Shivaraj Kumar | ಶಿವರಾಜ್​ಕುಮಾರ್​ ಆಪರೇಷನ್ ಸಕ್ಸಸ್; ಹೆಲ್ತ್‌ ಅಪಡೇಟ್‌
x
ಶಿವರಾಜ್‌ ಕುಮಾರ್‌ ಅವರಿಗೆ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ.

Shivaraj Kumar | ಶಿವರಾಜ್​ಕುಮಾರ್​ ಆಪರೇಷನ್ ಸಕ್ಸಸ್; ಹೆಲ್ತ್‌ ಅಪಡೇಟ್‌

ಶಿವರಾಜ್​ ಕುಮಾರ್ ಅವರು ಬೇಗ ಚೇತರಿಕೆ ಕಾಣಲಿ ಎಂದು ರಾಜ್ಯದ ಉದ್ದಗಲಕ್ಕೂ ಹೋಮ-ಹವನಗಳು ನಡೆದಿದ್ದವು. ಸಾಕಷ್ಟು ಕಡೆಗಳಲ್ಲಿ ಪೂಜೆ ಪುನಸ್ಕಾರ ಮಾಡಲಾಗಿತ್ತು. ಶಿವಣ್ಣನ ಅಭಿಮಾನಿಗಳು ದೇವರ ಮೊರೆ ಹೋಗಿದ್ದರು. ಎರಡು ದಿನಗಳ ಮುನ್ನ ಅವರು ಅಮೆರಿಕಕ್ಕೆ ಹೊರಟಿದ್ದು, ಗಣ್ಯರು ಅವರನ್ನು ಬೀಳ್ಕೊಟ್ಟಿದ್ದರು.


Click the Play button to hear this message in audio format

ಅನಾರೋಗ್ಯದ ಕಾರಣದಿಂದಾಗಿ ಅಮೇರಿಕಾದ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಪಡೆಯುತ್ತಿರುವ ನಟ ಶಿವರಾಜ್ ಕುಮಾರ್ ಅವರಿಗೆ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು, ಇದೀಗ ಮುಂದಿನ ಹಂತದ ಚಿಕಿತ್ಸೆಗಳಿಗಾಗಿ ಅಲ್ಲೇ ವಿಶ್ರಾಂತಿ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.

ಭಾರತೀಯ ಕಾಲಮಾನ ಮಂಗಳವಾರ (ಡಿ.24) ಸಂಜೆ 6 ಗಂಟೆಗೆ (ಅಮೆರಿಕದ ಕಾಲಮಾನ ಬೆಳಿಗ್ಗೆ 8 ಗಂಟೆಗೆ) ಆಪರೇಷನ್ ಆರಂಭ ಆಯಿತು. 4-5 ಗಂಟೆಗಳ ಕಾಲ ಆಪರೇಷನ್ ನಡೆದಿದ್ದು ಅದು ಯಶಸ್ವಿಯಾಗಿದೆ ಎಂದು ತಿಳಿದುಬಂದಿದೆ. ಡಾ. ಮುರುಗೇಶ್ ನೇತೃತ್ವದಲ್ಲಿ ಈ ಆಪರೇಷನ್ ನಡೆದಿದೆ. ರಾತ್ರಿ 11.30-12ರ ವೇಳೆಗೆ ಆಪರೇಷನ್ ಪೂರ್ಣಗೊಂಡಿದೆ.

ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿರುವ ಶಿವರಾಜಕುಮಾರ್‌ ಅವರಿಗೆ ತಮಿಳುನಾಡು ಮೂಲದ ವೈದ್ಯ ಡಾ. ಮುರುಗೇಶನ್ ಮನೋಹರನ್ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಶಿವರಾಜಕುಮಾರ್ ಅವರು ಪಿತ್ತಕೋಶದ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ ಎಂಬ ಸುದ್ದಿ ಇದೆ. ಕೆಲವು ತಿಂಗಳುಗಳ ಹಿಂದೆ ಪಿತ್ತಕೋಶದಲ್ಲಿ ಸೋಂಕು ಇರುವುದು ಗೊತ್ತಾಗಿ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಪಡೆಯುತ್ತಲೇ ಒಂದಿಷ್ಟು ಕೆಲಸಗಳನ್ನು ಮುಗಿಸಿದ್ದರು. ನವೆಂಬರ್ 15ರಂದು ಅವರ ನಿರ್ಮಾಣದ 'ಭೈರತಿ ರಣಗಲ್' ಚಿತ್ರವು ಬಿಡುಗಡೆಯಾಯಿತು. ಆ ಚಿತ್ರದ ನಂತರ ಪೂರ್ಣಪ್ರಮಾಣದಲ್ಲಿ ಕೆಲಸಗಳನ್ನು ನಿಲ್ಲಿಸಿ, ಅಮೇರಿಕಾಗೆ ಪ್ರಯಾಣ ಮಾಡಿ ಅಲ್ಲಿ ಆಪರೇಷನ್ ಮಾಡಿಸಿಕೊಳ್ಳುವುದಾಗಿ ಶಿವರಾಜಕುಮಾರ, ಕಳೆದ ತಿಂಗಳು ಹೇಳಿದ್ದರು. ಅದರಂತೆ ಡಿ.18ರಂದು ಶಿವರಾಜಕುಮಾರ್‌ ತಮ್ಮ ಪತ್ನಿ ಗೀತಾ ಮತ್ತು ಮಗಳು ನಿವೇದಿತಾ ಜೊತೆಗೆ ಅಮೇರಿಕಾಗೆ ಪ್ರಯಾಣ ಬೆಳೆಸಿದ್ದರು. ಸದ್ಯ ಅಮೇರಿಕಾದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಿವರಾಜಕುಮಾರ್ ಅವರಿಗೆ ಇಂದು ಮಿಯಾಮಿಯ Miami Cancer Instituteನಲ್ಲಿ ಶಸ್ತ್ರಚಿಕಿತ್ಸೆ ನಡೆದಿದೆ.

ಸರ್ಜರಿ ಬಗ್ಗೆ ಹೆಲ್ತ್​ಅಪ್​ಡೇಟ್ ನೀಡಿದ ವೈದ್ಯರು

ಕ್ಯಾನ್ಸರ್​ಗೆ ಶಿವರಾಜ್​ಕುಮಾರ್ ಅವರು ಫ್ಲೋರಿಡಾದಲ್ಲಿರುವ ಮಿಯಾಮಿ ಕ್ಯಾನ್ಸರ್ ಇನ್​ಸ್ಟಿಟ್ಯೂಟ್​ನಲ್ಲಿ ಸರ್ಜರಿ ಮಾಡಿಸಿಕೊಂಡಿದ್ದಾರೆ. ಈಗ ವೈದ್ಯರು ಶಿವರಾಜ್​ಕುಮಾರ್ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ್ದಾರೆ.

‘ದೇವರ ದಯೆಯಿಂದ, ಹಲವರ ಆಶೀರ್ವಾದ ಹಾಗೂ ಪ್ರಾರ್ಥನೆಯಿಂದ ಸರ್ಜರಿ ಯಶಸ್ವಿಯಾಗಿದೆ. ಅವರಿಗೆ ಕಾನ್ಸರ್‌ ತಗುಲಿದ ಮೂರ್ತಪಿಂಡವನ್ನು ಸಂಪೂರ್ಣವಾಗಿ ತೆಗೆದುಹಾಕಲಾಗಿದೆ. ಶಸ್ತ್ರಚಿಕಿತ್ಸೆಯ ನಂತರ ಅವರದ್ದೇ ಕರುಳನ್ನು ಬಳಸಿ ಕೃತಕ ಮೂರ್ತಪಿಂಡವನ್ನು ಮತ್ತೆ ಅಳವಡಿಸಲಾಗಿದೆ. ಶಿವರಾಜ್‌ಕುಮಾರ್‌ ಮಾನಸಿಕವಾಗಿ ಮತ್ತು ದೈಹಿಕವಾಗಿ ಅತ್ಯಂತ ಧೈರ್ಯದಲ್ಲಿದ್ದು ಚಿಕಿತ್ಸೆಗೆ ಸ್ಪಂದಿಸಿದ್ದಾರೆ. ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಮತ್ತು ಶಸ್ತ್ರಚಿಕಿತ್ಸೆಯ ನಂತರವೂ ಶಿವಣ್ಣ ಅವರ ಆರೋಗ್ಯದಲ್ಲಿ ಯಾವುದೇ ಏರುಪೇರುಗಳಾಗಿಲ್ಲ. ಅವರು ಶೀಘ್ರವೇ ಸಂಪೂರ್ಣ ಚೇತರಿಕೆ ಕಾಣಲಿದ್ದಾರೆ. ನಿಮ್ಮ ಬೆಂಬಲಕ್ಕೆ ಧನ್ಯವಾದ’ ಎಂದು ವೈದ್ಯರು ಹೇಳಿದ್ದಾರೆ.

ಶುಭ ಹಾರೈಸಿದ್ದ ಸಿ.ಎಂ ಸಿದ್ದರಾಮಯ್ಯ

ನಟ ಶಿವರಾಜ್ ಕುಮಾರ್ ಅವರು ಶಸ್ತ್ರಚಿಕಿತ್ಸೆ ಪಡೆದು ಗುಣಮುಖರಾಗಿ ಬರಲಿ ಎಂದು ನಿನ್ನೆ ದೂರವಾಣಿ ಕರೆ ಮಾಡಿ ಸಿಎಂ ಸಿದ್ಧರಾಮಯ್ಯ ಅವರು ಶುಭ ಹಾರೈಸಿದ್ದರು.

ಗುಣಮುಖರಾಗಿ ಬರಲು ಹೋಮ ಹವನ

ಶಿವರಾಜ್​ ಕುಮಾರ್ ಅವರು ಬೇಗ ಚೇತರಿಕೆ ಕಾಣಲಿ ಎಂದು ಹೋಮ-ಹವನಗಳು ನಡೆದಿದ್ದವು. ಸಾಕಷ್ಟು ಕಡೆಗಳಲ್ಲಿ ಪೂಜೆ ಪುನಸ್ಕಾರ ಮಾಡಲಾಗಿತ್ತು. ಶಿವಣ್ಣನ ಅಭಿಮಾನಿಗಳು ದೇವರ ಮೊರೆ ಹೋಗಿದ್ದರು. ಎರಡು ದಿನಗಳ ಮುನ್ನ ಅವರು ಅಮೆರಿಕಕ್ಕೆ ಹೊರಟಿದ್ದು, ಗಣ್ಯರು ಅವರನ್ನು ಬೀಳ್ಕೊಂಡಿದ್ದರು.

ಹೊಸ ವರ್ಷಕ್ಕೆ ಶುಭ ಹಾರೈಸಿದ್ದ ಶಿವರಾಜ್‌ ಕುಮಾರ್‌

ಶಿವರಾಜಕುಮಾರ 35 ದಿನಗಳ ಕಾಲ ದೇಶದಿಂದ ದೂರ ಇರಲಿದ್ದು, ಜನವರಿ 25ರಂದು ಅಲ್ಲಿಂದ ಹೊರಟು, 26ಕ್ಕೆ ವಾಪಸಾಗಲಿದ್ದಾರೆ. ಹೊಸ ವರ್ಷದ ಸಂದರ್ಭದಲ್ಲಿ ತಾನಿರುವುದಿಲ್ಲ ಎಂದು ಅಮೇರಿಕಾಗೆ ಹೋಗುವ ಸಂದರ್ಭದಲ್ಲಿ ಹೇಳಿದ್ದ ಶಿವಣ್ಣ, ರಾಜ್ಯದ ಜನತೆಗೆ ಹೊಸ ವರ್ಷದ ಶುಭಾಶಯಗಳನ್ನು ಮುಂಗಡವಾಗಿಯೇ ತಿಳಿಸಿದ್ದರು. ಈ ಕುರಿತು ಮಾತನಾಡಿದ್ದ ಅವರು, 'ಈ ಬಾರಿ ಜನವರಿ ಒಂದರಂದು ನಾನು ಇಲ್ಲಿರುವುದಿಲ್ಲ. ಎಲ್ಲರನ್ನೂ ಬಹಳವಾಗಿ ಮಿಸ್ ಮಾಡಿಕೊಳ್ಳುತ್ತೇನೆ. ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು. ಎಲ್ಲರಿಗೂ ಒಳ್ಳೆಯದಾಗಲಿ. ಡಿ.20ರಂದು 'UI' ಬಿಡುಗಡೆಯಾಗುತ್ತಿದೆ. ಡಿ. 25ಕ್ಕೆ 'ಮ್ಯಾಕ್ಸ್' ಬಿಡುಗಡೆಯಾಗುತ್ತಿದೆ. ಎರಡೂ ಚಿತ್ರಗಳಿಗೂ ಒಳ್ಳೆಯದಾಗಲಿ. ಮುಂದಿನ ವರ್ಷ ಕನ್ನಡ ಚಿತ್ರರಂಗಕ್ಕೆ ಇನ್ನಷ್ಟು ಚೆನ್ನಾಗಿ ಆಗಲಿ' ಎಂದು ಹೇಳಿದ್ದರು.

ಸದ್ಯ ನಟ ಶಿವರಾಜ್‌ ಕುಮಾರ್‌ ನಟನೆಯ ‘45’ ಸಿನಿಮಾ ಕೆಲಸಗಳು ಪೂರ್ಣಗೊಂಡಿವೆ. ಈ ಚಿತ್ರ 2025ರಲ್ಲಿ ತೆರೆಗೆ ಬರುವ ನಿರೀಕ್ಷೆ ಇದೆ. ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಇದೆ. ಶಿವರಾಜ್‌ ಕುಮಾರ್‌ ಕೆಲ ತಿಂಗಳು ವಿರಾಮ ಪಡೆಯಲಿದ್ದು ಆ ಬಳಿಕ ನಟನೆಗೆ ಮರಳಲಿದ್ದಾರೆ.

Read More
Next Story