ಬೆಂಗಳೂರು-ತಿರುಪತಿ ಹೆದ್ದಾರಿಯಲ್ಲಿ ಸ್ಕೈವಾಕ್ ಕುಸಿತ: 3 ಕಿ.ಮೀ. ಟ್ರಾಫಿಕ್ ಜಾಮ್
x

ಬೆಂಗಳೂರು-ತಿರುಪತಿ ಹೆದ್ದಾರಿಯಲ್ಲಿ ಸ್ಕೈವಾಕ್ ಕುಸಿತ: 3 ಕಿ.ಮೀ. ಟ್ರಾಫಿಕ್ ಜಾಮ್

ಕೊಂಡರಾಜನಹಳ್ಳಿ ಆಂಜನೇಯ ದೇವಸ್ಥಾನದ ಬಳಿ ಈ ಘಟನೆ ನಡೆದಿದೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ಟ್ರಕ್ ಸ್ಕೈವಾಕ್‌ಗೆ ಗುದ್ದಿದ ರಭಸಕ್ಕೆ ಅದು ಮಧ್ಯದಲ್ಲಿ ತುಂಡಾಗಿ ವಾಹನದ ಮೇಲೆಯೇ ಬಿದ್ದಿದೆ.


ನಗರದ ಹೊರವಲಯದಲ್ಲಿರುವ ಬೆಂಗಳೂರು-ತಿರುಪತಿ ರಾಷ್ಟ್ರೀಯ ಹೆದ್ದಾರಿ-75ರಲ್ಲಿ ಶನಿವಾರ ರಾತ್ರಿ ಸ್ಕೈವಾಕ್ ಕುಸಿದು ಬಿದ್ದಿದೆ. ಜಾರ್ಖಂಡ್ ಮೂಲದ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ, ಆದರೆ ಸುಮಾರು 3 ಕಿಲೋಮೀಟರ್‌ವರೆಗೂ ತೀವ್ರ ಸಂಚಾರ ದಟ್ಟಣೆ ಉಂಟಾಗಿತ್ತು.

ಕೊಂಡರಾಜನಹಳ್ಳಿ ಆಂಜನೇಯ ದೇವಸ್ಥಾನದ ಬಳಿ ಈ ಘಟನೆ ನಡೆದಿದೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ಟ್ರಕ್ ಸ್ಕೈವಾಕ್‌ಗೆ ಗುದ್ದಿದ ರಭಸಕ್ಕೆ ಅದು ಮಧ್ಯದಲ್ಲಿ ತುಂಡಾಗಿ ವಾಹನದ ಮೇಲೆಯೇ ಬಿದ್ದಿದೆ. ಘಟನೆಯಲ್ಲಿ ಯಾರಿಗೂ ಅಪಾಯವಾಗಿಲ್ಲವಾದರೂ, ಸ್ಥಳೀಯರು ಆಕ್ರೋಶಗೊಂಡು ಚಾಲಕನಿಗೆ ಥಳಿಸಲು ಮುಂದಾಗಿದ್ದರು ಎಂದು ತಿಳಿದುಬಂದಿದೆ.

ಈ ಅಪಘಾತದಿಂದಾಗಿ ಬೆಂಗಳೂರು, ತಮಿಳುನಾಡು ಹಾಗೂ ಆಂಧ್ರಪ್ರದೇಶಕ್ಕೆ ತೆರಳುವ ಪ್ರಯಾಣಿಕರು ಸುಮಾರು ಎರಡು ಗಂಟೆಗಳ ಕಾಲ ಸಂಚಾರ ದಟ್ಟಣೆಯಲ್ಲಿ ಸಿಲುಕಿ ಪರದಾಡಿದರು. ಸ್ಥಳದಲ್ಲಿ ತೆರವು ಕಾರ್ಯಾಚರಣೆ ಕೈಗೊಳ್ಳಲಾಗಿದ್ದು, ವಾಹನ ಸಂಚಾರವನ್ನು ಸುಗಮಗೊಳಿಸಲು ಕ್ರಮ ತೆಗೆದುಕೊಳ್ಳಲಾಗಿದೆ.

Read More
Next Story