
ಇಂದು ನಾಡಿನೆಲ್ಲೆಡೆ ಶಿವರಾತ್ರಿಯ ಸಂಭ್ರಮ
ಶಿವರಾತ್ರಿ ಹಿನ್ನಲೆ ನಗರದ ವಿವಿಧ ಶಿವಾಲಯಗಳಲ್ಲಿ ವಿಶೇಷ ಪೂಜೆಯನ್ನು ಹಮ್ಮಿಕೊಳ್ಳಲಾಗಿದ್ದು, ಭಕ್ತರು ಸಾಲುಗಟ್ಟಾಗಿ ಬಂದು ದೇವರ ದರ್ಶನ ಪಡೆಯುತ್ತಿದ್ದಾರೆ.
ನಾಡಿನೆಲ್ಲೆಡೆ ಇಂದು ಶಿವರಾತ್ರಿ ಹಬ್ಬದ ಸಂಭ್ರಮ. ಬೆಂಗಳೂರಿನಲ್ಲಿ ಶಿವರಾತ್ರಿ ಹಬ್ಬದ ಸಡಗರ ಮನೆ ಮಾಡಿದೆ. ಬೆಳಗ್ಗೆಯಿಂದಲೇ ನಗರದ ಜನತೆ ಶಿವರಾತ್ರಿಯ ಆಚರಣೆಯಲ್ಲಿ ಸನ್ನದ್ಧವಾಗಿದ್ದಾರೆ.
ಶಿವರಾತ್ರಿ ಹಿನ್ನಲೆ ನಗರದ ವಿವಿಧ ಶಿವಾಲಯಗಳಲ್ಲಿ ವಿಶೇಷ ಪೂಜೆಯನ್ನು ಹಮ್ಮಿಕೊಳ್ಳಲಾಗಿದ್ದು, ಭಕ್ತರು ಸಾಲುಗಟ್ಟಿ ಬಂದು ದೇವರ ದರ್ಶನ ಪಡೆಯುತ್ತಿದ್ದಾರೆ.
ನಗರದ ಜೆಪಿ ನಗರದಲ್ಲಿರುವ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಇಂದು ಬೆಳಗಿನ ಜಾವದಿಂದಲೇ ಭಕ್ತರು ಭೇಟಿ ನೀಡಿ ದರ್ಶನ ಪಡೆಯುವುದು ಕಂಡು ಬಂತು. ಭಕ್ತರು ಹೂವು, ಹಣ್ಣು ಹಿಡಿದುಕೊಂಡು ಶಿವನ ಪೂಜೆಯಲ್ಲಿ ನಿರತರಾಗಿದ್ರು. ಪೂಜೆಗೆ ಬಂದ ಭಕ್ತರಿಗೆ ಪ್ರಸಾದದ ವ್ಯವಸ್ಥೆಯನ್ನು ಕೂಡ ದೇವಸ್ಥಾನದ ವತಿಯಿಂದ ಮಾಡಲಾಗಿತ್ತು.
ದೇವಸ್ಥಾನ ಆವರಣಗಳಲ್ಲಿ ಹೂವು, ಬಿಲ್ಪತೆ, ತುಳಸಿದಳಗಳನ್ನು ಮಾರಾಟಕ್ಕಿಟ್ಟಿದ್ದು, ಇವುಗಳನ್ನು ಬಹಳಷ್ಟು ಮಂದಿ ಭಕ್ತರು ಕೊಳ್ಳುವ ದೃಶ್ಯ ಕಂಡುಬಂತು.
ಹೈ ಅಲರ್ಟ್
ಒಂದೆಡೆ ಶಿವರಾತ್ರಿಯ ಸಂಭ್ರಮವಾದರೆ, ಮತ್ತೊಂದೆಡೆ ಇತ್ತೀಚೆಗೆ ನಗರದ ರಾಮೇಶ್ವರಂ ಕೆಫೆಯಲ್ಲಿ ಮಾರ್ಚ್ 1ರಂದು ನಡೆದ ಬಾಂಬ್ ಬ್ಲಾಸ್ಟ್ನಿಂದಾಗಿ ಮುನ್ನೆಚ್ಚರಿಕಾ ಕ್ರಮಗಳನ್ನು ಪೊಲೀಸರು ಕೈಗೊಂಡಿದ್ದಾರೆ. ಹೆಚ್ಚಿನ ಶಿವ ಭಕ್ತರು ಸೇರುವ ಶಿವ ದೇವಸ್ಥಾನಗಳಿಗೆ ಮುನ್ನೆಚ್ಚರಿಕ ಕ್ರಮವಾಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಯಾವುದೇ ವಿಧ್ವಂಸಕ ಕೃತ್ಯ ಸಂಭವಿಸದಂತೆ ಪೊಲೀಸರು ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದ್ದಾರೆ.
ಪ್ರಾಣಿ ವಧೆ, ಮಾಂಸ ಮಾರಾಟ ನಿಷೇಧ
ಇನ್ನು ಶಿವರಾತ್ರಿ ಹಬ್ಬದ ಪ್ರಯಕ್ತ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಕಸಾಯಿಖಾನೆಯಲ್ಲಿ ಪ್ರಾಣಿವಧೆ ಹಾಗೂ ಮಾರಾಟ ಮಳಿಗೆಗಳಲ್ಲಿ ಮಾಂಸ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಹೂವು ಹಣ್ಣು ದುಬಾರಿ
ಶಿವರಾತ್ರಿ ಹಿನ್ನಲೆಯಲ್ಲಿ ನಗರದಲ್ಲಿ ಹೂವು ಹಣ್ಣಿನ ಬೆಲೆ ದುಬಾರಿಯಾಗಿದೆ. ಈ ಬಾರಿ ಮಳೆಯೂ ಕಡಿಮೆ ಆಗಿದ್ದರಿಂದ ಹೂವುಗಳ ಬೆಲೆ ಗಗನಕ್ಕೇರಿದೆ. 1 ಗುಲಾಬಿ ಹಾರದ ಬೆಲೆ ಬರೋಬ್ಬರಿ 1 ಸಾವಿರ ಗಡಿ ದಾಟಿದೆ. 1 ಮಲ್ಲಿಗೆ ಹಾರಕ್ಕೆ 800 ರೂ ಇದೆ. ಹಾಗೆ 1 ಕೆಜಿ ಗುಲಾಬಿ ಹೂಗೆ 400 ರೂ. ಇದ್ರೆ, ಸೇವಂತಿಗೆ ಹೂವಿಗೂ 1ಕೆಜಿಗೆ 400 ರೂ ಇದೆ. ಇನ್ನು 1 ಮೊಳ ಮಲ್ಲಿಗೆ ಹೂವಿಗೆ 80ರೂನಿಂದ 100 ರೂ ಇದೆ. ಕನಕಾಂಬರ 1 ಮೊಳಕ್ಕೆ 60ರಿಂದ 80 ರೂ. ಬಿಲ್ವಪತ್ರೆ 1 ಕಟಟಿಗೆ 50ರಿಂದ 80 ರೂ.ಇದೆ. ಸೇಬು ಹಣ್ಣಿಗೆ 1 ಕೆಜಿಗೆ 150ರಿಂದ 250 ರೂ.ವರೆಗೂ ಇದೆ. ಕಿತ್ತಲೆ 1ಕೆಜಿಗೆ 100ರಿಂದ 150ರೂ ಇದೆ. ಮಾವು 1 ಕೆಜಿಗೆ 120 - 200 ರೂ. ಇದೆ. ಮೂಸಂಬಿ 1 ಕೆಜಿಗೆ 80ರಿಂದ 120 ರೂ.ವರೆಗೂ ಇದೆ. ಶಿವನು ಈ
ಮಲ್ಲೇಶ್ವರದ ಕಾಡುಮಲ್ಲಿಕಾರ್ಜುನ ಸೇರಿದಂತೆ ಅನೇಕ ಶಿವನ ದೇಗುಲಗಳಲ್ಲಿ ಈಶ್ವರನಿಗೆ ವಿಶೇಷ ಪೂಜೆ ಹಾಗೂ ಜಾಗರಣೆಯನ್ನ ನಡೆಸಲಾಗುತ್ತದೆ. ದೇವಸ್ಥಾನಗಳಲ್ಲಿ ವಿವಿಧ ಕಾರ್ಯಕ್ರಮಗಳನ್ನು ವಿಶೇಷವಾಗಿ ಭಕ್ತರಿಗೆ ಆಯೋಜಿಸಲಾಗಿದೆ.