Rajinikanth jailer 2| ರಜನಿಕಾಂತ್ ನಟನೆಯ ‘ಜೈಲರ್ 2’  ಘೋಷಣೆ
x
ಜೈಲರ್ 2 ಸಿನಿಮಾ ಘೋಷಣೆಯಾಗಿದೆ.

Rajinikanth jailer 2| ರಜನಿಕಾಂತ್ ನಟನೆಯ ‘ಜೈಲರ್ 2’ ಘೋಷಣೆ

Rajinikanth jailer 2| 'ಜೈಲರ್ 2' ಬಿಡುಗಡೆ ದಿನಾಂಕದ ಬಗ್ಗೆ ಇನ್ನೂ ಯಾವುದೇ ಅಧಿಕೃತ ಘೋಷಣೆ ಬಂದಿಲ್ಲ. ಚಿತ್ರದ ಪಾತ್ರವರ್ಗದ ಬಗ್ಗೆಯೂ ಸಸ್ಪೆನ್ಸ್ ಇದೆ.


ರಜನಿಕಾಂತ್ ನಟನೆಯ ‘ಜೈಲರ್’ ಸಿನಿಮಾದ ಮುಂದುವರಿದ ಭಾಗ ʼಜೈಲರ್‌ 2ʼ ಘೋಷಣೆಯಾಗಿದೆ. ಪೊಂಗಲ್ ಹಬ್ಬದ ಪ್ರಯುಕ್ತ ಸನ್ ಪಿಕ್ಚರ್ಸ್ ತನ್ನ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ 'ಜೈಲರ್ 2' ಚಿತ್ರದ ಟೀಸರ್ ಹಂಚಿಕೊಂಡು ʻಜೈಲರ್‌ 2' ಸಿನಿಮಾದ ಅಧಿಕೃತ ಘೋಷಣೆ ಮಾಡಿದೆ. ಈ 4 ನಿಮಿಷಗಳ ಟೀಸರ್‌ನಲ್ಲಿ 74 ವರ್ಷದ ತಲೈವಾ ಕನ್ನಡಕ ಧರಿಸಿ ತನ್ನ ಶತ್ರುಗಳನ್ನು ಹೊಡೆಯುತ್ತಿರುವುದನ್ನು ಕಾಣಬಹುದು.

'ಜೈಲರ್ 2' ಟೀಸರ್ ಹೇಗಿದೆ?

'ಜೈಲರ್ 2' ಚಿತ್ರವನ್ನು ನೆಲ್ಸನ್ ನಿರ್ದೇಶಿಸಿದ್ದಾರೆ ಮತ್ತು ಅನಿರುದ್ಧ್ ಸಂಗೀತ ನೀಡಿದ್ದಾರೆ. ಟೀಸರ್‌ನಲ್ಲಿ ನೆಲ್ಸನ್ ಮತ್ತು ಅನಿರುದ್ಧ್ ಹೊಸ ಸ್ಕ್ರಿಪ್ಟ್ ಬಗ್ಗೆ ಚರ್ಚಿಸುತ್ತಿರುವುದನ್ನು ತೋರಿಸಲಾಗಿದೆ. ಆಗ ಗುಂಡಿನ ಚಕಮಕಿ ನಡೆಯುತ್ತದೆ. ಬಳಿಕ ಶಿಳ್ಳೆ ಹೊಡೆಯುತ್ತಾ ರಜನಿಕಾಂತ್‌ ಪ್ರವೇಶ ಮಾಡುತ್ತಾರೆ. ಅಲ್ಲಿ ಅವರು ಗೂಂಡಾಗಳ ವಿರುದ್ಧ ಹೋರಾಡುವುದನ್ನು ಕಾಣಬಹುದು. ಟೀಸರ್‌ನಲ್ಲಿ ತೋರಿಸಿರುವ ನಾಲ್ಕು ನಿಮಿಷಗಳ ಆಕ್ಷನ್ ಅಭಿಮಾನಿಗಳನ್ನು ಇನ್ನಷ್ಟು ರೋಮಾಂಚನಗೊಳಿಸಿದೆ.

'ಜೈಲರ್ 2' ಬಿಡುಗಡೆ ದಿನಾಂಕ ಮತ್ತು ಪಾತ್ರವರ್ಗ

'ಜೈಲರ್' ಸಿನಿಮಾ 2023 ರಲ್ಲಿ ಬಿಡುಗಡೆಯಾಗಿತ್ತು. ಇದು ರಜನಿಕಾಂತ್ ಅವರ ವೃತ್ತಿಜೀವನದಲ್ಲಿ ಎರಡನೇ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರ ಎಂದು ಸಾಬೀತಾಯಿತು. 'ಜೈಲರ್ 2' ಬಿಡುಗಡೆ ದಿನಾಂಕದ ಬಗ್ಗೆ ಇನ್ನೂ ಯಾವುದೇ ಅಧಿಕೃತ ಘೋಷಣೆ ಬಂದಿಲ್ಲ. ಚಿತ್ರದ ಪಾತ್ರವರ್ಗದ ಬಗ್ಗೆಯೂ ಸಸ್ಪೆನ್ಸ್ ಇದೆ. ವಿಜಯ್ ಕಾರ್ತಿಕ್ ಕಣ್ಣನ್, ಶಿವರಾಜ್‌ಕುಮಾರ್, ಮೋಹನ್ ಲಾಲ್ ಮತ್ತು ಜಾಕಿ ಶ್ರಾಫ್ ಈ ಸೀಕ್ವೆಲ್‌ಗೆ ಮರಳುತ್ತಾರೆಯೇ ಎಂದು ಕಾದು ನೋಡಬೇಕಾಗಿದೆ.

ರಜನಿಕಾಂತ್ ಮುಂಬರುವ ಸಿನಿಮಾಗಳು

'ಜೈಲರ್ 2' ಜೊತೆಗೆ, ರಜನಿಕಾಂತ್ 'ಕೂಲಿ' ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದು ಬಹು ತಾರಾಗಣದ ಚಿತ್ರವಾಗಲಿದ್ದು, ಇದರಲ್ಲಿ ನಾಗಾರ್ಜುನ, ಉಪೇಂದ್ರ, ಸೌಬಿನ್ ಶಾಹಿರ್ ಮತ್ತು ಶ್ರುತಿ ಹಾಸನ್ ಅವರಂತಹ ದೊಡ್ಡ ತಾರೆಯರು ನಟಿಸುವ ಸಾಧ್ಯತೆ ಇದೆ. ಈ ಚಿತ್ರದಲ್ಲಿ ಬಾಲಿವುಡ್‌ ನಟ ಆಮಿರ್ ಖಾನ್ ಅವರ ಹೆಸರು ಕೂಡ ಕೇಳಿಬರುತ್ತಿದೆ.

Read More
Next Story