ಪ್ರಗತಿಪರರಿಂದ ಇಂದು ಸಂವಿಧಾನ ಉಳಿಸಿ ಜಾಗೃತಿ ನಡಿಗೆ
x
ಜಾಗೃತಿ ನಡಿಗೆ

ಪ್ರಗತಿಪರರಿಂದ ಇಂದು "ಸಂವಿಧಾನ ಉಳಿಸಿ ಜಾಗೃತಿ ನಡಿಗೆ"

ಜಾಗೃತ ನಾಗರಿಕರು ಕರ್ನಾಟಕದ ವತಿಯಿಂದ ಇಂದು (ಏಪ್ರಿಲ್‌ 18) ಬೆಂಗಳೂರಿನ ಜಯನಗರ ಶಾಪಿಂಗ್‌ ಕಾಂಪ್ಲೆಕ್ಸ್‌ನಿಂದ "ಸಂವಿಧಾನ ಉಳಿಸಿ ಜಾಗೃತಿ ನಡಿಗೆ"ಯನ್ನು ಆಯೋಜಿಸಲಾಗಿದೆ.


ಜಾಗೃತ ನಾಗರಿಕರು ಕರ್ನಾಟಕದ ವತಿಯಿಂದ ಇಂದು (ಏಪ್ರಿಲ್‌ 18) ಬೆಂಗಳೂರಿನ ಜಯನಗರ ಶಾಪಿಂಗ್‌ ಕಾಂಪ್ಲೆಕ್ಸ್‌ನಿಂದ "ಸಂವಿಧಾನ ಉಳಿಸಿ ಜಾಗೃತಿ ನಡಿಗೆ"ಯನ್ನು ಆಯೋಜಿಸಲಾಗಿದೆ. ಗುರುವಾರ ಸಂಜೆ 4.30 ರಿಂದ ಸಂಜೆ 7ಗಂಟೆಯ ವರೆಗೆ ಜಾಥಾ ನಡೆಯಲಿದೆ.

ಸರ್ವ ಜನಾಂಗದ ಸಹಬಾಳ್ಳೆಗಾಗಿ, ಪ್ರಜಾಪ್ರಭುತ್ವದ ಉಳಿವಿಗಾಗಿ ಎನ್ನುವ ಘೋಷಾವಾಕ್ಯದಡಿ,ಈ ಜಾಥಾ ಹಮ್ಮಿಕೊಳ್ಳಲಾಗಿದ್ದು, ಬನ್ನಿ ಕೋಮುವಾದವನ್ನು ಹಿಮ್ಮೆಟ್ಟಿಸೋಣ, ಸಾಮರಸ್ಯ ಉಳಿಸೋಣ ಎಂದು ಕರೆ ನೀಡಲಾಗಿದೆ.

ಜಾಗೃತ ನಡಿಗೆಯಲ್ಲಿ ಡಾ.ಕೆ.ಮರುಳಸಿದ್ದಪ್ಪ, ಡಾ.ಜಿ.ರಾಮಕೃಷ್ಣ, ಮಾವಳ್ಳಿ ಶಂಕರ್, ಡಾ.ವಿಜಯಾ, ಹಂಸಲೇಖ, ಪ್ರೊ.ಎಸ್. ಜಿ.ಸಿದ್ದರಾಮಯ್ಯ, ಜಾಣಗೆರೆ ವೆಂಕಟರಾಮಯ್ಯ, ಬಂಜಗೆರೆ ಜಯಪ್ರಕಾಶ್ ಪ್ರಗತಿಪರರು, ಸಾಹಿತಿಗಳು ಸೇರಿದಂತೆ ಹಲವರು ಭಾಗವಹಿಸುತ್ತಿದ್ದಾರೆ.

Read More
Next Story