ಅಂಕೋಲ ಗುಡ್ಡ ಕುಸಿತ: 28 ದಿನಗಳ ಬಳಿಕ ಗಂಗಾವಳಿ ನದಿಯಲ್ಲಿ‌ ಲಾರಿ ಬಿಡಿ ಭಾಗ ಪತ್ತೆ
x

ಅಂಕೋಲ ಗುಡ್ಡ ಕುಸಿತ: 28 ದಿನಗಳ ಬಳಿಕ ಗಂಗಾವಳಿ ನದಿಯಲ್ಲಿ‌ ಲಾರಿ ಬಿಡಿ ಭಾಗ ಪತ್ತೆ


ಅಂಕೋಲ ತಾಲೂಕಿನ ಶಿರೂರು ಬಳಿಯ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಜುಲೈ 16 ರಂದು ನಡೆದಿದ್ದ ಗುಡ್ಡ ಕುಸಿತದಲ್ಲಿ 11 ಜನ ಮಣ್ಣಿನಲ್ಲಿ ಕೊಚ್ಚಿ ಹೋಗಿದ್ದರು. ಅದರಲ್ಲಿ 8 ಜನರನ್ನು ಈಗಾಗಲೇ ಪತ್ತೆ ಮಾಡಿದ್ದು, ಇನ್ನುಳಿದ ಕೇರಳ ಮೂಲದ ಲಾರಿ ಚಾಲಕ ಅರ್ಜುನ್, ಶಿರೂರಿನ ಲೋಕೇಶ್ ನಾಯ್ಕ ಮತ್ತು ಜಗನ್ನಾಥ ನಾಯ್ಕ ರವರಿಗಾಗಿ ಮುಳುಗು ತಜ್ಞರಿಂದ ಶೋಧಕಾರ್ಯ ನಡೆಯುತ್ತಿದೆ. ಈ ವೇಳೆ ನಾಪತ್ತೆಯಾಗಿದ್ದ ಲಾರಿಯ ಬಿಡಿಭಾಗ ಪತ್ತೆಯಾಗಿದೆ.

ಕೇರಳ ಮೂಲದ ಚಾಲಕ ಅರ್ಜುನ್ ಓಡಿಸುತ್ತಿದ್ದ ಲಾರಿಯ ಜಾಕ್ ಮಂಗಳವಾರ (ಆ.13) ಗಂಗಾವಳಿ ನದಿಯಲ್ಲಿ ಸ್ಕೂಬಾ ಡೈವ್ ಕಾರ್ಯಾಚರಣೆ ವೇಳೆ ಪತ್ತೆಯಾಗಿದೆ. ಪತ್ತೆಯಾಗಿರುವ ಜಾಕ್ ಅರ್ಜುನ್ ಓಡಿಸುತ್ತಿದ್ದ ಲಾರಿಯದ್ದೇ ಎಂದು ಲಾರಿ ಮಾಲಿಕ ಮುಫಿನ್ ಖಚಿತ ಪಡಿಸಿದ್ದಾರೆ. ಲಾರಿಯ ಎರಡು ಬಿಡಿ ಭಾಗಗಳಾದ ಲಾರಿ ಬಾಗಿಲಿನ ಕೀಲು ಹಾಗೂ ಜಾಕ್ ಪತ್ತೆಯಾಗಿದೆ. 29ನೇ ದಿನ ಗಂಗಾವಳಿ ನದಿಯಲ್ಲಿ ಈಜು ತಜ್ಞ ಈಶ್ವರ ಮಲ್ಪೆ ತಂಡದಿಂದ ಶೋಧ ಕಾರ್ಯ ಮುಂದುವರೆದಿದೆ.

ಕಳೆದ ಜಲೈ 25 ಗಂಗಾವಳಿ ನದಿಯಲ್ಲಿ ಅರ್ಜುನ್ ಟ್ರಕ್‌ನಲ್ಲಿದ್ದ ಅಕೇಶಿಯ ಮರದ ತುಂಡೊಂದು ಪತ್ತೆಯಾಗಿತ್ತು. ತೇಲಿಬಂದ ಅಕೇಶಿಯ ತುಂಡಲ್ಲಿ ಅರಣ್ಯ ಇಲಾಖೆಯ ಮಾರ್ಕ್​ ಇರುವುದರಿಂದ ಸ್ಥಳಕ್ಕೆ ಕಾಣೆಯಾದ ಟ್ರಕ್ ಚಾಲಕ ಅರ್ಜುನ್ ಕಡೆಯ ಟ್ರಕ್ ಮಾಲೀಕರು ತೆರಳಿ ದೃಢಪಡಿಸಿದ್ದರು. ಆ ಮೂಲಕ ಲಾರಿ ನದಿಯಲ್ಲಿಯೇ ಇರುವುದು ಖಚಿತವಾಗಿತ್ತು. ಇದೀಗ ಲಾರಿಯ ಜಾಕ್​ ಪತ್ತೆಯಾಗಿದೆ.

Read More
Next Story