
ನುಹ್ ಹಿಂಸಾಚಾರ: ಆರು ತಿಂಗಳ ಬಳಿಕ ಆರೋಪಿಗಳ ವಿರುದ್ಧ ಯುಎಪಿಎ ದಾಖಲಿಸಿದ ಪೊಲೀಸರು
ಕಳೆದ ವರ್ಷ ಜುಲೈ 31 ರಂದು ನುಹ್‌ನಲ್ಲಿ ಭುಗಿಲೆದ್ದ ಘರ್ಷಣೆಯಲ್ಲಿ ಆರು ಜನರು ಸಾವನ್ನಪ್ಪಿದರು. ನುಹ್ ಘರ್ಷಣೆಗೆ ಸಂಬಂಧಿಸಿದ ಮೂರು ಪ್ರಕರಣದ ಆರೋಪಿಗಳ ವಿರುದ್ಧ ಯುಎಪಿಎ ದಾಖಲಿಸಲಾಗಿದೆ.
ನುಹ್: ಆರು ತಿಂಗಳ ಹಿಂದೆ ಇಬ್ಬರು ಗೃಹರಕ್ಷಕರು ಮತ್ತು ಬಜರಂಗದಳದ ಸದಸ್ಯನ ಹತ್ಯೆ ಹಾಗೂ ಸೈಬರ್ ಪೊಲೀಸ್ ಠಾಣೆಯ ಮೇಲೆ ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಮೂರು ಪ್ರಕರಣಗಳಲ್ಲಿ ಆರೋಪಿಗಳ ವಿರುದ್ಧ ಯುಎಪಿಎ ಅಡಿಯಲ್ಲಿ ಆರೋಪಗಳನ್ನು ಪೊಲೀಸರು ಹೊರಿಸಿದ್ದಾರೆ.
ಪ್ರಕರಣಗಳಿಗೆ ಸಂಬಂಧಿಸಿದ ಆರಂಭಿಕ ಎಫ್ ಐ ಆರ್ ಗಳಲ್ಲಿ ಯುಎಪಿಎ ಆರೋಪಗಳನ್ನು ಸೇರಿಸಲಾಗಿಲ್ಲವಾದರೂ, ಆರೋಪಿಗಳು ಸಲ್ಲಿಸಿದ ಜಾಮೀನು ಅರ್ಜಿಯನ್ನು ವಿರೋಧಿಸಲು ಇವುಗಳನ್ನು ಸೇರಿಸಲಾಗಿದೆ ಎಂದು ನ್ಯಾಯಾಲಯದ ದಾಖಲೆಗಳು ತೋರಿಸಿವೆ.
ಕಳೆದ ವರ್ಷ ಜುಲೈ 31 ರಂದು ವಿಎಚ್‌ಪಿ ಮೆರವಣಿಗೆಯ ವೇಳೆ ನಡೆದ ಗುಂಪು ದಾಳಿಯ ಬಳಿಕ ಗುರುಗ್ರಾಮ್, ನುಹ್ ಸೇರಿದಂತೆ ಸಮೀಪದ ಪ್ರದೇಶಗಳಿಗೆ ಗಲಭೆ ಹರಡಿದ್ದು, ಘರ್ಷನೆಯಲ್ಲಿ ಇಬ್ಬರು ಗೃಹ ರಕ್ಷಕರು ಮತ್ತು ಧರ್ಮಗುರು ಸೇರಿದಂತೆ ಆರು ಜನರು ಸಾವನ್ನಪ್ಪಿದರು.
ಕೆಲವು ಆರೋಪಿಗಳನ್ನು ಪ್ರತಿನಿಧಿಸುವ ವಕೀಲ ತಾಹಿರ್ ಹುಸೇನ್ ರೂಪಾರಿಯಾ ಅವರು ನ್ಯಾಯಾಲಯಕ್ಕೆ ಜಾಮೀನು ಅರ್ಜಿಯನ್ನು ಸಲ್ಲಿಸಿದಾಗ ಮೂರು ಎಫ್ ಐ ಆರ್ ಗಳಲ್ಲಿ ಯುಎಪಿಎ ವಿಧಿಸಿರುವುದು ಬೆಳಕಿಗೆ ಬಂದಿದೆ.
ಜಾಮೀನು ಅರ್ಜಿ ಸಲ್ಲಿಸಿದ ನಂತರ, ಮೂರು ಎಫ್ ಐ ಆರ್ ಗಳಲ್ಲಿ ಹೆಸರಿಸಲಾದ ಇಬ್ಬರು ಆರೋಪಿಗಳ ಮೇಲೆ ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆ (ಯುಎಪಿಎ) ಅಡಿಯಲ್ಲಿ ಆರೋಪಗಳನ್ನು ವಿಧಿಸಲಾಗಿದೆ ಎಂಬ ಮಾಹಿತಿಯನ್ನು ನ್ಯಾಯಾಲಯದಿಂದ ಸ್ವೀಕರಿಸಲಾಗಿದೆ ಎಂದು ರೂಪಾರಿಯಾ ತಿಳಿಸಿದ್ದಾರೆ.
ನುಹ್ ಹಿಂಸಾಚಾರದ ಘಟನೆಯಲ್ಲಿ ಆಗಸ್ಟ್ 1 ರಂದು ಪೊಲೀಸ್ ಇನ್ಸ್‌ಪೆಕ್ಟರ್ ನೀಡಿದ ದೂರಿನ ಆಧಾರದ ಮೇಲೆ ಮೊದಲ ಎಫ್ ಐಆರ್ ಅನ್ನು ದಾಖಲಿಸಲಾಯಿತು. ಗುಂಪು ದಾಳಿ ಮತ್ತು ಕಲ್ಲು ತೂರಾಟವು ಹೋಮ್ ಗಾರ್ಡ್ ಗಳಾದ ನೀರಜ್ ಮತ್ತು ಗುರ್ಸೇವ್ ಅವರ ಸಾವಿಗೆ ಕಾರಣವಾಯಿತು ಎಂದು ಅವರು ಹೇಳಿದ್ದರು.
ಆರೋಪಿಗಳ ಮೇಲೆ ಗಲಭೆ, ಕಾನೂನುಬಾಹಿರ ಸಭೆ, ಹಲ್ಲೆ, ಸಾರ್ವಜನಿಕ ಸೇವಕನಿಗೆ ತಡೆ, ಕೊಲೆ ಮತ್ತು ಇತರರ ಅಪರಾಧ ಪಿತೂರಿಯ ಆರೋಪದಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಆಗಸ್ಟ್ 1 ರಂದು ನುಹ್ ಸದರ್ ಪೊಲೀಸ್ ಠಾಣೆಯಲ್ಲಿ ಮತ್ತೊಂದು ಎಫ್ ಐ ಆರ್ ದಾಖಲಾಗಿದ್ದು, ಪಾಣಿಪತ್ ಮೂಲದ ವ್ಯಕ್ತಿಯೊಬ್ಬರು, ತಮ್ಮ ಸೋದರಸಂಬಂಧಿ ಅಭಿಷೇಕ್ ನನ್ನು 10 ಜನರ ಗುಂಪು ಗುಂಡಿಕ್ಕಿ ಕೊಂದಿದ್ದಾರೆ ಎಂದು ಆರೋಪಿಸಿದ್ದರು.
ಸೈಬರ್ ಪೊಲೀಸ್ ಠಾಣೆಯ ಮೇಲಿನ ದಾಳಿಗೆ ಸಂಬಂಧಿಸಿದಂತೆ ಮತ್ತೊಂದು ಎಫ್‌ಐಆರ್ ದಾಖಲಾಗಿದೆ. ಉದ್ರಿಕ್ತ ಜನಸಮೂಹವು ಪೊಲೀಸ್ ಠಾಣೆಯನ್ನು ಸುತ್ತುವರೆದು ಕಲ್ಲು ಎಸೆಯಲು ಪ್ರಾರಂಭಿಸಿದ್ದರು. ಈ ವೇಳೆ ಠಾಣಾ ಉಸ್ತುವಾರಿ ಸೇರಿ ಇತರ ಎಂಟು ಪೊಲೀಸ್ ಅಧಿಕಾರಿಗಳು ಠಾಣೆಯಲ್ಲೇಕಳೆದ ವರ್ಷ ಜುಲೈ 31 ರಂದು ನುಹ್‌ನಲ್ಲಿ ಭುಗಿಲೆದ್ದ ಘರ್ಷಣೆಯಲ್ಲಿ ಆರು ಜನರು ಸಾವನ್ನಪ್ಪಿದರು. ಗಲಭೆಕೋರರು ʼಅವರನ್ನು ಜೀವಂತವಾಗಿ ಸುಡುವʼ ಉದ್ದೇಶವನ್ನು ಗಟ್ಟಿಯಾಗಿ ವ್ಯಕ್ತಪಡಿಸಿದ್ದರು ಎಂದು ಎಫ್ ಐ ಆರ್ ನಲ್ಲಿ ಆರೋಪಿಸಲಾಗಿದೆ.