Minister Thangadgi promises more grants for wholesale purchases to benefit book publishers
x

ಪುಸ್ತಕ ಪ್ರಾಧಿಕಾರದ ಮನೆಗೊಂದು ಗ್ರಂಥಾಲಯ ಯೋಜನೆಯಡಿ ಗ್ರಂಥಾಲಯ ಅನುಷ್ಠಾನ ಕಾರ್ಯಕ್ರಮಕ್ಕೆ ಸಚಿವ ಶಿವರಾಜ ತಂಗಡಗಿ ಚಾಲನೆ ನೀಡಿದರು. 

ಪುಸ್ತಕ ಪ್ರಕಾಶಕರ ಹಿತಕಾಯಲು ಸಗಟು ಖರೀದಿಗೆ ಹೆಚ್ಚಿನ ಅನುದಾನ: ಸಚಿವ ತಂಗಡಗಿ ಭರವಸೆ

ಪುಸ್ತಕ ಪ್ರೀತಿಯ ಫಲವಾಗಿಯೇ ಸಾಹಿತಿಗಳು, ಪ್ರಕಾಶಕರು ಹಾಗೂ ಪುಸ್ತಕೋದ್ಯಮ ಜೀವಂತವಾಗಿರಲು ಸಾಧ್ಯ ಎಂದು ಸಚಿವ ಶಿವರಾಜ್‌ ತಂಗಡಗಿ ತಿಳಿಸಿದರು.


Click the Play button to hear this message in audio format

ರಾಜ್ಯದ ಪ್ರಕಾಶಕರ ಸಂಕಷ್ಟಗಳು ಗಮನಕ್ಕೆ ಬಂದಿದ್ದು, ಪ್ರಕಾಶಕರ ಹಿತಕಾಯಲು ಸಗಟು ಖರೀದಿ ಯೋಜನೆಗಾಗಿ ಮುಂದಿನ ದಿನಗಳಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರಕ್ಕೆ ಹೆಚ್ಚಿನ ಅನುದಾನ ಒದಗಿಸಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ತಿಳಿಸಿದರು.

ಸೋಮವಾರ(ಜ.12) ತಮ್ಮ ಗೃಹ ಕಚೇರಿಯಲ್ಲಿ ಪುಸ್ತಕ ಪ್ರಾಧಿಕಾರದ ಮನೆಗೊಂದು ಗ್ರಂಥಾಲಯ ಯೋಜನೆಯಡಿ ಗ್ರಂಥಾಲಯ ಅನುಷ್ಠಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಿದ ಅವರು, ಕನ್ನಡ ಪುಸ್ತಕ ಪ್ರಾಧಿಕಾರ ಮನೆಗೊಂದು ಗ್ರಂಥಾಲಯ ಯೋಚನೆಯಡಿ ಉತ್ತಮ ಕೆಲಸ ಮಾಡುತ್ತಿದೆ. ಪುಸ್ತಕ ಪ್ರೀತಿ ಎಂಬುದನ್ನು ಪ್ರತಿಯೊಬ್ಬರು ಬೆಳೆಸಿಕೊಳ್ಳಬೇಕು. ಅವು ನಮ್ಮ ಜ್ಞಾನಾರ್ಜನೆಗೆ ನೆರವಾಗುತ್ತದೆ ಇಂತಹ ಪುಸ್ತಕ ಪ್ರೀತಿಯ ಫಲವಾಗಿಯೇ ಸಾಹಿತಿಗಳು, ಪ್ರಕಾಶಕರು ಹಾಗೂ ಪುಸ್ತಕೋದ್ಯಮ ಜೀವಂತವಾಗಿರಲು ಸಾಧ್ಯ . ಆ ನಿಟ್ಟಿನಲ್ಲಿ ಪುಸ್ತಕ ಪ್ರೇಮ ದೊಡ್ಡ ರೀತಿಯಲ್ಲಿ ಆಂದೋಲನವಾಗಿ ಬೆಳೆಯಬೇಕಿದೆ. ಅದಕ್ಕಾಗಿ ಪುಸ್ತಕ ಪ್ರಾಧಿಕಾರದ ಈ ಯೋಜನೆ ಪೂರಕವಾಗಲಿ ಎಂದು ಹಾರೈಸಿದರು.

ಹಿರಿಯ ಸಾಹಿತಿ ಹಾಗೂ ಮಾಜಿ ಸಚಿವೆ ಡಾ. ಬಿ. ಟಿ ಲಲಿತ ನಾಯಕ್ ಮಾತನಾಡಿ, ಪುಸ್ತಕ ಮನುಷ್ಯನನ್ನು ಮೃಗತ್ವದಿಂದ ಮಾನವತ್ವದ ಕಡೆಗೆ ಕೊಂಡೊಯುತ್ತದೆ. ಪಾಶ್ಚತ್ಯ ದೇಶಗಳಲ್ಲಿರುವ ಪುಸ್ತಕ ಪ್ರೀತಿ ನಮಗೆ ಮಾದರಿಯಾಗಿದೆ. ನಮ್ಮದು ಧರ್ಮಾಧಾರಿತ ಸಮಾಜವಾಗಿದೆ ಇದನ್ನು ಮಾನವ ಧರ್ಮವಾಗಿ ರೂಪಿಸುವ ಹೊಣೆಗಾರಿಕೆ ಪುಸ್ತಕಗಳ ಮೇಲಿದೆ ಎಂದರು. ಪ್ರಾಧಿಕಾರ ಮನೆಗೊಂದು ಗ್ರಂಥಾಲಯ ಯೋಚನೆಯ ಮೂಲಕ ಪುಸ್ತಕ ಪ್ರಕಾಶಕರು, ಸಾಹಿತಿಗಳಿಗೆ ನೆರವಾಗಲು ಹೊರಟಿದ್ದಾರೆ. ಇದೊಂದು ಉತ್ತಮ ಯೋಜನೆ ಈ ಯೋಜನೆ ಯಶಸ್ವಿಯಾಗಲಿ ಎಂದು ಶುಭ ಕೋರಿದರು.

ಪುಸ್ತಕ ಪ್ರಾಧಿಕಾರದ ಅಧ್ಯಕ್ಷ್ಯೆ ಡಾ. ಮಾನಸ ಮಾತನಾಡಿ, ಪ್ರಾಧಿಕಾರದ ಮನೆಗೊಂದು ಗ್ರಂಥಾಲಯ ಯೋಜನೆ ದೊಡ್ಡ ನಿರೀಕ್ಷೆಯೊಂದಿಗೆ ಆರಂಭ ಮಾಡಿದ್ದೇವೆ. ಒಂದು ಲಕ್ಷ ಮನೆಗಳನ್ನು ತಲುಪುವ ಗುರಿ ನಮ್ಮದಾಗಿದೆ. ಈ ನಿಟ್ಟಿನಲ್ಲಿ ಪ್ರತಿಯೊಂದು ಜಿಲ್ಲೆಯಲ್ಲೂ ಜಾಗೃತಿ ಸಮಿತಿ ರಚನೆ ಮಾಡಲಾಗಿದ್ದು, ಜಾಗೃತಿ ಸಮಿತಿ ಸದಸ್ಯರು ಗ್ರಂಥಾಲಯ ರೂಪಿಸುವಿಕೆಗೆ ನೆರವಾಗಲಿದ್ದಾರೆ. ಬೂಕರ್‌ ಪ್ರಶಸ್ತಿ ವಿಜೇತೆ ಭಾನು ಮುಷ್ತಾಕ್ ಅವರ ʼಎದೆಯ ಹಣತೆʼ ಕೃತಿ ಯುರೋಪ್ ದೇಶಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ಮಾರಾಟವಾಗುತ್ತಿದೆ. ಕನ್ನಡದಲ್ಲಿಯೂ ಅಂತಹ ಪುಸ್ತಕ ಸಂಸ್ಕೃತಿ ಬರಬೇಕಿದೆ ಎಂದರು.

Read More
Next Story