ವಿಧಾನಸಭೆ ಕಲಾಪ| ಶಾಸಕರ ʼಕಿರುನಿದ್ದೆʼಗೆ ಮೊಗಸಾಲೆಯಲ್ಲೇ ಸುಖಾಸನ!
x
ವಿಧಾನಸಭಾ ಮೊಗಸಾಲೆಯಲ್ಲಿ ಶಾಸಕರ ಕಿರುನಿದ್ದೆಗಾಗಿ ಒರಗು ಆಸನವನ್ನು ವ್ಯವಸ್ಥೆ ಮಾಡಿದ ಸ್ಪೀಕರ್‌ ಯು.ಟಿ. ಖಾದರ್‌ ಅವರು ಛಾಯಾಗ್ರಾಹಕರಿಗೆ ಪೋಸ್‌ ನೀಡಿದ್ದು ಹೀಗೆ.

ವಿಧಾನಸಭೆ ಕಲಾಪ| ಶಾಸಕರ ʼಕಿರುನಿದ್ದೆʼಗೆ ಮೊಗಸಾಲೆಯಲ್ಲೇ ಸುಖಾಸನ!


ಶಾಸಕರು ವಿಧಾನಮಂಡಲ ಕಲಾಪದಲ್ಲೇ ನಿದ್ದೆ ಮಾಡಿ ಗೊರಕೆ ಹೊಡೆಯುವ ಪ್ರಸಂಗಗಳು ಆಗಾಗ ಘಟಿಸುತ್ತಲೇ ಇವೆ. ಮುಖ್ಯಮಂತ್ರಿಯಾಗಿ ಅನೇಕ ಮುಖಂಡರನ್ನು ಆಗಾಗ ಮುಜುಗರಕ್ಕೆ ಎಡೆ ಮಾಡುತ್ತಲೇ ಇವೆ.

ಸಹಜವಾಗಿ ಹವಾನಿಯಂತ್ರಿತ ಸದನಗಳಲ್ಲಿ ದೀರ್ಘಾವಧಿ ಚರ್ಚೆ ಆಗುತ್ತಿರುವ ವೇಳೆ ಮತ್ತು ಮಧ್ಯಾಹ್ನ ಭೋಜನದ ಬಳಿಕ ಆಕಳಿಸುತ್ತಾ ನಿದ್ದೆಗೆ ಜಾರುವುದು ಸಾಮಾನ್ಯ ಘಟನೆಗಳಾಗಿವೆ. ಆ ಕಾರಣಕ್ಕಾಗಿಯೇ ಕೆಲವರು ಸದನ ಹಾಜರಾತಿಯನ್ನು ತಪ್ಪಿಸುತ್ತಿದ್ದರು. ಸಹಜವಾಗಿ ಹಾಜರಾತಿ ಸಂಖ್ಯೆ ಕಡಿಮೆಯಾಗುತ್ತಿತ್ತು.

ಅದಕ್ಕಾಗಿ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್‌ ಅವರು ವಿನೂತನ ಕ್ರಮಕ್ಕೆ ಮುಂದಾಗಿದ್ದಾರೆ. ಆ ಮೂಲಕ ಶಾಸಕರು ಸದನದ ವ್ಯಾಪ್ತಿಯಲ್ಲೇ ಇದ್ದು, ಹೆಚ್ಚು ಹೆಚ್ಚು ಕಲಾಪದಲ್ಲಿ ಭಾಗಿಯಾಗುವಂತೆ ಮಾಡಲು ಕ್ರಮಕ್ಕೆ ಮುಂದಾಗಿದ್ದಾರೆ. ಅದಕ್ಕಾಗಿಯೇ ಬರಲಿವೆ.

ವಿಧಾನಸಭೆ ಮೊಗಸಾಲೆಯಲ್ಲಿ "ರಿಕ್ಲೈನರ್ ಕುರ್ಚಿ" (ಆರಾಮವಾಗಿ ಒರಗುವ ಸುಖಾಸೀನ)ಗಳನ್ನು ಪ್ರಾಯೋಗಿಕವಾಗಿ ಇರಿಸಲಾಗಿದೆ. ಊಟ ಮಾಡಿದ ಬಳಿಕ ನಿದ್ದೆ ಬಂದರೆ, ಅ ಆಸನಗಳಲ್ಲಿ ಒರಗಿ ಕಿರುನಿದ್ದೆ ಮಾಡಬಹುದು. ಬಳಿಕ ಕಲಾಪದಲ್ಲಿ ಭಾಗಿಯಾಗಬಹುದು. ಒಂದು ವೇಳೆ ನಿದ್ದೆ ಮಾಡುವ ಸಂದರ್ಭದಲ್ಲಿ ಕಲಾಪದಲ್ಲಿ ಅವರ ಹಾಜರಿ ಅಗತ್ಯವಾದರೆ ಮಾರ್ಷಲ್‌ಗಳು ಅವರನ್ನು ಬಂದು ಎಚ್ಚರಿಸಿ ಕಲಾಪದಲ್ಲಿ ಭಾಗಿಯಾಗುವಂತೆ ಮಾಡಬಹುದು!

ವಿಧಾನಸಭೆ ಅಧಿವೇಶನದ ವೇಳೆ ನಮ್ಮನ್ನು ಪ್ರತಿನಿಧಿಸುವ ಶಾಸಕರು ಮಧ್ಯಾಹ್ನ ಚೆನ್ನಾಗಿ ಊಟ ಸವಿದ ಮೇಲೆ ಕಿರುನಿದ್ದೆ ಮಾಡಲೂ ವಿಶೇಷ ಅವಕಾಶವನ್ನು ಈಗ ಕಲ್ಪಿಸಲಾಗಿದೆ.

ಈ ಮಾಹಿತಿಯನ್ನು ಸ್ವತಃ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್‌ ವಿಧಾನಸಭೆಯಲ್ಲಿ ಶಾಸಕರ ಗಮನಕ್ಕೆ ತಂದಿದ್ದಾರೆ. ಶುಕ್ರವಾರ ಸದನ ಕಲಾಪದ ವೇಳೆ, ಅಧ್ಯಕ್ಷ ಪೀಠದಿಂದ ಮಾತನಾಡಿದ ಅವರು, ವಿಧಾನಸಭೆ ಸದಸ್ಯರಿಗಾಗಿ ಬೆಳಿಗ್ಗೆ ಉಪಾಹಾರ, ಮಧ್ಯಾಹ್ನ ಉತ್ತಮ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ. ಊಟವಾದ ಬಳಿಕ ಶಾಸಕರು ಕಿರುನಿದ್ದೆ ಮಾಡುವುದಾಗಿ ಹೇಳಿ ಮರಳಿ ಸದನಕ್ಕೆ ಬರುತ್ತಿಲ್ಲ," ಎಂದು ಶಾಸಕರ ಗಮನ ಸೆಳೆದರು.

ಶಾಸಕರು ಸದನ ಕಲಾಪದಲ್ಲಿ ಭಾಗಿಯಾಗುವುದನ್ನು ಪ್ರೋತ್ಸಾಹಿಸಲು, ಶಾಸಕರ ಕಿರು ನಿದ್ರೆಗಾಗಿ ಪ್ರಾಯೋಗಿಕವಾಗಿ ಆಡಳಿತ ಪಕ್ಷದ ಮೊಗಸಾಲೆಯಲ್ಲಿ ಒಂದು ರಿಕ್ಲೈನರ್ ಕುರ್ಚಿ (ಆರಾಮವಾಗಿ ಒರಗುವ ಸುಖಾಸೀನ) ಹಾಕಲಾಗಿದೆ. ಶಾಸಕರು ಅದರ ಮೇಲೆ ಕಿರು ನಿದ್ರೆ ಮಾಡಿ ಸದನಕ್ಕೆ ಬರಬಹುದು. ಆ ರಿಕ್ಲೈನರ್​ ಕುರ್ಚಿ ನಿಮಗೆ ಸರಿ ಅನಿಸಿದರೆ ಮುಂದಿನ ಅಧಿವೇಶನದಲ್ಲಿ ಈ ವ್ಯವಸ್ಥೆಯನ್ನು ಅಧಿಕೃತ್ಯವಾಗಿ ಜಾರಿಗೆ ತರುತ್ತೇನೆ” ಎಂದು ಶಾಸಕರಿಗೆ ಹೇಳಿದರು.

Read More
Next Story