ರೈತ ಹೋರಾಟಗಾರ್ತಿಗೆ ಅಪಮಾಣ ಕಂಗನಾಗೆ ಸುಪ್ರೀಂನಲ್ಲ ಹಿನ್ನಡೆ, ಮಾನನಷ್ಟ ಮೊಕದ್ದಮೆ ರದ್ದು ಅರ್ಜಿ ವಾಪಸ್
x

ರೈತ ಹೋರಾಟಗಾರ್ತಿಗೆ ಅಪಮಾಣ ಕಂಗನಾಗೆ ಸುಪ್ರೀಂನಲ್ಲ ಹಿನ್ನಡೆ, ಮಾನನಷ್ಟ ಮೊಕದ್ದಮೆ ರದ್ದು ಅರ್ಜಿ ವಾಪಸ್

ವಿಚಾರಣೆಯ ಸಂದರ್ಭದಲ್ಲಿ, "ಅದು ಕೇವಲ ರಿಟ್ವೀಟ್​ ಆಗಿರಲಿಲ್ಲ. ನೀವು ಅದಕ್ಕೆ ನಿಮ್ಮದೇ ಆದ ಕಾಮೆಂಟ್ ಸೇರಿಸಿ, ಮಸಾಲೆ ಬೆರೆಸಿದ್ದೀರಿ," ಎಂದು ನ್ಯಾಯಪೀಠವು ಕಟುವಾಗಿ ಅಭಿಪ್ರಾಯಪಟ್ಟಿತು.


2020-21ರ ರೈತ ಹೋರಾಟದ ಸಂದರ್ಭದಲ್ಲಿ, ಪ್ರತಿಭಟನಾಕಾರರೊಬ್ಬರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ತಮ್ಮ ವಿರುದ್ಧ ದಾಖಲಾಗಿದ್ದ ಮಾನನಷ್ಟ ಮೊಕದ್ದಮೆಯನ್ನು ರದ್ದುಗೊಳಿಸುವಂತೆ ಕೋರಿ ನಟಿ ಹಾಗೂ ಬಿಜೆಪಿ ಸಂಸದೆ ಕಂಗನಾ ರಣಾವತ್ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ನಿಂದ ಹಿಂಪಡೆಯಲಾಗಿದೆ.

ಶುಕ್ರವಾರ, ನ್ಯಾಯಮೂರ್ತಿ ವಿಕ್ರಮ್ ನಾಥ್ ಮತ್ತು ನ್ಯಾಯಮೂರ್ತಿ ಸಂದೀಪ್ ಮೆಹ್ತಾ ಅವರಿದ್ದ ಪೀಠವು ಅರ್ಜಿಯ ವಿಚಾರಣೆಗೆ ನಿರಾಸಕ್ತಿ ತೋರಿದ ಹಿನ್ನೆಲೆಯಲ್ಲಿ, ಕಂಗನಾ ಪರ ವಕೀಲರು ಅರ್ಜಿಯನ್ನು ಹಿಂಪಡೆದರು.

"ನೀವು ಅದಕ್ಕೆ ಮಸಾಲೆ ಸೇರಿಸಿದ್ದೀರಿ": ಸುಪ್ರೀಂ ಕೋರ್ಟ್

ವಿಚಾರಣೆಯ ಸಂದರ್ಭದಲ್ಲಿ, "ಅದು ಕೇವಲ ರಿಟ್ವೀಟ್​ ಆಗಿರಲಿಲ್ಲ. ನೀವು ಅದಕ್ಕೆ ನಿಮ್ಮದೇ ಆದ ಕಾಮೆಂಟ್ ಸೇರಿಸಿ, ಮಸಾಲೆ ಬೆರೆಸಿದ್ದೀರಿ," ಎಂದು ನ್ಯಾಯಪೀಠವು ಕಟುವಾಗಿ ಅಭಿಪ್ರಾಯಪಟ್ಟಿತು. ಈ ಹಿನ್ನೆಲೆಯಲ್ಲಿ, ವಿಚಾರಣಾ ನ್ಯಾಯಾಲಯದಲ್ಲಿ ಪರ್ಯಾಯ ಪರಿಹಾರಗಳನ್ನು ಕಂಡುಕೊಳ್ಳುವಂತೆ ಸೂಚನೆ ನೀಡಿ, ಅರ್ಜಿಯನ್ನು ವಜಾಗೊಳಿಸಲು ನಿರಾಕರಿಸಿತು.

ಪ್ರಕರಣದ ಹಿನ್ನೆಲೆ ಏನು?

2020-21ರಲ್ಲಿ ನಡೆದ ರೈತ ಹೋರಾಟದ ಸಂದರ್ಭದಲ್ಲಿ, ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಮಹಿಳೆಯೊಬ್ಬರ ಕುರಿತು ಕಂಗನಾ ರಣಾವತ್ ರಿಟ್ವೀಟ್​ ಮಾಡಿದ್ದರು. ಪಂಜಾಬ್‌ನ ಭಟಿಂಡಾ ಜಿಲ್ಲೆಯ ಬಹದ್ದೂರ್‌ಗಢ್ ಜಂಡಿಯಾನ್ ಗ್ರಾಮದ 73 ವರ್ಷದ ಮಹಿಂದರ್ ಕೌರ್ ಎಂಬ ವೃದ್ಧೆಯನ್ನು, ಶಹೀನ್ ಬಾಗ್ ಪ್ರತಿಭಟನೆಯ "ದಾದಿ" ಎಂದು ತಪ್ಪಾಗಿ ಗುರುತಿಸಿ, "ಅವರು 100 ರೂಪಾಯಿಗೂ ಲಭ್ಯರಿದ್ದಾರೆ," ಎಂದು ಕಂಗನಾ ತಮ್ಮ ಟ್ವೀಟ್‌ನಲ್ಲಿ ಬರೆದಿದ್ದರು ಎಂದು ಆರೋಪಿಸಲಾಗಿದೆ.

ಈ ಹೇಳಿಕೆಯು ಸುಳ್ಳು ಮತ್ತು ತಮ್ಮ ಪ್ರತಿಷ್ಠೆಗೆ ಧಕ್ಕೆ ತಂದಿದೆ ಎಂದು ಆರೋಪಿಸಿ, ಮಹಿಂದರ್ ಕೌರ್ ಅವರು 2021ರ ಜನವರಿಯಲ್ಲಿ ಭಟಿಂಡಾ ನ್ಯಾಯಾಲಯದಲ್ಲಿ ಕಂಗನಾ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಈ ಮೊಕದ್ದಮೆಯನ್ನು ರದ್ದುಗೊಳಿಸುವಂತೆ ಕೋರಿ ಕಂಗನಾ ಈ ಹಿಂದೆ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ಗೆ ಮೊರೆ ಹೋಗಿದ್ದರೂ, ಅಲ್ಲೂ ಅರ್ಜಿ ವಜಾಗೊಂಡಿತ್ತು. ಇದೀಗ ಸುಪ್ರೀಂ ಕೋರ್ಟ್‌ನಲ್ಲೂ ಹಿನ್ನಡೆಯಾಗಿರುವುದರಿಂದ, ಕಂಗನಾ ರಣಾವತ್ ಅವರು ಭಟಿಂಡಾ ನ್ಯಾಯಾಲಯದಲ್ಲಿ ವಿಚಾರಣೆಯನ್ನು ಎದುರಿಸಬೇಕಾಗಿದೆ.

Read More
Next Story