ಮತ್ತೊಮ್ಮೆ ತಂದೆಯಾಗುತ್ತಿರುವ ರಾಮ್ ಚರಣ್: ದೀಪಾವಳಿ ಜೊತೆ ಸೀಮಂತ
x

ರಾಮ್ ಚರಣ್ ದಂಪತಿ 

ಮತ್ತೊಮ್ಮೆ ತಂದೆಯಾಗುತ್ತಿರುವ ರಾಮ್ ಚರಣ್: ದೀಪಾವಳಿ ಜೊತೆ ಸೀಮಂತ

ದೀಪಾವಳಿ ಹಬ್ಬದ ಸಂಭ್ರಮದ ಜೊತೆಯಲ್ಲೇ, ಉಪಾಸನಾ ಅವರ ಸೀಮಂತ (ಬೇಬಿ ಶವರ್) ಕಾರ್ಯಕ್ರಮವನ್ನು ಕೊನಿಡೇಲಾ ಕುಟುಂಬವು ವಿಜೃಂಭಣೆಯಿಂದ ಆಚರಿಸಿದೆ. ಈ ಮೂಲಕ, ಅಭಿಮಾನಿಗಳಿಗೆ ಡಬಲ್ ಸಿಹಿ ಸುದ್ದಿಯನ್ನು ನೀಡಿದ್ದಾರೆ.


Click the Play button to hear this message in audio format

ತೆಲುಗಿನ 'ಮೆಗಾ ಪವರ್ ಸ್ಟಾರ್' ರಾಮ್ ಚರಣ್ ಮತ್ತು ಅವರ ಪತ್ನಿ ಉಪಾಸನಾ ಕಾಮಿನೇನಿ ಕೊನಿಡೇಲಾ ಅವರು ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ದೀಪಾವಳಿ ಹಬ್ಬದ ಸಂಭ್ರಮದ ಜೊತೆಯಲ್ಲೇ, ಉಪಾಸನಾ ಅವರ ಸೀಮಂತ (ಬೇಬಿ ಶವರ್) ಕಾರ್ಯಕ್ರಮವನ್ನು ಕೊನಿಡೇಲಾ ಕುಟುಂಬವು ವಿಜೃಂಭಣೆಯಿಂದ ಆಚರಿಸಿದೆ. ಈ ಮೂಲಕ, ಅಭಿಮಾನಿಗಳಿಗೆ ಡಬಲ್ ಸಿಹಿ ಸುದ್ದಿಯನ್ನು ನೀಡಿದ್ದಾರೆ.

ದೀಪಾವಳಿ ಹಬ್ಬದ ದಿನವಾದ ಗುರುವಾರ, ಉಪಾಸನಾ ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವಿಶೇಷ ವಿಡಿಯೋವೊಂದನ್ನು ಹಂಚಿಕೊಳ್ಳುವ ಮೂಲಕ ಈ ಸಂತಸದ ಸುದ್ದಿಯನ್ನು ಅಧಿಕೃತವಾಗಿ ಘೋಷಿಸಿದ್ದಾರೆ. "ಈ ದೀಪಾವಳಿಯು ಡಬಲ್ ಸಂಭ್ರಮ, ಡಬಲ್ ಪ್ರೀತಿ ಮತ್ತು ಡಬಲ್ ಆಶೀರ್ವಾದಗಳಿಂದ ಕೂಡಿತ್ತು," ಎಂದು ಅವರು ಬರೆದುಕೊಂಡಿದ್ದಾರೆ. ವಿಡಿಯೋದ ಕೊನೆಯಲ್ಲಿ "ಹೊಸ ಆರಂಭವನ್ನು ಆಚರಿಸುತ್ತಿದ್ದೇವೆ" ಎಂಬ ಸಂದೇಶವೂ ಇದೆ.

ಹಂಚಿಕೊಂಡಿರುವ ವಿಡಿಯೋದಲ್ಲಿ, ನೀಲಿ ಬಣ್ಣದ ಉಡುಗೆಯಲ್ಲಿ ಕಂಗೊಳಿಸುತ್ತಿರುವ ಉಪಾಸನಾ ಅವರು, ಕುಟುಂಬದ ಸದಸ್ಯರಿಂದ ಆಶೀರ್ವಾದ ಮತ್ತು ಉಡುಗೊರೆಗಳನ್ನು ಸ್ವೀಕರಿಸುತ್ತಿದ್ದಾರೆ. ಅವರ ಪಕ್ಕದಲ್ಲಿ ಪತಿ ರಾಮ್ ಚರಣ್ ಮತ್ತು ಮಗಳು ಕ್ಲಿನ್ ಕಾರಾ ಕೂಡ ಇದ್ದಾರೆ. ಈ ಸುಂದರ ಕ್ಷಣಗಳಲ್ಲಿ ಚಿರಂಜೀವಿ, ಅವರ ಪತ್ನಿ ಸುರೇಖಾ, ನಯನತಾರಾ, ವಿಘ್ನೇಶ್ ಶಿವನ್, ಪವನ್ ಕಲ್ಯಾಣ್ ಅವರ ಪತ್ನಿ ಅನ್ನಾ ಲೆಜ್ನೆವಾ, ವೆಂಕಟೇಶ್ ದಗ್ಗುಬಾಟಿ, ವರುಣ್ ತೇಜ್, ಮತ್ತು ಲಾವಣ್ಯ ತ್ರಿಪಾಠಿ ಸೇರಿದಂತೆ ಇಡೀ 'ಮೆಗಾ' ಕುಟುಂಬವೇ ಭಾಗವಹಿಸಿ, ಸಂಭ್ರಮಿಸಿದೆ.

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ, ಅಭಿಮಾನಿಗಳು ಮತ್ತು ಚಿತ್ರರಂಗದ ಗಣ್ಯರು ರಾಮ್ ಚರಣ್-ಉಪಾಸನಾ ದಂಪತಿಗೆ ಶುಭಾಶಯಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.

2012ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ರಾಮ್ ಚರಣ್ ಮತ್ತು ಉಪಾಸನಾ, 2023ರ ಜೂನ್ 20 ರಂದು ತಮ್ಮ ಮೊದಲ ಮಗಳು ಕ್ಲಿನ್ ಕಾರಾ ಕೊನಿಡೇಲಾಳನ್ನು ಬರಮಾಡಿಕೊಂಡಿದ್ದರು. ಈಗ, ಎರಡನೇ ಮಗುವಿನ ಆಗಮನದ ನಿರೀಕ್ಷೆಯಲ್ಲಿರುವ ಈ ದಂಪತಿಯ ಸಂತಸ ಇಮ್ಮಡಿಗೊಂಡಿದೆ.

Read More
Next Story