ಮಾಟ ಮಂತ್ರದ ಹೆಸರಿನಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ: ಇಸ್ಲಾಂ ಧರ್ಮಗುರು ಬಂಧನ
x

ಲೈಂಗಿಕ ಕಿರುಕುಳ ನೀಡಿದ ಮುಸ್ಲಿಂ ಧರ್ಮಗುರು ಆರೆಸ್ಟ್ ಮಾಡಲಾಗಿದೆ. 

ಮಾಟ ಮಂತ್ರದ ಹೆಸರಿನಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ: ಇಸ್ಲಾಂ ಧರ್ಮಗುರು ಬಂಧನ

2022ರ ಫೆಬ್ರವರಿ 10ರಂದು ಮಹಿಳೆ ಒಬ್ಬಳೇ ಆತನ ಮನೆಗೆ ಹೋಗಿದ್ದಳು. ಈ ವೇಳೆ ಉಸ್ತಾದ್‌ನು ಕುರ್‌ಆನ್ ಓದುವ ಹೆಸರಲ್ಲಿ ಆಕೆಗೆ ಅಶ್ಲೀಲವಾಗಿ ಸ್ಪರ್ಶಿಸಿದ್ದನು ಹಾಗೂ 55 ಸಾವಿರ ರೂಪಾಯಿ ಹಣ ಪಡೆದಿದ್ದಾನೆ. ಒಟ್ಟು ಸುಮಾರು ಒಂದು ಲಕ್ಷ ರೂಪಾಯಿ ಪಡೆದು ಆಕೆಯನ್ನು ಮೋಸಗೊಳಿಸಿದ್ದಾನೆ.


ಮಹಿಳೆಯೊಬ್ಬರಿಗೆ ಮಾಟ ಮಂತ್ರದ ನೆಪ ಹೇಳಿ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಇಸ್ಲಾಂ ಧರ್ಮಗುರುವನ್ನು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಮಹಿಳಾ ಪೊಲೀಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ. 'ಕೂಳೂರು ಉಸ್ತಾದ್' ಎಂಬ ಹೆಸರು ಹೊಂದಿದ್ದ ಜಿ. ಅಬ್ದುಲ್ ಕರೀಮ್ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ. ಈತ ಗುರುವಾಯನಕೆರೆಯ ನಿವಾಸಿ ಎಂದು ತಿಳಿದುಬಂದಿದೆ.

2022ರಲ್ಲಿ ಸಂತ್ರಸ್ತೆಗೆ ಖಿನ್ನತೆಯ ಸಮಸ್ಯೆ ಉಂಟಾಗಿದ್ದು, ತನ್ನ ಅಕ್ಕನ ಗಂಡನ ಸಲಹೆ ಮೇರೆಗೆ ಹೆಜಮಾಡಿಯಲ್ಲಿ ಇರುವ ಕೂಳೂರು ಉಸ್ತಾದ್ ಸಂಪರ್ಕಿಸಿದ್ದರು. ಆತ ಮಹಿಳೆಗೆ ಮಾಟ ಮಂತ್ರ ಮಾಡಲಾಗಿದೆ ಎಂದು ನಂಬಿಸಿ, ಅದನ್ನು ನಿವಾರಿಸಲು ಕಾಲಕಾಲಕ್ಕೆ ತನ್ನ ಮನೆಗೆ ಬರಲು ಹೇಳಿದ್ದ. ಮಹಿಳೆ ತನ್ನ ಅಕ್ಕನ ಜೊತೆ ಹಲವು ಬಾರಿ ಆರೋಪಿಯ ಮನಗೆ ಹೋಗಿದ್ದಳು. ಕೆಲವೊಮ್ಮೆ ಆತ ಆಕೆಗೆ ಕುರ್‌ಆನ್ ಓದಿ ಚಿಕಿತ್ಸೆ ನೀಡಿದ್ದ ಎಂದು ಹೇಳಲಾಗಿದೆ.

2022ರ ಫೆಬ್ರವರಿ 10ರಂದು ಮಹಿಳೆ ಒಬ್ಬಳೇ ಆತನ ಮನೆಗೆ ಹೋಗಿದ್ದರು. ಈ ವೇಳೆ ಆತ ಕುರ್‌ಆನ್ ಓದುವ ಹೆಸರಲ್ಲಿ ಆಕೆಯನ್ನು ಅಶ್ಲೀಲವಾಗಿ ಸ್ಪರ್ಶಿಸಿದ್ದ. ಅದೇ ರಿತಿ 55 ಸಾವಿರ ರೂಪಾಯಿ ಹಣ ಪಡೆದಿದ್ದ. ಅದೇ ರೀತಿ ಒಟ್ಟು ಒಂದು ಲಕ್ಷ ರೂಪಾಯಿ ಪಡೆದು ಆಕೆಯನ್ನು ಮೋಸಗೊಳಿಸಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಿಲಾಗಿದೆ.

ಈ ವ್ಯಕ್ತಿ ಇದೇ ಸೋಗಿನಲ್ಲಿ ಇನ್ನೂ ಹಲವರಿಗೆ ವಂಚಿಸಿರುವ ಹಾಗೂ ಕಿರುಕುಳ ನೀಡಿರುವ ಬಗ್ಗೆ ದೂರುಗಳಿವೆ ಎಂದು ತಿಳಿದು ಬಂದಿದೆ. ಮಾಟ ಮಂತ್ರ ನಿವಾರಣೆಯ ಹೆಸರಿನಲ್ಲಿ ಜನರ ನಂಬಿಕೆಗೆ ದ್ರೋಹ ಮಾಡಿ ಹಣ ದೋಚುವುದು ಮತ್ತು ಮಹಿಳೆಯರ ಮೇಲೆ ಲೈಂಗಿಕ ಕಿರುಕುಳ ನೀಡುವುದು ಇವನ ಕೃತ್ಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

Read More
Next Story