
ವಿದೇಶಿ ಮಹಿಳೆಯೊಬ್ಬಳನ್ನು ಬಂಧಿಸಿ ₹38.8 ಕೋಟಿ ಮೌಲ್ಯದ ಡ್ರಗ್ಸ್ ಅನ್ನು ವಶಕ್ಕೆ ಪಡೆದಿದೆ.
ಬೆಂಗಳೂರು ವಿಮಾನ ನಿಲ್ದಾಣದಲ್ಲಿ 38.4 ಕೋಟಿ ರೂ. ಮೌಲ್ಯದ ಕೊಕೇನ್ ವಶ
ಅನೇಕ ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮಾದಕವಸ್ತು ಕಾರ್ಟೆಲ್‌ಗಳೊಂದಿಗಿನ ಸಂಭಾವ್ಯ ಸಂಪರ್ಕಗಳು ಸೇರಿದಂತೆ, ಕಳ್ಳಸಾಗಣೆ ಪ್ರಯತ್ನದ ಹಿಂದಿನ ದೊಡ್ಡ ಜಾಲವನ್ನು ಅಧಿಕಾರಿಗಳು ಈಗ ತನಿಖೆ ನಡೆಸುತ್ತಿದ್ದಾರೆ.
ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿದೇಶಿ ಮಹಿಳೆಯಿಂದ ಬರೋಬ್ಬರಿ 38.4 ಕೋಟಿ ಮೌಲ್ಯದ 3.186 ಕೆಜಿ ಕೊಕೇನ್ ಕಂದಾಯ ಗುಪ್ತಚರ ನಿರ್ದೇಶನಾಲಯ (DRI) ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಮಹಿಳೆಯನ್ನು ಜೆನ್ನಿಫರ್ ಅಬ್ಬೆ ಎಂದು ಗುರುತಿಸಲಾಗಿದೆ. ಕತಾರ್ ದೇಶದಿಂದ ಕೆಐಎಗೆ ಬಂದಿಳಿದ ಘಾನಾ ದೇಶದ ಮಹಿಳೆ ಬಳಿ ಡ್ರಗ್ಸ್ ಪತ್ತೆಯಾಗಿದ್ದು, ಆಕೆಯನ್ನು ಬಂಧಿಸಿ ತಪಾಸಣೆಗೊಳಪಡಿಸಿದಾಗ ₹38.8 ಕೋಟಿ ಮೌಲ್ಯದ 3 ಕೆ.ಜಿ. ತೂಕದ ಕೊಕೇನ್ ಪತ್ತೆಯಾಗಿದೆ. ಈ ವಿದೇಶಿ ಮಹಿಳೆಯ ಪೂರ್ವಾಪರ ಕುರಿತು ಡಿಆರ್‌ಐ ಮಾಹಿತಿ ಕಲೆ ಹಾಕುತ್ತಿದೆ ಎಂದು ತಿಳಿದು ಬಂದಿದೆ.
ಮಹಿಳೆಯು ಅಂತರರಾಷ್ಟ್ರೀಯ ಮಾದಕವಸ್ತು ಸಿಂಡಿಕೇಟ್‌ಗೆ ಕೊರಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದಳು ಎಂದು ಅಧಿಕಾರಿಗಳು ಶಂಕಿಸಿದ್ದಾರೆ. ಅನೇಕ ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮಾದಕವಸ್ತು ಕಾರ್ಟೆಲ್‌ಗಳೊಂದಿಗಿನ ಸಂಭಾವ್ಯ ಸಂಪರ್ಕಗಳು ಸೇರಿದಂತೆ, ಕಳ್ಳಸಾಗಣೆ ಪ್ರಯತ್ನದ ಹಿಂದಿನ ದೊಡ್ಡ ಜಾಲವನ್ನು ಅಧಿಕಾರಿಗಳು ಈಗ ತನಿಖೆ ನಡೆಸುತ್ತಿದ್ದಾರೆ.
ಇತ್ತೀಚಿನ ತಿಂಗಳುಗಳಲ್ಲಿ ಅಕ್ರಮ ವ್ಯಾಪಾರಕ್ಕಾಗಿ ಹೆಚ್ಚಾಗಿ ಬಳಸಲಾಗುವ ಅಂತರರಾಷ್ಟ್ರೀಯ ಮಾರ್ಗಗಳನ್ನು ಗುರಿಯಾಗಿಸಿಕೊಂಡು, ಮಾದಕವಸ್ತು ಕಳ್ಳಸಾಗಣೆ ಮೇಲೆ ಡಿಆರ್‌ಐ ತನ್ನ ಕಠಿಣ ಕ್ರಮವನ್ನು ತೀವ್ರಗೊಳಿಸಿದೆ.
ಎರಡು ವಾರಗಳ ಹಿಂದೆ ದುಬೈನಿಂದ ಚಿನ್ನ ಕಳ್ಳ ಸಾಗಿಸುವಾಗ ನಟಿ ಹಾಗೂ ಡಿಜಿಪಿ ಮಲಮಗಳು ರನ್ಯಾ ರಾವ್ ಅವರನ್ನು ಡಿಆರ್‌ಐ ಬಂಧಿಸಿದ್ದ ಪ್ರಕರಣ ರಾಷ್ಟ್ರವ್ಯಾಪ್ತಿ ಗಮನ ಸೆಳೆದಿತ್ತು. ಇನ್ನೊಂದೆಡೆ ವಿಮಾನದಲ್ಲಿ ಡ್ರಗ್ಸ್ ಸಾಗಿಸಿ ತಂದು ರಾಜ್ಯದಲ್ಲಿ ಮಾರುತ್ತಿದ್ದ ಇಬ್ಬರು ಆಫ್ರಿಕಾ ಮೂಲಕ ಮಹಿಳೆಯರನ್ನು ಮಂಗಳೂರು ಪೊಲೀಸರ ಭರ್ಜರಿ ಕಾರ್ಯಾಚರಣೆ ಸೆರೆ ಹಿಡಿದು ₹75 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ ಮಾಡಿದ್ದರು. ಈ ಪ್ರಕರಣಗಳು ಮರೆಯುವ ಮುನ್ನವೇ ವಿಮಾನದಲ್ಲಿ ರಾಜ್ಯಕ್ಕೆ ಡ್ರಗ್ಸ್ ಅಕ್ರಮವಾಗಿ ತರುತ್ತಿದ್ದ ಮತ್ತೊಬ್ಬ ವಿದೇಶಿ ಮಹಿಳೆಯನ್ನು ಡಿಆರ್‌ಐ ಬಂಧಿಸಿದೆ.