ಮಂಗಳೂರು | ಎಸ್‌ಡಿಪಿಐ ನಾಯಕ ಅಶ್ರಫ್ ಕಲಾಯಿ ಹತ್ಯೆ ಪ್ರಕರಣದ ಆರೋಪಿಗೆ ಚೂರಿ ಇರಿತ
ಪ್ರಾಣಾಪಾಯದಿಂದ ಗಾಯಾಳು ಪಾರಾಗಿದ್ದು, ಮೇಲ್ನೋಟಕ್ಕೆ ಘಟನೆಗೆ ವೈಯಕ್ತಿಕ ದ್ವೇಷವೇ ಕಾರಣ ಎಂದು ಪೊಲೀಸ್ ಮೂಲಗಳು ತಿಳಿಸಿದೆ.
ಲೋಕಸಭಾ ಚುನಾವಣೆ ನಡೆಯಯುತ್ತಿರುವ ಹೊತ್ತಿನಲ್ಲೇ ಸೂಕ್ಷ್ಮ ಪ್ರದೇಶವೆಂದು ಗುರುತಿಸಲ್ಪಟ್ಟಿರುವ ದಕ್ಷಿಣ ಕನ್ನಡದ ಮತಗಟ್ಟೆಯೊಂದರಲ್ಲಿ ಚೂರಿ ಇರಿತ ಪ್ರಕರಣವೊಂದು ನಡೆದಿದೆ.
ಕೆಲ ವರ್ಷಗಳ ಹಿಂದೆ ಕರಾವಳಿಯಲ್ಲಿ ಭಾರೀ ಸದ್ದು ಮಾಡಿದ್ದ ಎಸ್‌ಡಿಪಿಐ ನಾಯಕ ರಿಯಾಝ್ ಕಲಾಯಿ ಹತ್ಯಾ ಪ್ರಕರಣದ ಆರೋಪಿ, ರೌಡಿ ಶೀಟರ್ ಪವನ್ ಎಂಬಾತನ ಎದೆಗೆ ಮತ್ತೋರ್ವ ರೌಡಿ ಶೀಟರ್ ಚರಣ್ ಚೂರಿ ಇರಿದ್ದಾನೆ.
ಮಂಗಳೂರು ಹೊರವಲಯದ ಪರಂಗಿಪೇಟೆಯ ಕುಮ್ಡೇಲು ಎಂಬಲ್ಲಿನ ಮತಗಟ್ಟೆ ಪ್ರದೇಶದಲ್ಲೇ ಘಟನೆ ನಡೆದಿದ್ದು, ಗಾಯಾಳುವನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ.
ಆಸ್ಪತ್ರೆಗೆ ತೆರಳಿ ಗಾಯಾಳುವಿನ ಹೇಳಿಕೆ ದಾಖಲಿಸಲಾಗುತ್ತಿದೆ ಎಂದು ಬಂಟ್ವಾಳ ಎಸ್‌ಐ ಹರೀಶ್ ಅವರು ʼದಿ ಫೆಡೆರಲ್ʼಗೆ ತಿಳಿಸಿದ್ದಾರೆ.
ಪ್ರಾಣಾಪಾಯದಿಂದ ಗಾಯಾಳು ಪವನ್ ಪಾರಾಗಿದ್ದು, ಮೇಲ್ನೋಟಕ್ಕೆ ಘಟನೆಗೆ ವೈಯಕ್ತಿಕ ದ್ವೇಷವೇ ಕಾರಣ ಎಂದು ಪೊಲೀಸ್ ಮೂಲಗಳು ತಿಳಿಸಿದೆ.
Next Story