
Karnataka Budget 2025 | ಸಿದ್ದರಾಮಯ್ಯ ದಾಖಲೆಯ ಬಜೆಟ್; ಮಹತ್ವದ ಘೋಷಣೆಗಳು ಏನು?
ಸಿಎಂ ಸಿದ್ದರಾಮಯ್ಯ ಅವರು ಮಂಡಿಸಿದ 16ನೇ ದಾಖಲೆಯ ಬಜೆಟ್‌ನಲ್ಲಿ ಹಲವು ಮಹತ್ವದ ಘೋಷಣೆಗಳನ್ನು ಮಾಡಿದ್ದಾರೆ. ಶಿಕ್ಷಣ, ಮೂಲಸೌಕರ್ಯ, ಚಿತ್ರೋದ್ಯಮ ಸೇರಿದಂತೆ ಹಲವು ಕ್ಷೇತ್ರಗಳಿಗೆ ಸಂಬಂಧಿಸಿದ ಘೋಷಣೆಗಳು ಇಲ್ಲಿವೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2025-26ನೇ ಸಾಲಿನ ಬಜೆಟ್‌ನಲ್ಲಿ ಹಲವು ಮಹತ್ವದ ಘೋಷಣೆಗಳನ್ನು ಮಾಡಿದ್ದಾರೆ. ಗ್ಯಾರೆಂಟಿ ಯೋಜನೆಗಳಿಗೆ ಅನುದಾನ ಹಂಚಿಕೆ ಹೊರತಾಗಿಯೂ ಸಿಎಂ ಘೋಷಣೆಯ ಪ್ರಮುಖ ಅಂಶಗಳು ಇಂತಿವೆ.
ಬಜೆಟ್ ಪ್ರಮುಖಾಂಶಗಳು
• ಅಜೀಂ ಪ್ರೇಮ್‌ಜೀ ಫೌಂಡೇಷನ್ ಸಹಯೋಗದಲ್ಲಿ ಶಾಲಾ ಮಕ್ಕಳಿಗೆ ವಾರದಲ್ಲಿ ಆರು ದಿನ ಮೊಟ್ಟೆ, ಬಾಳೆಹಣ್ಣು ವಿತರಣೆ; ಇದಕ್ಕಾಗಿ 1,500 ಕೋಟಿ ರೂ. ಮೀಸಲು.
• ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ವಿಶೇಷ ಕಾರ್ಯಕ್ರಮದಡಿ 5 ಸಾವಿರ ಕೋಟಿ ರೂ. ಅನುದಾನ.
• ಅಲ್ಪಸಂಖ್ಯಾತ ಗುತ್ತಿಗೆದಾರರಿಗೆ ಮೀಸಲಾತಿ ಘೋಷಣೆ.
• ರಾಜ್ಯದ ಎರಡೂವರೆ ಸಾವಿರ ಪತ್ರಕರ್ತರಿಗೆ ಸಂಜೀವಿನಿ ಆರೋಗ್ಯ ಭಾಗ್ಯ ಯೋಜನೆ.
• 80 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಅನ್ನ ಸುವಿಧಾ ಯೋಜನೆ.
• ಜಿ.ಪಂ, ತಾ.ಪಂ ಕಚೇರಿಯಲ್ಲಿ ʼಅಕ್ಕ ಕೆಫೆʼ ಕ್ಯಾಂಟೀನ್ ಆರಂಭ.
• 2025- 26ನೇ ಸಾಲಿನಲ್ಲಿ 50 ಸಾವಿರ ರೈತರಿಗೆ ಸಹಾಯಧನ.
• ಮೈಸೂರಿನಲ್ಲಿ ಫಿಲ್ಮಿ ಸಿಟಿ ಸ್ಥಾಪನೆಗೆ 150 ಎಕರೆ ಜಾಗ, 500 ಕೋಟಿ ಅನುದಾನ ಮೀಸಲು.
• ಬೆಂಗಳೂರಿನಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ 7ಸಾವಿರ ಕೋಟಿ ಅನುದಾನ ಹಂಚಿಕೆ.
• ಸಿನಿಮಾ ಕ್ಷೇತ್ರವನ್ನು ಉದ್ಯಮ ಎಂದು ಪರಿಗಣಿಸಲು ನಿರ್ಧಾರ.
• ಕರಾವಳಿ, ಮಲೆನಾಡು ಜಿಲ್ಲೆಗಳಿಗೆ 200 ಕೋಟಿ ರೂ ಅನುದಾನ.
• ಭೂಕುಸಿತ ತಡೆಯಲು 200 ಕೋಟಿ ರೂ ಅನುದಾನ.
• ಕರಾವಳಿ 3 ಜಿಲ್ಲೆಗಳಲ್ಲಿ ಕಡಲಕೊರೆತ ತಪ್ಪಿಸಲು 200 ಕೋಟಿ ಅನುದಾನ.
• ಎಸ್ ಸಿ, ಎಸ್ ಟಿ ಸಮುದಾಯ ಮತ್ತು ಹಿಂದುಳಿದ ಸಮುದಾಯಗಳಿಗೆ 2 ಸಾವಿರ ಕೋಟಿವರೆಗಿನ ಗುತ್ತಿಗೆ ಕಾಮಗಾರಿಗಳ ವಿತರಣೆಯಲ್ಲಿ ಮೀಸಲಾತಿ.
• 500 ಹೊಸ ಕರ್ನಾಟಕ ಪಬ್ಲಿಕ್ ಶಾಲೆಗಳು ಆರಂಭ.
• ಬಿಸಿಯೂಟ ಕಾರ್ಯಕರ್ತೆಯರ ಗೌರವಧನ 1 ಸಾವಿರಕ್ಕೆ ಹೆಚ್ಚಳ.
• ಸರ್ಕಾರಿ – ಪ್ರೌಢ ಶಾಲಾ ಅತಿಥಿ ಶಿಕ್ಷಕರ ಗೌರವಧನ 2 ಸಾವಿರಕ್ಕೆ ಹೆಚ್ಚಳ.
• ಮಹಿಳಾ ಉದ್ದೇಶಿತ ಕಾರ್ಯಕ್ರಮಗಳಿಗೆ 94,000 ಕೋಟಿ ಮೀಸಲು.
• ಅಲೆಮಾರಿ ಜನಾಂಗದ ಕಾಲೋನಿ ಅಭಿವೃದ್ಧಿಗೆ 100ಕೋಟಿ ಅನುದಾನ.
• ಎತ್ತಿನಹೊಳೆ ಯೋಜನೆಗೆ 553 ಕೋಟಿ ರೂ. ಅನುದಾನ ಮೀಸಲು.
• ಪ್ರಸ್ತುತ 250 ಮೌಲಾನಾ ಅಜಾದ್ ಆಂಗ್ಲ ಮಾಧ್ಯಮ ಮಾದರಿ ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಶಾಲೆಗಳ ಮಾದರಿಯಲ್ಲಿ ₹500 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ. ಪ್ರಸಕ್ತ ಸಾಲಿನಲ್ಲಿ ₹100 ಕೋಟಿ ಅನುದಾನ.
• ಆಯ್ದ 100 ಉರ್ದು ಮಾಧ್ಯಮದ ಶಾಲೆಗಳನ್ನು ಮೌಲಾನಾ ಆಜಾದ್ ಪಬ್ಲಿಕ್ ಶಾಲೆಗಳನ್ನಾಗಿ ಉನ್ನತೀಕರಿಸಲು ₹100 .
ಸಿನಿಮಾ
• ಅಲ್ಪಸಂಖ್ಯಾತರು ಹೆಚ್ಚಾಗಿ ವಾಸಿಸುವ ಪ್ರದೇಶಗಳಲ್ಲಿ ಅಗತ್ಯ ಮೂಲಸೌಕರ್ಯಗಳಿಗಾಗಿ ₹1 ಸಾವಿರ ಕೋಟಿ ಅನುದಾನ.
• ಮದರಸಾಗಳಲ್ಲಿನ ವಿದ್ಯಾರ್ಥಿಗಳು NIOS ಮೂಲಕ SSLC ಪರೀಕ್ಷೆ ಬರೆಯಲು ಸಿದ್ಧತೆಗೆ ನೆರವು.
• ವಕ್ಸ್ ಸಂಸ್ಥೆ ಆಸ್ತಿಗಳ ದುರಸ್ತಿ, ಜೀರ್ಣೋದ್ದಾರ ಮತ್ತು ಖಬರಸ್ತಾನಗಳಲ್ಲಿ ಮೂಲಸೌಕರ್ಯ ಹಾಗೂ ಆಸ್ತಿಗಳ ಸಂರಕ್ಷಣೆಗಾಗಿ ₹ 150 ಕೋಟಿ.
• ರಾಜ್ಯದಲ್ಲಿರುವ ಗುರುದ್ವಾರಗಳಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸಲು ₹2 ಕೋಟಿ ಅನುದಾನ.
• 169 ವಸತಿ ಶಾಲೆ/ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ 25 ಸಾವಿರ ವಿದ್ಯಾರ್ಥಿನಿಯರಿಗೆ ಸ್ವಯಂ ರಕ್ಷಣಾ ಕೌಶಲ್ಯ ತರಬೇತಿ.
• ಸ್ವಯಂಸೇವಾ ಸಂಸ್ಥೆಗಳ ಮೂಲಕ ನಡೆಯುವ ಸಾಮೂಹಿಕ ವಿವಾಹಗಳ ವೆಚ್ಚಗಳಿಗೆ ಪ್ರತಿ ಜೋಡಿಗೆ ₹50 ಸಾವಿರ ಸಹಾಯಧನ.
• ಬೆಂಗಳೂರಿನಲ್ಲಿ ಬೌದ್ಧ ಅಧ್ಯಯನ ಅಕಾಡೆಮಿ ಸ್ಥಾಪನೆ ಹಾಗೂ ಮಹಾಭೋಧಿ ಅಧ್ಯಯನ ಕೇಂದ್ರದ ಹಳೆಯ ಗ್ರಂಥಾಲಯ ₹1 ಕೋಟಿ ವೆಚ್ಚದಲ್ಲಿ ಡಿಜಿಟಲೀಕರಣ
• ಅಲ್ಪಸಂಖ್ಯಾತ ಮಹಿಳೆಯರಿಗಾಗಿ 16 ಹೊಸ ಮಹಿಳಾ ಕಾಲೇಜುಗಳ ಸ್ಥಾಪನೆ.
• ಜೈನ, ಬೌದ್ಧ ಹಾಗೂ ಸಿಖ್ ಸಮುದಾಯಗಳ ಸಮಗ್ರ ಅಭಿವೃದ್ಧಿಗಾಗಿ ₹100 ಕೋಟಿ ಅನುದಾನ
• ಕ್ರಿಶ್ಚಿಯನ್ ಸಮುದಾಯ ಅಭಿವೃದ್ಧಿಗಾಗಿ ₹250 ಕೋಟಿ ಅನುದಾನ.
• ಜೈನ ಅರ್ಚಕರು, ಸಿಖ್ ಮುಖ್ಯಗ್ರಂಥಿಗಳು, ಮಸೀದಿಗಳ ಪೇಷ್ ಇಮಾಮ್‌ಗಳ ಮಾಸಿಕ ಗೌರವಧನ ₹6 ಸಾವಿರಗಳಿಗೆ ಹೆಚ್ಚಳ. ಸಿಖ್ ಸಹಾಯಕ ಗ್ರಂಥಿಗಳು ಹಾಗೂ ಮೋಝಿನ್ ಗಳ ಮಾಸಿಕ ಗೌರವಧನ ₹5 ಸಾವಿರಕ್ಕೆ ಹೆಚ್ಚಳ.
• ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ವೃತ್ತಿಪರ ಕೋರ್ಸ್‌ಗಳಲ್ಲಿ ಶೇ. 50 ಪ್ರವೇಶ ಶುಲ್ಕ ಮರುಪಾವತಿಗೆ ಕ್ರಮ.
• ರಾಷ್ಟ್ರೀಯ ವಿದೇಶಿ ವಿದ್ಯಾರ್ಥಿ ವೇತನ ₹30 ಲಕ್ಷಕ್ಕೆ ಹೆಚ್ಚಳ.