ಶ್ರೀ ಗುರು ರಾಘವೇಂದ್ರ ಸಹಕಾರಿ ಬ್ಯಾಂಕ್ ವಂಚನೆ ಪ್ರಕರಣ: ಏನು? ಎತ್ತ?
x

ಶ್ರೀ ಗುರು ರಾಘವೇಂದ್ರ ಸಹಕಾರಿ ಬ್ಯಾಂಕ್ ವಂಚನೆ ಪ್ರಕರಣ: ಏನು? ಎತ್ತ?

ಚಾಲ್ತಿಯಲ್ಲಿರುವ ಮಾರುಕಟ್ಟೆ ದರಕ್ಕಿಂತ ಹೆಚ್ಚಿನ ಬಡ್ಡಿಯ ಆಮಿಷವೊಡ್ಡಿ ಜನರಿಂದ ಠೇವಣಿ ಪಡೆದು ವಂಚಿಸಿದ ಆರೋಪ ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್ ನಿಯಮಿತದ ಮೇಲಿದೆ. ಹೆಚ್ಚಿನ ಬಡ್ಡಿ ಆಸೆಗೆ ಸಾವಿರಾರು ಗ್ರಾಹಕರು ಈ ಸಂಸ್ಥೆಯಲ್ಲಿ ಒಟ್ಟು 2,500 ಕೋಟಿ ರೂ. ಠೇವಣಿ ಇಟ್ಟಿದ್ದರು. ಸಾಲಗಾರರು, ಸಂಸ್ಥೆಯ ಆಡಳಿತ ಮಂಡಳಿ ಮತ್ತು ಉದ್ಯೋಗಿಗಳೊಂದಿಗೆ ಶಾಮೀಲಾಗಿ ನಕಲಿ ಠೇವಣಿ ಹಾಗೂ ನಿಶ್ಚಿತ ಠೇವಣಿಗಳ ಆಧಾರದಲ್ಲಿ ಭಾರಿ ಮೊತ್ತದ ಸಾಲ ಪಡೆದು ಮರು ಪಾವತಿಸದೆ ವಂಚಿಸಿದ್ದರು.


ಲೋಕಸಭಾ ಚುನಾವಣೆ ಘೋಷಣೆಯಾದ ಬಳಿಕ ಬಿಜೆಪಿ ನಾಯಕರಿಂದ ಸಹಕಾರ ಸಮಾಗಮ ಎನ್ನುವ ಕಾರ್ಯಕ್ರಮ ಆಯೋಜನೆ ಮಾಡಿದ್ದರು. ಈ ಸಂದರ್ಭದಲ್ಲಿ ಶ್ರೀ ಗುರು ರಾಘವೇಂದ್ರ ಸಹಕಾರಿ ಬ್ಯಾಂಕ್‌ನಿಂದ ವಂಚನೆಗೊಳಗಾದ ಠೇವಣಿದಾರರು ಭಾಗಿಯಾಗಿದ್ದರು. ಠೇವಣಿದಾರರು ಹಣ ವಾಪಸ್ ಮಾಡುವ ಬಗ್ಗೆ ಪ್ರಶ್ನೆ ಮಾಡಿದಾಗ, ಅವರುಗಳ ಮೇಲೆ ಹಲ್ಲೆ ಮಾಡಲಾಯಿತು ಎನ್ನುವ ಆರೋಪ ಕೇಳಿಬಂದಿತ್ತು. ಇದು ಸಾಕಷ್ಟು ಸದ್ದು ಮಾಡಿತ್ತು.

ಚಾಲ್ತಿಯಲ್ಲಿರುವ ಮಾರುಕಟ್ಟೆ ದರಕ್ಕಿಂತ ಹೆಚ್ಚಿನ ಬಡ್ಡಿಯ ಆಮಿಷವೊಡ್ಡಿ ಜನರಿಂದ ಠೇವಣಿ ಪಡೆದು ವಂಚಿಸಿದ ಆರೋಪ ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್ ನಿಯಮಿತದ ಮೇಲಿದೆ. ಹೆಚ್ಚಿನ ಬಡ್ಡಿ ಆಸೆಗೆ ಸಾವಿರಾರು ಗ್ರಾಹಕರು ಈ ಸಂಸ್ಥೆಯಲ್ಲಿ ಒಟ್ಟು 2,500 ಕೋಟಿ ರೂ. ಠೇವಣಿ ಇಟ್ಟಿದ್ದರು. ಸಾಲಗಾರರು, ಸಂಸ್ಥೆಯ ಆಡಳಿತ ಮಂಡಳಿ ಮತ್ತು ಉದ್ಯೋಗಿಗಳೊಂದಿಗೆ ಶಾಮೀಲಾಗಿ ನಕಲಿ ಠೇವಣಿ ಹಾಗೂ ನಿಶ್ಚಿತ ಠೇವಣಿಗಳ ಆಧಾರದಲ್ಲಿ ಭಾರಿ ಮೊತ್ತದ ಸಾಲ ಪಡೆದು ಮರು ಪಾವತಿಸದೆ ವಂಚಿಸಿದ್ದರು.

ಸಂಸ್ಥೆಯಿಂದ ವಂಚನೆಗೆ ಒಳಗಾದವರಲ್ಲಿ ಹಿರಿಯ ನಾಗರಿಕರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹಿರಿಯ ನಾಗರಿಕರು ತಮ್ಮ ಉಳಿತಾಯ ಹಾಗೂ ನಿವೃತ್ತಿ ವೇತನದ ಹಣವನ್ನು ವೃದ್ಧಾಪ್ಯದಲ್ಲಿ ಆರ್ಥಿಕ ಭದ್ರತೆಗಾಗಿ ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್‌ನಲ್ಲಿ ಠೇವಣಿ ಇಟ್ಟಿದ್ದರು. ಆದರೆ, ಸಂಸ್ಥೆಯ ಆಡಳಿತ ಮಂಡಳಿಯು ಸಾಲಗಾರರಿಂದ ಸೂಕ್ತ ಶ್ಯೂರಿಟಿ ಪಡೆಯದೆ ಸಾಲ ನೀಡಿತ್ತು. ಜತೆಗೆ ನಕಲಿ ಖಾತೆಗಳನ್ನು ಸೃಷ್ಟಿಸಿ ಸಾಲ ಮಂಜೂರು ಮಾಡಿತ್ತು.

ಶ್ರೀಗುರು ರಾಘವೇಂದ್ರ ಬ್ಯಾಂಕ್ ಹಿನ್ನಲೆ

1999ರಲ್ಲಿ ಗುರು ರಾಘವೇಂದ್ರ ಬ್ಯಾಂಕ್ ಸ್ಥಾಪನೆಯಾಯಿತು. ಅದಕ್ಕೆ ಆರ್‌ಬಿಐ ಅನುಮತಿಯೂ ಸಿಕ್ಕಿತ್ತು. ಬಸವನಗುಡಿ ಬಿಜೆಪಿ ಶಾಸಕ ರವಿ ಸುಬ್ರಮಣ್ಯ ಅವರು 15 ವರ್ಷದಿಂದ ಬ್ಯಾಂಕ್‌ಗೆ ಪ್ರಮೋಟರ್ ರೀತಿಯಲ್ಲಿ ಕೆಲಸ ಮಾಡಿದ್ದರು. ಇಲ್ಲಿಯ ಎಲ್ಲ ವ್ಯವಹಾರಗಳನ್ನು ಮಾಡಿಸುತ್ತಿದ್ದರು. ಹೆಚ್ಚಿನ ಬಡ್ಡಿ ಕೊಡುತ್ತೇವೆ ಎಂದು ಜನರಲ್ಲಿ ಆಸೆ ಹುಟ್ಟಿಸಿದ್ದರು. ಈ ಬ್ಯಾಂಕ್‌ಗೆ ಠೇವಣಿದಾರರನ್ನು ಕರೆದುಕೊಂಡು ಬಂದವರಿಗೂ ಒಂದಷ್ಟು ಹಣ ಕಮೀಷನ್ ರೂಪದಲ್ಲಿ ನೀಡಲಾಗುತ್ತಿತ್ತು. ರವಿ ಸುಬ್ರಮಣ್ಯ ಸೇರಿದಂತೆ ಹಲವರು ಅನಧಿಕೃತವಾಗಿ ಬ್ಯಾಂಕ್‌ ಏಜಂಟರ್‌ ರೀತಿಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ವಂಚನೆಗೊಳಗಾದವರ ಆರೋಪ.

ಆರ್‌ಬಿಐ ಪರಿಶೀಲನಾ ತಂಡವು 2019ರಲ್ಲಿ ಶ್ರೀಗುರು ರಾಘವೇಂದ್ರ ಬ್ಯಾಂಕ್ ವ್ಯವಹಾರಗಳನ್ನು ಪರಿಶೀಲನೆ ಮಾಡಿತು. ಬ್ಯಾಂಕ್‌ನಿಂದ ಸಾಲ ಪಡೆದವರಲ್ಲಿ ಶೆ.98ಎಷ್ಟು ಸಾಲಗಳು ಮರುಪಾವತಿಯಾಗಿಲ್ಲ (ಎನ್‌ಪಿಎ) ಎಂದು ತಿಳಿದುಬಂದಿತು. ಆಗ ಬಂಡವಾಳ ಕಡಿಮೆ ಇದೆ ಎಂದು 2020 ಜನವರಿ 10 ರಂದು ಬ್ಯಾಂಕ್ ಮೇಲೆ ನಿರ್ಬಂಧ ಹೇರಲಾಯಿತು. ಅಂದಿನಿಂದ ಬ್ಯಾಂಕ್‌ನಿಂದ ದುಡ್ಡು ತಗೆಯುವ ಹಾಗಿಲ್ಲ, ಡೆಪಾಸಿಟ್ ಮಾಡುವ ಹಾಗಿರಲಿಲ್ಲ. ಆರ್‌ಬಿಐ ನವರು ಠೇವಣಿದಾರ ಅನುಕೂಲಕ್ಕಾಗಿ 35,000ರೂ. ತೆಗೆಯಬಹುದು ಎಂದು ಹೇಳಿತು. ಆ ನಂತರ 65,000 ಪಡೆಯಬಹುದು ಎಂದು ಅವಕಾಶ ಮಾಡಿಕೊಟ್ಟಿತ್ತು. ಆಗ ಠೇವಣಿದಾರರು ತಮ್ಮ ಡೆಪಾಸಿಟ್ ಹಣದಲ್ಲಿ 1 ಲಕ್ಷ ರೂ. ಮಾತ್ರ ಹಣ ಪಡೆದಿದ್ದಾರೆ. ಆನಂತರ 2021 ಡೆಪಾಸಿಟ್ ಇಟ್ಟವರಿಗೆ ಇನ್ಸ್ಯೂರೆನ್ಸ್ ಕ್ಲೇಮ್ (ಡಿಐಸಿಜಿಸಿ) ಅಡಿಯಲ್ಲಿ 5 ಲಕ್ಷದ ಹಣ ನೀಡಲು ಅವಕಾಶ ನೀಡಲಾಯಿತು. ಆಗ 5 ಲಕ್ಷಕ್ಕಿಂತ ಕಡಿಮೆ ಠೇವಣಿ ಇಟ್ಟವರಿಗೆ ಹಣ ನೀಡಲಾಯಿತು. ಅದಕ್ಕಿಂತ ಹೆಚ್ಚಿಗೆ ಹಣ ನೀಡಲಾಗಿಲ್ಲ. ಬ್ಯಾಂಕ್‌ಗೆ ಮೀಸಲು ನಿಧಿ ಅಂತ ಇರುತ್ತದೆ. ಆ ಹಣ ಎಲ್ಲವೂ ಇದೀಗ ಖಾಲಿ ಆಗಿರುವುದರಿಂದ ಯಾರಿಗೂ ಹಣ ನೀಡಲು ಸಾಧ್ಯವಿಲ್ಲ ಎಂದು ಹೇಳಲಾಗಿದೆ.

2008ರಿಂದ ಅಕ್ರಮ ಆರಂಭ

ಒಬ್ಬ ವ್ಯಕ್ತಿಗೆ 10 ಲಕ್ಷ ರೂ. ಸಾಲ ನೀಡಬೇಕಾದರೆ, ಅವನ ಮನೆಯ ಆಸ್ತಿ ಪತ್ರವನ್ನು ಅಡಮಾನ ಇರಿಸಿಕೊಳ್ಳುತ್ತಾರೆ. ಆ ಮನೆಯ ಬೆಲೆ ಸುಮಾರು ಒಂದು ಕೋಟಿಗಿಂತ ಅಧಿಕ ಬೆಲೆ ಆಗಿರುತ್ತದೆ. ಹಾಗಾಗಿ ಅದೇ ಮನೆ ದಾಖಲಾತಿ ಆಧಾರದಲ್ಲಿ ತಮಗೆ ಬೇಕಾದವರಲ್ಲಿ ಉಳಿದ ಹಣವನ್ನು ಸಾಲವಾಗಿ ನೀಡಲಾಗಿದೆ. ಈಗ ಮನೆ ಅಡ ಇಟ್ಟವನು ತಾನು ಮಾಡಿರುವ ಸಾಲ ತೀರಿಸುತ್ತೇನೆ ಎಂದು ಹೇಳಿದರೂ ಅವನಿಗೆ ಆಸ್ತಿ ಪತ್ರ ಕೊಡಲಾಗುತ್ತಿಲ್ಲ. ಏಕೆಂದರೆ ಬೇರೆ ಸಾಲಗಳು ಮನೆಗೆ ಕನೆಕ್ಟ್ ಆಗಿವೆ. ಇದು ಒಂದು ರೀತಿಯ ಮೋಸವಾಗಿದೆ.

ಒಬ್ಬ ವ್ಯಕ್ತಿ 10 ಲಕ್ಷ ಸಾಲ ಪಡೆದಿದ್ದಾನೆ ಎಂದಿಟ್ಟುಕೊಳ್ಳಿ; ಅವನು ವರ್ಷವಾದರೂ ಹಣ ಹಿಂತಿರುಗಿಸದೇ ಇದ್ದಾಗ ಅವನನ್ನು ಬ್ಯಾಂಕ್‌ಗೆ ಕರೆಸುವುದು. ಬಡ್ಡಿ, ಚಕ್ರ ಬಡ್ಡಿ ಎಲ್ಲಾ ಸೇರಿ 13 ಲಕ್ಷ ಆಗಿದೆ ಎಂದಾಗ ಅವನಲ್ಲಿ ಅಷ್ಟು ಹಣ ಇರಲ್ಲ. ಆಗ ಅವನಿಗೆ ಮತ್ತೆ 15 ಲಕ್ಷ ಸಾಲ ಕೊಡ್ತಿವಿ ಅದರಲ್ಲಿ 13 ಲಕ್ಷದ ಸಾಲ ತೀರಿಸು ಮಿಕ್ಕಿದ ಎರಡು ಲಕ್ಷದಲ್ಲಿ ನಮಗೊಂದು ಲಕ್ಷ ನಿನಗೊಂದು ಲಕ್ಷ ಎಂದು ಹೇಳಿ, ಅದರಲ್ಲಿ ಬ್ಯಾಂಕ್‌ನವರೇ ಪಡೆದಿದ್ದಾರೆ. ಆ ವ್ಯಕ್ತಿ ಸಾಲ ತೀರಿತು ಎಂದು ಹೋದರೆ, ಮತ್ತೆ ಒಂದು ವರ್ಷದ ನಂತರ ಮತ್ತೆ ಕರೆಸಿ 20 ಲಕ್ಷ ಹೀಗೆ ಸಾಲಕ್ಕೆ ಸಾಲ ಅಂತ ಕೋಟಿಗಟ್ಟಲೇ ಹಣದ ವ್ಯವಹಾರ ಮಾಡಲಾಗಿದೆ.

ಈ ಬ್ಯಾಂಕ್‌ಗಳಲ್ಲಿ ನಕಲಿ ಎಫ್‌ಡಿ ಖಾತೆಗಳನ್ನು ತೆರೆದು ಮೋಸ ಮಾಡಿದ್ದಾರೆ. ಅದರಿಂದ ಬಡ್ಡಿ ಕೂಡ ತಿಂದು ತೇಗಿದ್ದಾರೆ. ಈ ಮಹಾಮೋಸದಲ್ಲಿ ಬ್ಯಾಂಕ್ ನೌಕರರು ಸೇರಿದ್ದಾರೆ. ಅಷ್ಟೇ ಅಲ್ಲದೇ ಆ ಫೇಕ್ ಎಫ್‌ಡಿ ಇಟ್ಟು ಸಾಲಗಳನ್ನೂ ತಗೆದುಕೊಂಡಿದ್ದಾರೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ.

ಠೇವಣಿದಾರರ ಕಣ್ಣೀರ ಕಥೆ

ಠೇವಣಿದಾರರಿಗೆ ಈ ಮೋಸದ ಜಾಲ ತಿಳಿಯದಂತೆ ವ್ಯವಸ್ಥೆ ಮಾಡಲಾಗಿತ್ತು. ಇಲ್ಲಿಗೆ ಬರುವವರೆಲ್ಲರೂ ನಿವೃತ್ತ ನೌಕರರು, ಹೆಚ್ಚಿನ ಬಡ್ಡಿ ಸಿಗಬಹುದು. ಅದರಿಂದ ಇನ್ನಷ್ಟು ಅನುಕೂಲ ಆಗಬಹುದು ಎಂದು ಲೆಕ್ಕಾಚಾರದ ಬದುಕು ನಡೆಸುವವರು. ಅವರಿಗೆ ಬ್ಯಾಂಕ್ ಬಂದ್ ಆಗುವವರೆಗೂ ಸರಿಯಾದ ಸೇವೆ ನೀಡಿದ್ದಾರೆ, ಇದರಿಂದ ಹೆಚ್ಚಿನ ಠೇವಣಿದಾರರು ಅಲ್ಲಿ ಸೃಷ್ಟಿಯಾಗಿದ್ದಾರೆ. ಸುಮಾರು 30ರಿಂದ 35 ಸಾವಿರ ಜನರು ಅಲ್ಲಿ ಠೇವಣಿ ಇಟ್ಟಿದ್ದಾರೆ. ಸದ್ಯ ಅವರೆಲ್ಲರ ಪರಿಸ್ಥಿತಿ ಹೇಳಲಾಗದು. ಇಳಿ ವಯಸ್ಸಿನಲ್ಲಿ ನಿವೃತ್ತಿ ಹಣ ಜೀವನಕ್ಕೆ ಸಹಾಯ ಆಗಬಹುದು ಎಂದು ಭಾವಿಸಿದ್ದವರಿಗೆ ಈ ಬ್ಯಾಂಕ್ ಮಾಡಿದ ಮಹಾ ಮೋಸದಿಂದ ಪ್ರತಿದಿನ ಕಣ್ಣೀರಿನಲ್ಲಿ ಕೈ ತೊಳೆಯುವಂತಾಗಿದೆ.

ಈ ಬಗ್ಗೆ ಮಾತನಾಡಿದ ಶೇರುದಾರರ ವೇದಿಕೆಯ ಜನರಲ್ ಸೆಕ್ರೆಟರಿ ಹರೀಶ್ ವೆಂಕಟೇಶ್ ಅವರು, "ಈ ಮಹಾ ವಂಚನೆಯ ಬಗ್ಗೆ ಬಸವನಗುಡಿ ಶಾಸಕ ರವಿ ಸುಬ್ರಮಣ್ಯ ಅವರು ಸಾಕಷ್ಟು ಬಾರಿ ಹಣ ವಾಪಸ್ ಮಾಡುವುದಾಗಿ ಆಶ್ವಾಸನೆ ನೀಡಿದ್ದರು. ನಿರ್ಮಲಾ ಸೀತಾರಾಮನ್ ಅವರ ಜೊತೆಗೆ ಮಾತನಾಡಿದ್ದೇನೆ ಎಂದು ಭರವಸೆ ಮೂಡಿಸಿದ್ದರು. ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ 2023 ಏ.17ರಂದು ಠೇವಣಿದಾರರನ್ನೆಲ್ಲಾ ಕರೆಸಿ ಮಾತನಾಡಿದ್ದರು. ಒಬ್ಬ ಒಳ್ಳೆಯ ಇನ್ವೆಸ್ಟರ್‌ನ ಹುಡುಕಿದೀನಿ, ನಿಮ್ಮಗಳ ದುಡ್ಡು ವಾಪಸ್ ಆಗಲು ಏನೇನು ಮಾಡಬೇಕೋ ಎಲ್ಲ ಮಾಡಿದ್ದೇನೆ. ಈ ಚುನಾವಣೆ ಮುಗಿದ ಒಂದು ವಾರದೊಳಗೆ ನಿಮ್ಮನ್ನು ಕರೆಸಿ ಮತ್ತೆ ಮಾತನಾಡುತ್ತೇನೆ ಎಂದು ಇಲ್ಲದ ಸುಳ್ಳುಗಳನ್ನು ಹೇಳಿ ನಮನ್ನೆಲ್ಲಾ ನಂಬಿಸಿದರು. ಚುನಾವಣೆ ಮುಗಿದ ಬಳಿಕ ಶಾಸಕರಾಗಲಿ ಸಂಸದರಾಗಲಿ ನಮ್ಮನ್ನು ಭೇಟಿಯೂ ಆಗಲಿಲ್ಲ, ಹಣ ಹಿಂತಿರುಗಿಸುವ ಮಾತೂ ಆಡಲಿಲ್ಲ. ನಮ್ಮನ್ನು ಅವರ ಮನೆ ಗೇಟ್‌ನ ಒಳಗೂ ಬಿಡಲಿಲ್ಲʼʼ ಎಂದು ಆರೋಪಿಸಿದ್ದಾರೆ.

"ಇದೀಗ ಮತ್ತೆ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಹಿಂದೆ ನಂಬಿಸಿ ಮೋಸ ಮಾಡಿದಂತೆ ಈಗಲೂ ಮೋಸ ಮಾಡಲು ಸಭೆ ಕರೆದರು. ಏ.13ರಂದು ಸಹಕಾರ ಸಮಾಗಮ ಎನ್ನುವ ಕಾರ್ಯಕ್ರಮ ಮಾಡಿದರು. ಅಲ್ಲಿ ನಾವುಗಳು ಹಿಂದಿನ ವರ್ಷ ಇದೇ ರೀತಿ ಸಭೆ ಕರೆದು ಹಣ ವಾಪಸ್ ಆಗುವ ರೀತಿ ವ್ಯವಸ್ಥೆ ಮಾಡಿದ್ರಿ ಈಗ ಏನ ಹೇಳತೀರಿ ಎಂದು ಪ್ರಶ್ನೆ ಮಾಡಿದಾಗ, ನಮ್ಮಗಳ ಮೇಲೆಯೇ ಹಲ್ಲೆ ಮಾಡಿ, ಪ್ರಶ್ನೆ ಕೇಳುವಂತಿಲ್ಲ" ಎಂದು ದಬ್ಬಾಳಿಕೆ ತೋರಿದರು ಎಂದು ಹರೀಶ್ ವೆಂಕಟೇಶ್ ತಿಳಿಸಿದರು.

Read More
Next Story