
ಕಪ್ಪು ಮಾರುಕಟ್ಟೆಯಲ್ಲಿ ಸರಕುಗಳ ಮಾರಾಟ: 409 ಪ್ರಕರಣಗಳು ದಾಖಲು
ರಾಜ್ಯದಲ್ಲಿ ಸುಮಾರು ವರ್ಷಗಳಿಂದ ತಾಂತ್ರಿಕ ದೋಷವಿದ್ದಂತಹ ಸಮಸ್ಯೆಯನ್ನು ನಿವಾರಣೆ ಮಾಡಿದ್ದು ಯಾವುದೇ ಪಡಿತರ ವಿತರಣೆಯಲ್ಲಿ ಸಮಸ್ಯೆ ಇಲ್ಲ.
ಕಪ್ಪು ಮಾರುಕಟ್ಟೆಯಲ್ಲಿ ಸರಕುಗಳ ಮಾರಾಟ ಸೇರಿದಂತೆ ಇನ್ನಿತರೆ ಚಟುವಟಿಕೆಗಳು ನಡೆಯುತ್ತಿರುವ ಕುರಿತು 409 ಪ್ರಕರಣಗಳು ದಾಖಲಾಗಿದ್ದು, 20 ಕೋಟಿ ರೂ.ಗಿಂತ ಹೆಚ್ಚು ದಂಡ ವಿಧಿಸಲಾಗಿದೆ. ಈಗಾಗಲೇ 10 ಕೋಟಿ ರೂ. ಹಣ ಸಂಗ್ರಹಿಸಲಾಗಿದೆ ಎಂದು ಆಹೃ ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದ್ದಾರೆ.
ವಿಧಾನಪರಿಷತ್‌ನಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಸದಸ್ಯ ಎಂ.ನಾಗರಾಜು ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದಲ್ಲಿ ಸುಮಾರು ವರ್ಷಗಳಿಂದ ತಾಂತ್ರಿಕ ದೋಷವಿದ್ದಂತಹ ಸಮಸ್ಯೆಯನ್ನು ನಿವಾರಣೆ ಮಾಡಿದ್ದು ಯಾವುದೇ ಪಡಿತರ ವಿತರಣೆಯಲ್ಲಿ ಸಮಸ್ಯೆ ಇಲ್ಲ. ದಕ್ಷಿಣ ಭಾರತದಲ್ಲಿಯೇ ಅತಿ ಹೆಚ್ಚು ಬಿಪಿಎಲ್ ಇರುವ ರಾಜ್ಯಗಳಲ್ಲಿ ಕರ್ನಾಟಕ ರಾಜ್ಯವೇ ಮೊದಲಾಗಿದೆ. ಸುಮಾರು 1.28 ಲಕ್ಷ ಕಾರ್ಡಗಳು ಬಿಪಿಎಲ್ ಇವೆ. ತಮಿಳುನಾಡಿನಲ್ಲಿ ಶೇ50 ರಷ್ಟು ಬಿಪಿಎಲ್ ಕಾರ್ಡ್‌ಗಳಿವೆ. ಕೇರಳದಲ್ಲಿ ಶೇ 45., ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯದಲ್ಲಿ ಶೇ 50 ಬಿಪಿಎಲ್ ಕಾರ್ಡ್ ಗಳಿದ್ದು, ರಾಜ್ಯದಲ್ಲಿ ಶೇ 75 ರಿಂದ 80 ರಷ್ಟು ಕಾರ್ಡ್ ಗಳಿರಲು ಸಾಧ್ಯವೇ ಎಂದು ಹೇಳಿದರು.
ಈ ಹಿಂದೆ ಪರಿಷ್ಕರಣೆ ಮಾಡಲು ಕೈಗೆತ್ತಿಕೊಂಡಾಗ 15 ಲಕ್ಷ ಕಾರ್ಡ್‌ನ್ನು ಗುರುತಿಸಿ ಸುಮಾರು 50 ರಿಂದ 60 ಲಕ್ಷ ಅನರ್ಹ ಫಲಾನುಭವಿಗಳನ್ನು ಗುರುತಿಸಿದ್ದು, ಅಧಿಕಾರಿಗಳು ಉತ್ತಮ ಕೆಲಸ ಮಾಡಿದ್ದರು. ಆದರೆ ಶಾಸಕರು ಗೊಂದಲಗಳನ್ನು ಸೃಷ್ಟಿಸಿದ ಕಾರಣ ಕೈ ಬಿಡಲಾಯಿತು. ಪರಿಷ್ಕರಣೆ ಕಾರ್ಯ ನಡೆಸಲು ಕೇಂದ್ರ ಸರ್ಕಾರದ 12 ಮಾನದಂಡಗಳು ಹಾಗೂ ರಾಜ್ಯ ಸರ್ಕಾರದ 5 ಮಾನದಂಡಗಳ ಅನ್ವಯ ಪರಿಷ್ಕರಣೆಗೆ ಮುಂದಾಗಿದ್ದು, ಎಲ್ಲಾ ಸದಸ್ಯರು ಸಹಕರಿಸಲು ಮನವಿ ಮಾಡಿದರು ಎಂದರು.
ಸರ್ವ ಸದಸ್ಯರ ಸಹಕಾರದಿಂದ ಮಾತ್ರ ಪರಿಷ್ಕರಣೆ ಕಾರ್ಯ ನಡೆಸಲು ಸಾಧ್ಯವಿರುವುದರಿಂದ ಇದರಲ್ಲಿ ಯಾವುದೇ ರಾಜಕಾರಣ ಬೆರಸಬಾರದು. ಅನರ್ಹರನ್ನು ಗುರುತಿಸಿ ಅವರನ್ನು ಬಿಪಿಎಲ್‌ನಿಂದ ಎಪಿಎಲ್ ಗೆ ವರ್ಗಾಯಿಸಿ ಅರ್ಹರಿಗೆ ಮಾತ್ರ ಈ ಸೌಲಭ್ಯಗಳನ್ನು ಕಲ್ಲಿಸಬೇಕು ಎಂದು ತಿಳಿಸಿದರು.