ಉತ್ತರಕನ್ನಡ | ಕಾಂಗ್ರೆಸ್‌ ಹೊಸ್ತಿಲಲ್ಲಿ ಹೆಬ್ಬಾರ್ ಗೆ ಎದುರಾಯ್ತು PAYCM ಭೂತ!
x

ಉತ್ತರಕನ್ನಡ | ಕಾಂಗ್ರೆಸ್‌ ಹೊಸ್ತಿಲಲ್ಲಿ ಹೆಬ್ಬಾರ್ ಗೆ ಎದುರಾಯ್ತು PAYCM ಭೂತ!

ಶಿವರಾಮ್ ಹೆಬ್ಬಾರ್ ಅವರು ಬಿಜೆಪಿ ತೊರೆದು ಕಾಂಗ್ರೆಸ್ ಸೇರಲು ತುದಿಗಾಲಲ್ಲಿದ್ದಾರೆ. ಹಾಗಾಗಿ ಕೆಪಿಸಿಸಿ ರಾಜ್ಯ ಉಪಾಧ್ಯಕ್ಷ ಐವಾನ್ ಡಿಸೋಜಾ ನೇತ್ರತ್ವದಲ್ಲಿ ಸೋಮವಾರ ಶಿರಸಿಯಲ್ಲಿ ಹಾಲಿ ಕಾಂಗ್ರೆಸ್ ಶಾಸಕರು, ಹಿರಿಯ ನಾಯಕರ ಸಭೆ ಕರೆಯಲಾಗಿತ್ತು.


ಯಲ್ಲಾಪುರದ ಬಿಜೆಪಿ ಹಾಲಿ ಶಾಸಕ ಶಿವರಾಮ್ ಹೆಬ್ಬಾರ್ ಕಾಂಗ್ರೆಸ್ ಸೇರ್ಪಡೆಗೆ ಪಕ್ಷದಲ್ಲಿ ಭಾರಿ ವಿರೋಧ ವ್ಯಕ್ತವಾಗಿದ್ದು ಶಿವರಾಮ್ ಹೆಬ್ಬಾರ್ ವಿರುದ್ಧ ಶಿರಸಿಯ ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದ ಬಾಗಿಲಿಗೆ ಹಾಗೂ ಗೋಡೆಗೆ ಹೆಬ್ಬಾರ್ ಭಾವಚಿತ್ರವಿರುವ PAYCM ಪೋಸ್ಟರ್ ಅಂಟಿಸಿ ಕಾರ್ಯಕರ್ತರು ಆಕ್ರೋಶ ಹೊರಹಾಕಿದ್ದಾರೆ.

ಶಿವರಾಮ್ ಹೆಬ್ಬಾರ್ ಅವರು ಬಿಜೆಪಿ ತೊರೆದು ಕಾಂಗ್ರೆಸ್ ಸೇರಲು ತುದಿಗಾಲಲ್ಲಿದ್ದಾರೆ. ಹಾಗಾಗಿ ಕೆಪಿಸಿಸಿ ರಾಜ್ಯ ಉಪಾಧ್ಯಕ್ಷ ಐವಾನ್ ಡಿಸೋಜಾ ನೇತ್ರತ್ವದಲ್ಲಿ ಸೋಮವಾರ ಶಿರಸಿಯಲ್ಲಿ ಹಾಲಿ ಕಾಂಗ್ರೆಸ್ ಶಾಸಕರು, ಹಿರಿಯ ನಾಯಕರ ಸಭೆ ಕರೆಯಲಾಗಿತ್ತು.

ಈ ಹಿನ್ನಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪಕ್ಷದ ಕಚೇರಿಯ ಗೋಡೆ, ಬಾಗಿಲುಗಳಿಗೆ ಹೆಬ್ಬಾರ್ ವಿರೋಧದ ಪೋಸ್ಟರ್ ಅಂಟಿಸಿದ್ದು ʻನಮ್ಮ ಪಕ್ಷ ನಮ್ಮ ಹಕ್ಕು ಭ್ರಷ್ಟರಿಗೆ ಜಾಗವಿಲ್ಲʼ, ʻಡೀಲ್ ನಿಮ್ದು ಕಮಿಷನ್ ನಮ್ದುʼ, ʻಆಹಾರದ ಕಿಟ್ ಸ್ಕ್ಯಾಮ್ಗೆ PAYCM ಮಾಡಿʼ ಎಂದು ಪೋಸ್ಟರ್ ಹಾಕಿದ್ದು, ಕ್ಯೂ.ಆರ್ ಕೋಡ್ ನಲ್ಲಿ ಮಾಜಿ ಸಿಎಂ ಬಸವರಾಜ್ ಬೊಮ್ಮಯಿ ಪೋಸ್ಟರ್ ಸಹ ಹಾಕಿ ವಿರೋಧ ವ್ಯಕ್ತಪಡಿಸಿದ್ದಾರೆ.

ಹೆಬ್ಬಾರ್ ಅವರನ್ನು ಕಾಂಗ್ರೆಸ್ ಗೆ ಸೇರ್ಪಡೆ ಮಾಡುವ ಕುರಿತು ಶಿರಸಿಯಲ್ಲಿ ನಡೆದ ಸಭೆಯ ಬಳಿಕ ಕಾಂಗ್ರೆಸ್ ಕಾರ್ಯಕರ್ತರ ನಡುವೆಯೇ ಪರ, ವಿರೋಧದ ಮಾತಿನ ಚಕಮಕಿ ನಡೆಯಿತು.

ಹೆಬ್ಬಾರ್ ಪರ ಒಲವು ಹೊಂದಿರುವ ಕಾರ್ಯಕರ್ತರು ಪಕ್ಷಕ್ಕೆ ಬರಬೇಕು ಎಂದರೆ ಶಿರಸಿ ಶಾಸಕ ಭೀಮಣ್ಣ ಪರ ಹಾಗೂ ಕಾಂಗ್ರೆಸ್ ಮೂಲ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿದರು.

ಇನ್ನು ಹಿರಿಯ ನಾಯಕ, ಮಾಜಿ ಸಚಿವ, ಹಳಿಯಾಳ ಶಾಸಕ ಆರ್.ವಿ ದೇಶಪಾಂಡೆ ಮಾತನಾಡಿ, ʼʼಹೆಬ್ಬಾರ್ ಬಿಜೆಪಿಯಲ್ಲಿ ಅಧಿಕಾರ ಅನುಭವಿಸಿ ಉತ್ತಮವಾಗಿದ್ದಾರೆ. ಇಲ್ಲಿ ಬಂದು ಏನು ಮಾಡುತ್ತಾರೆ? ಕಾರ್ಯಕರ್ತರ ಅಭಿಪ್ರಾಯಕ್ಕೆ ಪಕ್ಷ ಸಮ್ಮತಿಸುತ್ತದೆ. ನನ್ನ ಬಳಿಯೂ ಹೆಬ್ಬಾರ್ ಪಕ್ಷಕ್ಕೆ ಬರುವ ಬಗ್ಗೆ ಮಾತನಾಡಿಲ್ಲʼʼ ಎಂದು ಹೆಬ್ಬಾರ್ ಪಕ್ಷಕ್ಕೆ ಬರುವ ಕುರಿತು ಸೂಚ್ಯವಾಗಿ ವಿರೋಧಿಸಿದರು.

ಈ ಬಗ್ಗೆ ಮಂಗಳವಾರ ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಹೆಬ್ಬಾರ್, ʼʼನಾನು ಎಲ್ಲೂ ಕಾಂಗ್ರೆಸ್ ಹೋಗುವುದಾಗಿ ಹೇಳಿಲ್ಲ. ಹೋಗುವುದಿದ್ದರೆ ಎಲ್ಲ ಹೇಳಿಯೇ ಹೋಗುವೆ. ಇಷ್ಟು ವರ್ಷದ ರಾಜಕಾರಣದಲ್ಲಿ ಯಾವುದಕ್ಕೂ ಹೆದರಿಲ್ಲ. ಯಾರೂ ಯಾವುದೇ ಪಕ್ಷಕ್ಕೆ ಗುತ್ತಿಗೆಯಲ್ಲ. ಎಷ್ಟು ಬದಲಾವಣೆ ಆಗಿದ್ದಾರೆ ಗೊತ್ತಿಲ್ಲವಾ?ʼʼ ಎಂದರು.

Read More
Next Story