ಸಚಿವ ತಂಗಡಗಿ ವಿರುದ್ಧ ಚು. ಆಯೋಗಕ್ಕೆ ಸುಳ್ಳು ಆಸ್ತಿ ಮಾಹಿತಿ? ತನಿಖೆಗೆ ರಾಜ್ಯಪಾಲರ ಪೂರ್ವಾನುಮತಿ ಕೋರಿಕೆ
x

ಸಚಿವ ತಂಗಡಗಿ ವಿರುದ್ಧ ಚು. ಆಯೋಗಕ್ಕೆ ಸುಳ್ಳು ಆಸ್ತಿ ಮಾಹಿತಿ? ತನಿಖೆಗೆ ರಾಜ್ಯಪಾಲರ ಪೂರ್ವಾನುಮತಿ ಕೋರಿಕೆ

ಸಿದ್ದರಾಮಯ್ಯ ಸಂಪುಟದ ಸಹೋದ್ಯೋಗಿ ಹಾಗೂ ಸಿದ್ದರಾಮಯ್ಯ ಬಣದಲ್ಲೇ ಗುರುತಿಸಿಕೊಂಡಿರುವ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ ತಂಗಡಗಿ ಅವರ ವಿರುದ್ಧ ತಮ್ಮ ಆಸ್ತಿ ಬಗ್ಗೆ ಚುನಾವಣಾ ಆಯೋಗಕ್ಕೆ ಸುಳ್ಳು ಮಾಹಿತಿ ನೀಡಿದ ಆರೋಪ ಹೊರಿಸಲಾಗಿದೆ. ಈ ಸಂಬಂದ ಖಾಸಗಿ ದೂರು ದಾಖಲಿಸಲು ರಾಜ್ಯಪಾಲರ ಬಳಿ ಪೂರ್ವಾನುಮತಿ ಯಾಚಿಸಿದ್ದಾರೆ.


ಸಿದ್ದರಾಮಯ್ಯ ಸಂಪುಟದ ಸಹೋದ್ಯೋಗಿ ಹಾಗೂ ಸಿದ್ದರಾಮಯ್ಯ ಬಣದಲ್ಲೇ ಗುರುತಿಸಿಕೊಂಡಿರುವ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ ತಂಗಡಗಿ ಅವರ ವಿರುದ್ಧ ತಮ್ಮ ಆಸ್ತಿ ಬಗ್ಗೆ ಚುನಾವಣಾ ಆಯೋಗಕ್ಕೆ ಸುಳ್ಳು ಮಾಹಿತಿ ನೀಡಿದ ಆರೋಪ ಹೊರಿಸಲಾಗಿದೆ. ಈ ಸಂಬಂದ ಖಾಸಗಿ ದೂರು ದಾಖಲಿಸಲು ರಾಜ್ಯಪಾಲರ ಬಳಿ ಪೂರ್ವಾನುಮತಿ ಯಾಚಿಸಿದ್ದಾರೆ.

ಈ ಸಂಬಂಧ ಸಾಮಾಜಿಕ ಹೋರಾಟಗಾರ ದಿನೇಶ್‌ ಕಲ್ಲಹಳ್ಳಿ ಅವರು ರಾಜ್ಯಪಾಲರಿಗೆ ದೂರು ನೀಡಿದ್ದಾರೆ. " ಶಿವರಾಜ್ ಎಸ್. ತಂಗಡಗಿ ಅವರು ಚುನಾವಣಾ ಆಯೋಗಕ್ಕೆ ಸಲ್ಲಿಸಿದ ತಮ್ಮ ನಾಮಪತ್ರದ ಅಫಿಡವಿಟ್‌ (Election Affidavit)ನಲ್ಲಿ ಕೆಲವು ಆಸ್ತಿಗಳನ್ನು ಉದ್ದೇಶಪೂರ್ವಕವಾಗಿ ಬಹಿರಂಗಪಡಿಸದೆ, ಸುಳ್ಳು ಮತ್ತು ತಪ್ಪು ಮಾಹಿತಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಚುನಾವಣಾ ಆಯೋಗಕ್ಕೆ ತಪ್ಪು ತಪ್ಪು ಮತ್ತು ಸುಳ್ಳು ಮಾಹಿತಿ ನೀಡಿ, ನಿಜವಾದ ಆಸ್ತಿ ವಿವರಗಳನ್ನು ಮರೆಮಾಚಿ, ತಪ್ಪು ಪ್ರಮಾಣ ಪತ್ರ (False Affidavit) ಅನ್ನು ಚುನಾವಣಾಧಿಕಾರಿಗೆ ಸಲ್ಲಿಸಿದ್ದು, ಈ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿಲು ರಾಜ್ಯಪಾಲರ ಬಳಿ ಅನುಮತಿ ಕೋರಲಾಗಿದೆ.

"ತಂಗಡಗಿ ವಿರುದ್ಧ ಖಾಸಗಿ ದೂರು (Private Complaint) ಅಥವಾ ಅಪರಾಧ ತನಿಖೆ / ಪ್ರಾಸಿಕ್ಯೂಷನ್ (Investigation / Prosecution) ಪ್ರಾರಂಭಿಸಲು ಪೂರ್ವಾನುಮತಿ (Sanction for Prosecution) ನೀಡುವ ಕುರಿತು ಮಾನ್ಯ ರಾಜ್ಯಪಾಲರಿಗೆ ಮನವಿ ಮಾಡಲಾಗಿದೆ," ಎಂದು ಕಲ್ಲಳ್ಳಿ ತಿಳಿಸಿದ್ದಾರೆ.

ಖಾಸಗಿ ದೂರು ದಾಖಲಿಸಲು ಭ್ರಷ್ಟಾಚಾರ ತಡೆ ಕಾಯ್ದೆ, 1988 (Prevention of Corruption Act, 1988) ರ ಸೆಕ್ಷನ್ 17A ಮತ್ತು 19(1), ಹಾಗು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ, 2023 (Bharatiya Nagarik Suraksha Sanhita, 2023) ರ ಸೆಕ್ಷನ್ 218 ಅಡಿಯಲ್ಲಿ ಪೂರ್ವಾನುಮತಿ ನೀಡುವಂತೆ ರಾಜ್ಯಪಾಲರನ್ನು ಕೋರಲಾಗಿದೆ.

ಕಳೆದ ವಿಧಾನಸಭಾ ಚುನಾವಣೆ ವೇಳೆ ಕನಕಗಿರಿ ವಿಧಾನಸಭಾ ಕ್ಷೇತ್ರಕ್ಕೆ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ತಂಗಡಗಿ ಅವರು ತಮ್ಮ ಪತ್ನಿ ವಿದ್ಯಾ ತಂಗಡಗಿ ಹೆಸರಿನಲ್ಲಿ ಹೊಂದಿರುವ ಆಸ್ತಿಗಳ ಕುರಿತು ಹೊಂದಿರುವ ಆಸ್ತಿಗಳ ಕುರಿತು ತಪ್ಪು ಮಾಹಿತಿ ನೀಡಿ ನಿಜವಾದ ಆಸ್ತಿ ವಿವರಗಳನ್ನು ಮರೆಮಾಚಿ ತಪ್ಪು ಪ್ರಮಾಣಪತ್ರವನ್ನು ಚುನಾವಣಾಧಿಕಾರಿಗೆ ಸಲ್ಲಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಪುತ್ರ ಶಶಾಂಕ್‌ ಎಸ್‌. ತಂಗಡಗಿ ಅವರ ಹೆಸರಿನಲ್ಲಿ ಇಳಕಲ್‌ ತಾಲೂಕಿನಲ್ಲಿ ಕೃಷಿ ಭೂಮಿ ಇದ್ದು, ಇದು ಶಿವರಾಜ ತಂಗಡಗಿ ಅವರ ಅಫಿಡವಿಟ್‌ನಲ್ಲಿ ಉಲ್ಲೇಖಗೊಂಡಿಲ್ಲ. ಶಶಾಂಕ್‌ ತಂಗಡಗಿ ಅವರ ಹೆಸರಿನಲ್ಲಿ ಕೋಟ್ಯಂತರ ಮೌಲ್ಯದ ವ್ಯವಹಾರಗಳು ಮತ್ತು ಆಸ್ತಿ ಹೂಡಿಕೆಗಳು ನಡೆದಿವೆ. ಆದರೆ ಅವುಗಳ ಕಾನೂನಾತ್ಮಕ ಮೂಲ ಅಥವಾ ಹಣಕಾಸು ದಾಖಲೆಗಳನ್ನು ಚುನಾವಣಾ ಅಫಿಡವಿಟ್‌ನಲ್ಲಿ ಘೋಷಿಸಿಲ್ಲ ಎಂದು ದೂರಲಾಗಿದೆ.

ಚುನಾವಣಾ ಘೋಷಣೆಯಲ್ಲಿ ನೀಡಿರುವ ಆಸ್ತಿ ವಿವರಗಳು ಮತ್ತು ವಾಸ್ತವಿಕ ಆಸ್ತಿ ಬಗ್ಗೆ ಗಂಭೀರ ವ್ಯತ್ಯಾಸಗಳಿದ್ದು, ಚುನಾವಣಾಧಿಕಾರಿಗಳಿಗೆ ಮತ್ತು ಮತದಾರರಿಗೆ ತಪ್ಪು ಮಾಹಿತಿ ನೀಡಿ ಚುನಾವಣಾ ಪ್ರಕ್ರಿಯೆಯನ್ನು ದುರುಪಯೋಗಮಾಡಿದ್ದಾರೆ ಎಂದು ರಾಜ್ಯಪಾಲರಿಗೆ ನೀಡಿರುವ ದೂರಿನಲ್ಲಿ ತಿಳಿಸಿಲಾಗಿದೆ.

ತಂಗಡಗಿ ಅವರು ಸಾರ್ವಜನಿಕ ಹುದ್ದೆಯನ್ನು ವಹಿಸಿಕೊಂಡಿದ್ರದು, ಚುನಾವಣಾ ಪ್ರಕ್ರಿಯೆ ವೇಳೆ ಸುಳ್ಳು ಮಾಹಿತಿ ನೀಡಿಉರವುದು ಗಂಭೀರ ಅಪರಾಧವಾಗಿದೆ. ಈ ಬಗ್ಗೆ ತನಿಖೆ ಅಥವಾ ಕ್ರಿಮಿನಲ್‌ ಕ್ರಮ ಆರಂಭಿಸಲು ರಾಜ್ಯಪಾಲರು ಪೂರ್ವಾನುಮತಿ ನೀಡಬೇಕಾಗುತ್ತದೆ. "ತಂಗಡಗಿ ಮೇಲಿರುವ ಅರೋಪಗಳ ತನಿಖೆಗೆ ರಾಜ್ಯಪಾಲರು ತಮ್ಮ ಅಧಿಕಾರವನ್ನು ಬಳಸಿಕೊಂಡು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಲು ಪೂರ್ವಾನುಮತಿ ನೀಡಬೇಕೆಂದು ದಿನೇಶ್‌ ಕಲ್ಲಹಳ್ಳಿ ಕೇಳಿಕೊಂಡಿದ್ದಾರೆ.

Read More
Next Story