Naxal Surrender |  ಇನ್ನು ಕರ್ನಾಟಕ ನಕ್ಸಲ್‌ ಮುಕ್ತ ರಾಜ್ಯ?
x

Naxal Surrender | ಇನ್ನು ಕರ್ನಾಟಕ ನಕ್ಸಲ್‌ ಮುಕ್ತ ರಾಜ್ಯ?

ನಕ್ಸಲ್ ಮುಕ್ತ ಕರ್ನಾಟಕದ ಘೋಷಣೆಯ ಹಿನ್ನೆಲೆಯಲ್ಲಿ ಆರು ಮಂದಿ ನಕ್ಸಲೀಯರ ಶರಣಾಗತಿಯ ಪ್ರಕ್ರಿಯೆಗಳು ಚುರುಕಾಗಿದ್ದು ಬುಧವಾರ ಬೆಳಿಗ್ಗೆ ಚಿಕ್ಕಮಗಳೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಶರಣಾಗತಿ ಪ್ರಕ್ರಿಯೆ ಪೂರ್ಣಗೊಳ್ಳಲಿದೆ


ನಕ್ಸಲ್ ಮುಕ್ತ ಕರ್ನಾಟಕದ ಘೋಷಣೆಯ ಹಿನ್ನೆಲೆಯಲ್ಲಿ ಆರು ಮಂದಿ ನಕ್ಸಲೀಯರ ಶರಣಾಗತಿಯ ಪ್ರಕ್ರಿಯೆಗಳು ಚುರುಕಾಗಿದ್ದು ಬುಧವಾರ ಬೆಳಿಗ್ಗೆ ಚಿಕ್ಕಮಗಳೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಶರಣಾಗತಿ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎನ್ನಲಾಗಿದೆ.

ನಕ್ಸಲ್ ನಾಯಕ ವಿಕ್ರಂ ಗೌಡ ಎನ್ಕೌಂಟರ್ ಬಳಿಕ ರಾಜ್ಯದಲ್ಲಿ ಬೆರಳೆಣಿಕೆಯ ಸಂಖ್ಯೆಯಲ್ಲಿದ್ದ ನಕ್ಸಲರನ್ನು ಶರಣಾಗತಿ ಮಾಡಿಸಲು ನಕ್ಸಲ್ ಶರಣಾಗತಿ ಮತ್ತು ಪುನರ್ವಸತಿ ಸಮಿತಿ ಪ್ರಯತ್ನಿಸಿತ್ತು.

ಇದೀಗ ನಕ್ಸಲೀಯರಾದ ಮಂಡಗಾರು ಲತಾ, ಸುಂದರಿ ಕುತ್ಲೂರು, ವನಜಾಕ್ಷಿ ಬಾಳೆಹೊಳೆ, ಮಾರೆಪ್ಪ ಅರೋಲಿ ಅಲಿಯಾಸ್ ಜಯಣ್ಣ, ಕೆ ವಸಂತ, ಟಿ ಎನ್ ಜೀಶ ಅವರ ತಂಡ ಶರಣಾಗತಿಗೆ ಒಪ್ಪಿದ್ದು, ಬುಧವಾರ ಬೆಳಿಗ್ಗೆ ಶರಣಾಗಲಿದ್ದಾರೆ ಎನ್ನಲಾಗಿದೆ.

ನಕ್ಸಲ್ ಶರಣಾಗತಿ ಮತ್ತು ಪುನರ್ವಸತಿ ಸಮಿತಿಯ ಡಾ ಬಂಜಗೆರೆ ಜಯಪ್ರಕಾಶ್, ಕೆ ಪಿ ಶ್ರೀಪಾಲ್, ಪಾರ್ವತೀಶ್ ಬಿಳಿದಾಳೆ ಅವರುಗಳು ಸರ್ಕಾರ ಮತ್ತು ನಕ್ಸಲರ ತಂಡದ ನಡುವೆ ಮಧ್ಯವರ್ತಿಗಳಾಗಿ ಶರಣಾಗತಿಗೆ ಪ್ರಯತ್ನಿಸಿದ್ದು, ಚಿಕ್ಕಮಗಳೂರಿನಲ್ಲಿ ಸಮಿತಿ ಸದಸ್ಯರು ಈಗಾಗಲೇ ಸಿದ್ಧತೆ ಮಾಡಿಕೊಂಡಿದ್ದಾರೆ.

ಸರ್ಕಾರಕ್ಕೆ ಹಲವು ಷರತ್ತುಗಳನ್ನು ಹಾಕಿ ನಕ್ಸಲ್ ತಂಡ ಸಮಿತಿಯ ಮೂಲಕ ಪತ್ರ ಬರೆದಿತ್ತು. ಸಮಿತಿ, ತಮ್ಮ ವಿರುದ್ಧದ ಪ್ರಕರಣಗಳ ಶೀಘ್ರ ವೀಲೇವಾರಿ, ಪುನವರ್ಸತಿ ಪ್ಯಾಕೇಜ್, ನಾಗರಿಕ ಹೋರಾಟದ ಅವಕಾಶ ಸೇರಿದಂತೆ ಹಲವು ಬೇಡಿಕೆಗಳನ್ನು ಒಳಗೊಂಡ ನಕ್ಸಲರ ಬೇಡಿಕೆಗಳ ಕುರಿತು ಸರ್ಕಾರದೊಂದಿಗೆ ಚರ್ಚಿಸಿ, ಅಂತಿಮವಾಗಿ ಎರಡೂ ಕಡೆ ಸಹಮತ ಮೂಡಿದೆ. ಆ ಹಿನ್ನೆಲೆಯಲ್ಲಿ ಬುಧವಾರ ಬೆಳಿಗ್ಗೆ ಶರಣಾಗತಿ ಪ್ರಕ್ರಿಯೆ ಜರುಗಲಿದೆ ಎನ್ನಲಾಗಿದೆ.

Read More
Next Story