕೊಲೆ ಪ್ರಕರಣ ತನಿಖೆಗೆ ಪೊಲೀಸರ ನಿರ್ಲಕ್ಷ್ಯ ; ಸಾಮಾಜಿಕ ಕಾರ್ಯಕರ್ತ ಆರೋಪ

ಮಹಿಳೆಯ ಕೊಲೆ ಪ್ರಕರಣವನ್ನು ತನಿಖೆ ಮಾಡಲು ಅಧಿಕಾರಿಗಳು ವಿಫಲರಾಗಿದ್ದು, ಪ್ರಕರಣ ಮುಚ್ಚಿ ಹಾಕಲು ಪ್ರಯತ್ನ ಮಾಡಲಾಗಿದೆ. ಇದು ಗಂಭೀರ ಸಂಗತಿ ಎಂದು ಜಯಂತ್‌ ಟಿ. ಆರೋಪಿಸಿದ್ದಾರೆ.


ಧರ್ಮಸ್ಥಳದ ಲಾಡ್ಜ್‌ ಒಂದರಲ್ಲಿ ನಡೆದಿದ್ದ ಮಹಿಳೆಯ ಕೊಲೆ ಪ್ರಕರಣವನ್ನು ಪೊಲೀಸರು ತನಿಖೆ ನಡೆಸದೇ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಜಯಂತಿ ಟಿ. ಗಂಭೀರ ಆರೋಪ ಮಾಡಿದ್ದಾರೆ.

2010 ಏಪ್ರಿಲ್‌ ತಿಂಗಳಲ್ಲಿ ಲಾಡ್ಜ್‌ ಒಂದರಲ್ಲಿ ಸುಮಾರು 40 ವರ್ಷದ ಮಹಿಳೆಯ ಶವ ಪತ್ತೆಯಾಗಿತ್ತು. ಅದನ್ನು ಧರ್ಮಸ್ಥಳ ಗ್ರಾಮ ಪಂಚಾಯಿತಿ ವತಿಯಿಂದ ನಿರ್ಜನ ಪ್ರದೇಶದಲ್ಲಿ ಹೂಳಲಾಗಿದೆ. ಈ ಕುರಿತು ಕೊಲೆ ಮತ್ತು ಸಾಕ್ಷಿ ನಾಶ ಪ್ರಕರಣ ದಾಖಲಾಗಿದೆ ಎಂಬುದಾಗಿ ಪೊಲೀಸರೇ ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಸಿದ ಅರ್ಜಿಗೆ ದಾಖಲೆ ನೀಡಿದ್ದಾರೆ ಎಂದು ಜಯಂತ್ ತಿಳಿಸಿದ್ದಾರೆ.

ಪ್ರಕರಣವನ್ನು ತನಿಖೆ ಮಾಡಲು ಅಧಿಕಾರಿಗಳು ವಿಫಲರಾಗಿದ್ದು, ಮಹಿಳೆಯ ಕೊಲೆಯನ್ನು ಮುಚ್ಚಿ ಹಾಕಲು ಪ್ರಯತ್ನ ಮಾಡಲಾಗಿದೆ. ಇದು ಗಂಭೀರ ಸಂಗತಿ ಎಂದು ಆರೋಪಿಸಿದ್ದಾರೆ.

ಮಹಿಳೆಯ ಕೊಲೆ ಕುರಿತು ಪ್ರಶ್ನೆ ಎತ್ತಿದ ಸ್ಥಳೀಯರೊಬ್ಬರಿಗೆ ಪಂಚಾಯಿತಿ ಮಾಜಿ ಅಧ್ಯಕ್ಷರು ಬೆದರಿಕೆ ಹಾಕಿದ್ದಾರೆ. ಪಂಚಾಯಿತಿಯ ಪಾತ್ರ ಸಂಶಯಾಸ್ಪದವಾಗಿದೆ ಎಂದು ಜಯಂತ್ ಟಿ. ಹೇಳಿದ್ದಾರೆ.

ಈ ಪ್ರಕರಣದ ಕುರಿತು ತನಿಖೆ ನಡೆಸುವಂತೆ ವಿಶೇಷ ತನಿಖಾ ತಂಡಕ್ಕೆ ದೂರು ನೀಡಿದ್ದು, ಅಧಿಕಾರಿಗಳು ಸೂಕ್ತ ತನಿಖೆ ನಡೆಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದ್ದಾರೆ. ಧರ್ಮಸ್ಥಳದ ಬಗ್ಗೆ ಅಪಪ್ರಚಾರ ನಡೆಯುತ್ತಿರುವ ಕುರಿತು ಆರೋಪಿಸಿ ಬಿಜೆಪಿ ನಾಯಕರು ಅಭಿಯಾನ ಕೈಗೊಂಡಿರುವ ಬೆನ್ನಲ್ಲೇ ಇಂತಹದ್ದೊಂದು ಗಂಭೀರ ಆರೋಪ ಕೇಳಿ ಬಂದಿರುವುದು ಇನ್ನಷ್ಟು ಅನುಮಾನಗಳಿಗೆ ಕಾರಣವಾಗಿದೆ.

ಈ ಹಿಂದೆ ಜಯಂತ್‌ ಅವರು ಎಸ್‌ಐಟಿ ಅಧಿಕಾರಿಗಳನ್ನು ಭೇಟಿ ಮಾಡಿ, 15ವರ್ಷದ ಬಾಲಕಿಯ ಶವವನ್ನು ಯಾವುದೇ ಮರಣೋತ್ತರ ಪರೀಕ್ಷೆ ನಡೆಸದೇ ಹೂತು ಹಾಕಿರುವುದನ್ನು ನಾನು ನೋಡಿದ್ದೆ. ಈ ಬಗ್ಗೆ ಸಾಕ್ಷಿ ಒದಗಿಸುವುದಾಗಿ ಹೇಳಿಕೆ ನೀಡಿದ್ದರು.

Read More
Next Story