Fake Currency | ದಾಂಡೇಲಿ ಮನೆಯಲ್ಲಿತ್ತು 14 ಕೋಟಿ ರೂ. ನಕಲಿ ನೋಟು
x

ದಾಂಡೇಲಿಯಲ್ಲಿ ನಕಲಿ ನೋಟುಗಳು ಪತ್ತೆಯಾಗಿವೆ. 

Fake Currency | ದಾಂಡೇಲಿ ಮನೆಯಲ್ಲಿತ್ತು 14 ಕೋಟಿ ರೂ. ನಕಲಿ ನೋಟು

ಮನೆ ಮಾಲೀಕರು ಅನುಮಾನದಿಂದ ಕೆಲ ನೋಟುಗಳನ್ನು ಪರಿಶೀಲಿಸಿದಾಗ 500 ರೂ. ಮುಖಬೆಲೆಯ ರಿವರ್ಸ್ ಬ್ಯಾಂಕ್ ಆಫ್ ಇಂಡಿಯಾ ಬರಹ ಇರುವ ಮತ್ತು ಗವರ್ನರ್ ಸಹಿ ಇಲ್ಲದ, ನೋಟಿಗೆ ಸಂಖ್ಯೆಯಿರುವ ಜಾಗದಲ್ಲಿ ಸೊನ್ನೆಯಷ್ಟೇ ನಮೂದಿಸಿರುವ ನೋಟುಗಳು ಪತ್ತೆಯಾಗಿವೆ.


ಬಾಡಿಗೆ ಮನೆಯೊಂದರಲ್ಲಿ 500 ರೂ.ಮುಖ ಬೆಲೆಯ ನೋಟಿನ ಕಂತೆಗಳು ಪತ್ತೆಯಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ನಗರದ ಗಾಂಧಿನಗರ ಬಡಾವಣೆಯಲ್ಲಿ ನಡೆದಿದೆ.

ಗಾಂಧಿನಗರದ ನೂರ್‌ಜಾನ್ ಜುಂಜುವಾಡ್ಕರ ಎಂಬುವವರ ಮನೆಯಲ್ಲಿ ಗೋವಾ ಮೂಲದ ಅರ್ಷದ್ ಖಾನ್ ಎಂಬಾತ ಬಾಡಿಗೆದಾರನಾಗಿ ವಾಸ್ತವ್ಯವಿದ್ದ. ಕಳೆದ ಒಂದು ತಿಂಗಳಿನಿಂದ ಈತ ಆ ಮನೆಯಲ್ಲಿ ಇಲ್ಲದೇ ಇರುವುದನ್ನು ಗಮನಿಸಿ ಮತ್ತು ಆ ಮನೆಯ ಹಿಂಬದಿಯ ಬಾಗಿಲ ಚಿಲಕ ಸರಿ ಹಾಕದೇ ಇರುವುದನ್ನು ತಿಳಿದು, ಪೊಲೀಸರಿಗೆ ಸ್ಥಳೀಯರು ಮಾಹಿತಿ ನೀಡಿದ್ದರು.

ದಾಂಡೇಲಿ ನಗರ ಠಾಣೆಯ ಪೊಲೀಸರು ಮನೆಗೆ ಬಂದು ಬಾಗಿಲು ತೆರೆಯುತ್ತಿದ್ದಂತೆಯೇ, 500 ರೂ. ಮುಖಬೆಲೆಯ ಕಂತೆ ಕಂತೆ ನೋಟುಗಳು ಕಾಣಿಸಿವೆ. ಬಳಿಕ ಸ್ಥಳಕ್ಕೆ ಹಿರಿಯ ಪೊಲೀಸರು ಆಗಮಿಸಿ ಮನೆ ಮಾಲೀಕರುವ ಬಾಡಿಗೆ ಮನೆಯಲ್ಲಿ ವಾಸವಿದ್ದ ವ್ಯಕ್ತಿಗೆ ಕರೆ ಮಾಡಿದ್ದಾರೆ. ಆತ ಬೇರೆ ಕಡೆ ಇದ್ದಿದ್ದರಿಂದ ಸೋಮವಾರ ರಾತ್ರಿಯಿಂದ ಮಂಗಳವಾರ ಬೆಳಗಿನ ಜಾವದವರೆಗೆ ನೋಟುಗಳನ್ನು ತಮ್ಮ ಸುಪರ್ದಿಯಲ್ಲಿ ಇಟ್ಟುಕೊಂಡಿದ್ದಾರೆ.

ಬೆಳಿಗ್ಗೆ ಅನುಮಾನ ಬಂದು ಮನೆ ಮಾಲೀಕರು ಕೆಲ ನೋಟುಗಳನ್ನು ಕಂತೆಯಿಂದ ಬಿಡಿಸಿ ನೋಡಿದಾಗ, 500 ರೂ. ಮುಖಬೆಲೆಯ ರಿವರ್ಸ್ ಬ್ಯಾಂಕ್ ಆಫ್ ಇಂಡಿಯಾ ಎಂಬ ಬರಹ ಇರುವ ಮತ್ತು ಗವರ್ನರ್ ಸಹಿ ಇಲ್ಲದೆ ಇರುವ, ಜೊತೆಗೆ ನೋಟಿಗೆ ಸಂಖ್ಯೆಯಿರುವ ಜಾಗದಲ್ಲಿ ಸೊನ್ನೆಯನಷ್ಟೇ ನಮೂದಿಸಿರುವ ನೋಟುಗಳು ಪತ್ತೆಯಾಗಿವೆ.

‘‘ಮೂವಿ ಶೂಟಿಂಗ್ ಪರ್ಪಸ್ ಓನ್ಲಿ’’ ಎಂದು ಬರೆದಿರುವ ಶೈನಿಂಗ್ ಪೇಪರಿನಲ್ಲಿ ಮುದ್ರಿತ 500 ಮುಖಬೆಲೆಯ ನಕಲಿ ಐವತ್ತು ಬಂಡಲ್ ಇತ್ತು ಎಂದು ಮೂಲಗಳು ದೃಢಪಡಿಸಿವೆ. ಇನ್ನು ಅಂದಾಜು 14 ಕೋಟಿ ರೂಪಾಯಿ ಮೌಲ್ಯದ ನಕಲಿ ನೋಟುಗಳು ಪತ್ತೆಯಾಗಿದ್ದು, ಅವುಗಳನ್ನು ಸದ್ಯ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಕೋಟಿಗಟ್ಟಲೇ ನಕಲಿ ನೋಟು ಸಿಕ್ಕಿರುವ ಸಂಬಂಧ ಆ ಮನೆಯಲ್ಲಿ ಬಾಡಿಗೆದಾರನಾಗಿದ್ದ ಅರ್ಷದ್ ಖಾನ್​ನನ್ನು ವಶಕ್ಕೆ ಪಡೆಯಲು ದಾಂಡೇಲಿ ಪೊಲೀಸರು ಕ್ರಮ ಆರಂಭಿಸಿದ್ದಾರೆ. ಈಗಾಗಲೇ ಅರ್ಷದ್ ಖಾನ್​ನನ್ನು ಪೊಲೀಸರು ಸಂಪರ್ಕಿಸಿದ್ದು, ಆತ ಗೋವಾದಲ್ಲಿ ಇದ್ದು ಬರುವುದಾಗಿ ಮಾಹಿತಿ ನೀಡಿದ್ದಾನೆ ಎನ್ನಲಾಗಿದೆ.

ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿರುವ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಎಂ ನಾರಾಯಣ್, ದಾಂಡೇಲಿ ಡಿವೈಎಸ್ಪಿ ನೇತೃತ್ವದಲ್ಲಿ ತನಿಖೆ ನಡೆಸಲು ಸೂಚನೆ ನೀಡಿದ್ದಾರೆ.

Read More
Next Story