ಗಣರಾಜ್ಯೋತ್ಸವ: ಕರ್ನಾಟಕದ 21 ಪೊಲೀಸ್ ಅಧಿಕಾರಿಗಳಿಗೆ ರಾಷ್ಟ್ರಪತಿ ಪದಕ
x

ಕರ್ನಾಟಕ ರಾಜ್ಯದ ಒಟ್ಟು 21 ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಪೊಲೀಸ್‌ ಪದಕಕ್ಕೆ ಭಾಜನರಾಗಿದ್ದಾರೆ. 

ಗಣರಾಜ್ಯೋತ್ಸವ: ಕರ್ನಾಟಕದ 21 ಪೊಲೀಸ್ ಅಧಿಕಾರಿಗಳಿಗೆ ರಾಷ್ಟ್ರಪತಿ ಪದಕ

ಪ್ರತಿ ವರ್ಷದಂತೆ 2026ರ ಗಣರಾಜ್ಯೋತ್ಸವದ ಸಂದರ್ಭದಲ್ಲೂ ಕೇಂದ್ರ ಸರ್ಕಾರವು ಪೊಲೀಸ್ ಅಧಿಕಾರಿಗಳ ಅಪ್ರತಿಮ ಸೇವೆ, ಕರ್ತವ್ಯ ನಿಷ್ಠೆ ಮತ್ತು ದಕ್ಷತೆ ಗುರುತಿಸಿ ರಾಷ್ಟ್ರಪತಿ ಪದಕಗಳನ್ನು ಘೋಷಿಸಿದೆ.


Click the Play button to hear this message in audio format

2026ನೇ ಸಾಲಿನ ಗಣರಾಜ್ಯೋತ್ಸವದ ಅಂಗವಾಗಿ ಕರ್ನಾಟಕದ 21ಮಂದಿ ಪೊಲೀಸ್ ಅಧಿಕಾರಿಗಳ ಶ್ಲಾಘನೀಯ ಸೇವೆಗಾಗಿ ಪದಕ ಘೋಷಿಸಲಾಗಿದೆ. ಪೊಲೀಸ್ ಅಧಿಕಾರಿಗಳ ಬದ್ಧತೆ ಮತ್ತು ಕರ್ತವ್ಯ ನಿಷ್ಠೆ ಗುರುತಿಸಿ ಸೇವಾ ಪದಕ ನೀಡಲಾಗಿದೆ.

ಐಜಿಪಿಗಳಾದ ಅಮಿತ್ ಸಿಂಗ್, ಚೇತನ್ ಸಿಂಗ್ ರಾಥೋಡ್, ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಪೊಲೀಸ್ ವರಿಷ್ಠಾಧಿಕಾರಿಗಳಾದ ಸವಿತಾ ಶ್ರೀನಿವಾಸ್, ಪುಟ್ಟಮಾದಯ್ಯ ಎಂ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ, ನಾಗಪ್ಪ ನವೀನ್ ಕುಮಾರ್, ಡಿಸಿಪಿ ರಾಜಾ ಇಮಾಮ್ ಕಾಸಿಂ ಪಿಂಜಾರ್, ಡಿವೈಎಸ್ಪಿ ಹನುಮಂತರಾಯ, ಪೊಲೀಸ್ ವರಿಷ್ಠಾಧಿಕಾರಿ ಚಂಬನಿಲ್ ಅಬ್ರಹಾಂ ಸೈಮನ್, ಇನ್‌ಸ್ಪೆಕ್ಟರ್‌ ಮೊಹಮದ್ ಎಂ.ಎ, ಶಿವಸ್ವಾಮಿ ಚೌಡೇನಹಳ್ಳಿ ಬಸವರಾಜು, ಮಹಾಮದ್ ರಫೀಕ್ ಮಲಿಕ್ ಸಾಬ್ ತಹಶೀಲ್ದಾರ್, ಶ್ರೀಶೈಲ ಕೆಂಚಪ್ಪ ಬೈಕೋಡ್, ಪಿಎಸ್ಐಗಳಾದ ಕಾಶಿನಾಥ್ ಬಿ, ವೈಲೆಟ್ ಫೆಮಿನಾ, ಶಕುಂತಲಾ ಎಚ್.ಕೆ, ಎಎಸ್ಐಗಳಾದ ಹರ್ಷ ನಾಗರಾಜ, ಸಿದ್ದರಾಜು ಜಿ, ಹೆಡ್ ಕಾನ್‌ಸ್ಟೆಬಲ್‌ ಹುಚ್ಚಪ್ಪ ದೊಡ್ಡ ಈರಪ್ಪ, ಬಸವರಾಜ ಮೈಗೇರಿ ಅವರು ಪದಕಕ್ಕೆ ಭಾಜನರಾಗಿದ್ದಾರೆ.

ಪದಕದ ಇತಿಹಾಸ ಮತ್ತು ಮಹತ್ವ

ಪೊಲೀಸ್ ಅಧಿಕಾರಿಗಳು ತಮ್ಮ ಸೇವಾವಧಿಯಲ್ಲಿ ನಿರ್ವಹಿಸಿದ ಶ್ಲಾಘನೀಯ ಸೇವೆ, ಕರ್ತವ್ಯ ನಿಷ್ಠೆ ಮತ್ತು ಅಪ್ರತಿಮ ದಕ್ಷತೆಯನ್ನು ಗೌರವಿಸುವ ಸಲುವಾಗಿ 1951 ರಲ್ಲಿ ರಾಷ್ಟ್ರಪತಿಗಳು ಈ ಪದಕವನ್ನು ನೀಡಲು ಆರಂಭಿಸಿದರು.

ಮೂರು ವಿಭಾಗಗಳಲ್ಲಿ ಪೊಲೀಸ್ ಪದಕಗಳನ್ನು ಘೋಷಿಸಲಾಗುತ್ತದೆ. ಪ್ರಾಣದ ಹಂಗು ತೊರೆದು ಸಾಹಸ ಪ್ರದರ್ಶಿಸಿದವರಿಗೆ ವೀರತ್ವ ಪದಕ, ಅತ್ಯುನ್ನತ ಮಟ್ಟದ ವಿಶಿಷ್ಟ ಸೇವೆಗಾಗಿ ರಾಷ್ಟ್ರಪತಿ ಪದಕ, ಶ್ಲಾಘನೀಯ ಸೇವೆಗಾಗಿ ಪದಕ ನೀಡಲಾಗುತ್ತದೆ. ಪ್ರತಿ ವರ್ಷ ಗಣರಾಜ್ಯೋತ್ಸವ ಹಾಗೂ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಪದಕಗಳನ್ನು ಘೋಷಿಸಲಾಗುತ್ತದೆ.

Read More
Next Story