ಗುಡ್‌ನ್ಯೂಸ್‌- ಸ್ವಚ್ಛ ಗಾಳಿ ಇರುವ ಟಾಪ್‌ 10 ನಗರಗಳಲ್ಲಿ 6 ಕರ್ನಾಟಕದಲ್ಲೇ ಇವೆ!
x
ಸಾಂದರ್ಭಿಕ ಚಿತ್ರ

ಗುಡ್‌ನ್ಯೂಸ್‌- ಸ್ವಚ್ಛ ಗಾಳಿ ಇರುವ ಟಾಪ್‌ 10 ನಗರಗಳಲ್ಲಿ 6 ಕರ್ನಾಟಕದಲ್ಲೇ ಇವೆ!

ಸೆಂಟರ್‌ ಫಾರ್‌ ಕ್ಲೀನ್‌ ಏರ್‌ ಸಂಸ್ಥೆ ರಾಜ್ಯದ ಜನರಿಗೆ ಸಿಹಿಸುದ್ದಿ ನೀಡಿದ್ದು, ದೇಶದಲ್ಲೇ ಅತ್ಯಂತ ಹೆಚ್ಚು ಸ್ವಚ್ಛಗಾಳಿ ಹೊಂದಿರುವ ಪಟ್ಟಿಯಲ್ಲಿ ರಾಜ್ಯದ ಆರು ನಗರಗಳನ್ನು ಗುರುತಿಸಿದೆ.


Click the Play button to hear this message in audio format

ಎಲ್ಲೆಡೆ ಮಾಲಿನ್ಯ, ಉಸಿರಾಡಲು ಸ್ವಚ್ಛ ಗಾಳಿ ಸಿಗುತ್ತಿಲ್ಲ.. ಇದಕ್ಕೆ ಪರಿಹಾರ ಕ್ರಮಗಳು ಬೇಕೇ ಬೇಕು ಎಂದು ರಾಜ್ಯ ಸೇರಿದಂತೆ ದೇಶದ ವಿವಿಧೆಡೆ ಪರಿಸರವಾದಿಗಳು ಹಾಗೂ ಸಾರ್ವಜನಿಕರು ಹೋರಾಟಗಳನ್ನು ನಡೆಸುತ್ತಿರುವ ನಡುವೆಯೇ ರಾಜ್ಯದ ಜನತೆಗೆ ಸಿಹಿ ಸುದ್ದಿಯೊಂದು ಸಿಕ್ಕಿದೆ. ಸೆಂಟರ್‌ ಫಾರ್‌ ಕ್ಲೀನ್‌ ಏರ್‌ ಸಂಸ್ಥೆ ವರದಿಯೊಂದನ್ನು ಬಿಡುಗಡೆ ಮಾಡಿದ್ದು, ದೇಶದಲ್ಲೇ ಅತ್ಯಂತ ಹೆಚ್ಚು ಸ್ವಚ್ಛಗಾಳಿ ಹೊಂದಿರುವ ಹತ್ತು ನಗರಗಳ ಪೈಕಿ ರಾಜ್ಯದ ಆರು ನಗರಗಳನ್ನು ಗುರುತಿಸಿದೆ.

ದೇಶದ 225 ನಗರಗಳನ್ನು ಸಮೀಕ್ಷೆಗೆ ಒಳಪಡಿಸಲಾಗಿದ್ದು ಅದರಲ್ಲಿ 114 ನಗರಗಳು ಸ್ವಚ್ಛ ಗಾಳಿ ಹೊಂದಿವೆ. ಮೇಘಾಲಯದ ಶಿಲ್ಲಾಂಗ್‌ ಅತ್ಯಂತ ಸ್ವಚ್ಛನಗರಿ ಎನ್ನುವ ಖ್ಯಾತಿಯೊಂದಿಗೆ ದೇಶದಲ್ಲೇ ಪ್ರಥಮ ಸ್ಥಾನ ಪಡೆದಿದ್ದು, ಸಿಕ್ಕಿಂನ ಗ್ಯಾಂಗ್ಟಕ್‌ ಎರಡನೇ ಸ್ಥಾನ ಹಾಗೂ ತಮಿಳುನಾಡಿನ ಪಾಲ್ಕಲೈಪೆರೂರ್‌ ಮೂರನೇ ಸ್ಥಾನ ಪಡೆದಿದೆ.

ರಾಜ್ಯದ ಆರು ನಗರಗಳಿಗೆ ಸ್ಥಾನ

ಸೆಂಟರ್‌ ಫಾರ್‌ ಕ್ಲೀನ್‌ ಏರ್‌ ಸಂಸ್ಥೆಯ ವರದಿಯ ಪ್ರಕಾರ ದೇಶದಲ್ಲೇ ನಾಲ್ಕನೇ ಸ್ಥಾನ ಹಾಗೂ ರಾಜ್ಯದಲ್ಲಿ ಕೊಪ್ಪಳ ಮೊದಲ ಸ್ಥಾನದಲ್ಲಿದೆ. ಐದನೇ ಸ್ಥಾನದಲ್ಲಿ ಚಾಮರಾಜನಗರ, ಆರನೇ ಸ್ಥಾನದಲ್ಲಿ ಶಿವಮೊಗ್ಗ, ಎಂಟು, ಒಂಬತ್ತು ಹಾಗೂ ಹತ್ತನೇ ಸ್ಥಾನದಲ್ಲಿ ಕ್ರಮವಾಗಿ ಗದಗ, ಮೈಸೂರು ಹಾಗೂ ಬಾಗಲಕೋಟೆ ಸ್ಥಾನ ಪಡೆದಿವೆ.

ಗಾಜಿಯಾಬಾದ್‌ ಅತ್ಯಂತ ಕಳಪೆ ನಗರ

ಉತ್ತರ ಪ್ರದೇಶದ ಗಾಜಿಯಾಬಾದ್‌ ನಗರ ದೇಶದ ಅತ್ಯಂತ ಕಲುಷಿತ ನಗರ ಎಂಬ ಅಪಕೀರ್ತಿಗೆ ಒಳಗಾಗಿದೆ. ಇನ್ನುಳಿದಂತೆ ನೋಯ್ಡಾ, ಬಹಾದ್ದೂರ್‌ಗಡ, ದೆಹಲಿ, ಹಾಪುರ್‌, ಗ್ರೇಟರ್‌ ನೋಯ್ಡಾ,ಬಾಘಪತ್‌, ಸೋನಿಪತ್‌, ಮೇರಠ್‌, ರೋಹ್ಟಕ್‌ ಕಳಪೆ ನಗರಿಗಳು ಎಂಬ ಹಣೆಪಟ್ಟಿ ಪಡೆದಿವೆ.

ಏನಿದು ಸೆಂಟರ್‌ ಫಾರ್‌ ಕ್ಲೀನ್‌ ಏರ್‌ ಸಂಸ್ಥೆ?

ಇದು ಸಾಮಾನ್ಯವಾಗಿ ಕ್ಲೀನ್‌ ಏರ್‌ ಅಂಡ್ ಎನರ್ಜಿ ರಿಸರ್ಚ್ ಸಂಸ್ಥೆಯೊಂದಿಗೆ ಕೆಲಸ ನಿರ್ವಹಿಸುತ್ತದೆ. 'ಸ್ವಚ್ಛ ನಗರಿ'ಯನ್ನು ಸಾಧಿಸಲು ಭಾರತ ಸರ್ಕಾರದ ರಾಷ್ಟ್ರೀಯ ಸ್ವಚ್ಛ ವಾಯು ಕಾರ್ಯಕ್ರಮದ ಬಗ್ಗೆ ನಿರ್ದಿಷ್ಟ ಶಿಫಾರಸುಗಳನ್ನು ಮತ್ತು ಮೌಲ್ಯಮಾಪನ ವರದಿಗಳನ್ನು ನೀಡುವ ಸಂಸ್ಥೆಯಾಗಿದೆ.

Read More
Next Story