2nd PU EXAM | ಪರೀಕ್ಷಾ ಮಾದರಿಯಲ್ಲಿ ಮಹತ್ವದ ಬದಲಾವಣೆ
ದ್ವಿತೀಯ ಪಿಯು ಲಿಖಿತ ಪರೀಕ್ಷೆಯ ಅವಧಿ ಇಳಿಕೆ ಮಾಡಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಸುತ್ತೋಲೆ ಹೊರಡಿಸಿದೆ. ಈ ಮೂಲಕ ದ್ವಿತೀಯ ಪಿಯು ವಿದ್ಯಾರ್ಥಿಗಳ ಪರೀಕ್ಷೆ ಬರೆಯುವ ಸಮಯದ ಅವಧಿ ಕಡಿಮೆಯಾಗಲಿದೆ.
ದ್ವಿತೀಯ ಪಿಯು ಲಿಖಿತ ಪರೀಕ್ಷೆಯ ಅವಧಿ ಇಳಿಕೆ ಮಾಡಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಸುತ್ತೋಲೆ ಹೊರಡಿಸಿದೆ. ಈ ಮೂಲಕ ದ್ವಿತೀಯ ಪಿಯು ವಿದ್ಯಾರ್ಥಿಗಳ ಪರೀಕ್ಷೆ ಬರೆಯುವ ಸಮಯ ಗಣನೀಯವಾಗಿ ಕಡಿಮೆಯಾಗಲಿದೆ.
ದ್ವಿತೀಯ ಪಿಯುಸಿ ಪರೀಕ್ಷೆಯ ಅವಧಿಯನ್ನು 15 ನಿಮಿಷಗಳ ಕಾಲ ಇಳಿಕೆ ಮಾಡುವುದಾಗಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಘೋಷಿಸಿದೆ. ಇದರಿಂದಾಗಿ, 3 ಗಂಟೆಗಳ ಕಾಲ ಬರೆಯಬೇಕಿದ್ದ ಪರೀಕ್ಷೆ ಅವಧಿ 2 ಗಂಟೆ 45 ನಿಮಿಷಕ್ಕೆ ಇಳಿಕೆಯಾಗಲಿದೆ. ಈ ಅವಧಿಯಲ್ಲಿ 100 ಅಂಕಕ್ಕೆ ಬದಲು 80 ಅಂಕಕ್ಕೆ ಪರೀಕ್ಷೆ ಬರೆಯುವಂತೆ ಮಾಡಲಾಗುತ್ತದೆ. ಹೊಸ ನಿಯಮ ಈ ವರ್ಷದ ಅಂದರೆ 2024-25ನೇ ಸಾಲಿನ ಪರೀಕ್ಷೆಯಿಂದಲೇ ಜಾರಿ ಆಗಲಿದೆ. ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಇಲಾಖೆ ವೆಬ್ ಸೈಟ್ ನಲ್ಲಿ ಪ್ರಕಟ ಮಾಡಿದೆ.
ಪರೀಕ್ಷೆಯ ಅವಧಿ ಕಡಿತವಾದರೂ ವಿದ್ಯಾರ್ಥಿಗಳು ಪರೀಕ್ಷಾ ಹಾಲ್ನಲ್ಲಿ ಮೂರು ಗಂಟೆ ಇರಲೇಬೇಕಾಗುತ್ತದೆ. ಪರೀಕ್ಷೆಯ ಆರಂಭದ 15 ನಿಮಿಷವನ್ನು ಪ್ರಶ್ನೆಗಳನ್ನು ಓದಿಕೊಳ್ಳಲು ಬಳಸಲು ಅವಕಾಶ ನೀಡಲಾಗುತ್ತದೆ. ಲಿಖಿತ ಬರವಣಿಗೆಗೆ ಮಾತ್ರ 2 ಗಂಟೆ 45 ನಿಮಿಷಗಳ ಕಾಲಾವಕಾಶ ನೀಡಲಾಗುತ್ತದೆ. ಈ ಹಿಂದೆಯೂ 3 ಗಂಟೆ ಅವಧಿಯ ಪರೀಕ್ಷೆ ಇದ್ದಾಗಲೂ ಪ್ರಶ್ನೆಗಳನ್ನು ಓದಿಕೊಳ್ಳಲು 15 ನಿಮಿಷವನ್ನು ಹೆಚ್ಚುವರಿಯಾಗಿ ಕೊಡಲಾಗುತ್ತಿತ್ತು.