Rajinikanth, a superstar in Kannada, failed in English medium: Video goes viral again
x

ಸೂಪರ್‌ ಸ್ಟಾರ್‌ ರಜನಿಕಾಂತ್‌

ಕನ್ನಡದಲ್ಲಿ ಫಸ್ಟ್‌ ಕ್ಲಾಸ್‌, ಇಂಗ್ಲಿಷ್‌ ಮೀಡಿಯಂನಲ್ಲಿ ಫೇಲ್‌; ತಮಿಳು ಸಿನಿಮಾದಲ್ಲಿ ಸೂಪರ್‌ಸ್ಟಾರ್!‌ ರಜನಿಕಾಂತ್‌ ಏನನ್ನುತ್ತಾರೆ?

ಎಪಿಎಸ್ ಪ್ರೌಢಶಾಲೆ ಶಿಕ್ಷಕರು ತೋರಿದ ಪ್ರೀತಿ, ಸಹಾಯವನ್ನು ಮರೆಯುವಂತಿಲ್ಲ. ಅವರು ಕಷ್ಟ ಅರ್ಥಮಾಡಿಕೊಂಡು ಪ್ರೀತಿಯಿಂದ ಕಲಿಸಿದ್ದರಿಂದ, 8 ಮತ್ತು 9 ನೇ ತರಗತಿಗಳನ್ನು ಪಾಸಾದೆ ಎಂದು ನೆನಪಿಸಿಕೊಂಡಿದ್ದಾರೆ.


Click the Play button to hear this message in audio format

ನಟ, ಸೂಪರ್‌ ಸ್ಟಾರ್‌ ರಜನಿಕಾಂತ್‌ ಶೂಟಿಂಗ್‌ ಸಮಯದ ಬಿಡುವಿನಲ್ಲಿ ತಮ್ಮ ಬಾಲ್ಯ ಹಾಗೂ ಶಾಲಾ ಜೀವನವನ್ನು ನೆಪಿಸಿಕೊಂಡು ಇತ್ತೀಚೆಗೆ ಕನ್ನಡದಲ್ಲಿ ಮಾತನಾಡಿದ್ದರು. ಇದೀಗ ಈ ವಿಡಿಯೋ ಮತ್ತೊಮ್ಮೆ ವೈರಲ್‌ ಆಗಿದ್ದು, ನಟನ ಕನ್ನಡದ ಪ್ರೀತಿ ಹಾಗೂ ಸರಳತೆ ಎಲ್ಲರನ್ನೂ ಮೂಕವಿಸ್ಮತವಾಗಿಸಿದೆ.

ಬ್ಯಾಂಕಾಕ್‌ನಲ್ಲಿ ಚಿತ್ರೀಕರಣ ಮಾಡುತ್ತಿದ್ದ ವೇಳೆ ವಿಡಿಯೋ ಮಾಡಿರುವ ನಟ ರಜನಿಕಾಂತ್, ಕನ್ನಡ ಮಾಧ್ಯಮದಲ್ಲಿ ಕಲಿಯುತ್ತಿದ್ದ ನನ್ನನ್ನು ಆಂಗ್ಲ ಮಾಧ್ಯಮಕ್ಕೆ ಸೇರಿಸಲಾಯಿತು. ಆದರೆ ಇದರಿಂದ ನಾನು ತುಂಬಾ ಖಿನ್ನತೆಗೆ ಒಳಗಾಗಿದ್ದೆ ಎಂದು ನೆನಪಿಸಿಕೊಂಡಿದ್ದಾರೆ.

ಮೊದಲು ಗವಿಪುರದ ಗವಿಗಂಗಾಧರೇಶ್ವರ ದೇವಸ್ಥಾನ ಪಕ್ಕದ ಸುಂಕೇನಹಳ್ಳಿ ಸರ್ಕಾರಿ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಓದುತ್ತಿದ್ದೆ. ಉತ್ತಮ ವಿದ್ಯಾರ್ಥಿಯಾಗಿದ್ದ ನಾನು ತರಗತಿಗೂ ಮೊದಲಿಗನಾಗಿದ್ದು, ಮಾಧ್ಯಮಿಕ ಶಾಲೆಯಲ್ಲಿ ಶೇ.98 ಅಂಕಗಳೊಂದಿಗೆ ಪಾಸಾಗಿದ್ದೆ. ಆದರೆ, ಎಪಿಎಸ್ (ಆಚಾರ್ಯ ಪಾಠ ಹೈಸ್ಕೂಲ್ ಮತ್ತು ಕಾಲೇಜುಗೆ ಪ್ರವೇಶ ಪಡೆದು ಇಂಗ್ಲಿಷ್ ಮಾಧ್ಯಮಕ್ಕೆ ಬಂದಾಗ ಪರಿಸ್ಥಿತಿ ಬದಲಾಯಿತು ಎಂದು ನೆನಪಿಸಿಕೊಂಡರು.

ಶಿಕ್ಷಕರ ಪ್ರೀತಿ ಮತ್ತು ಪ್ರೋತ್ಸಾಹ

ಆಂಗ್ಲ ಭಾಷೆಯಲ್ಲಿ ಕಲಿಯಲು ಕಷ್ಟವಾಗುತ್ತಿತ್ತು. ಈ ಸಮಯದಲ್ಲಿ ಎಪಿಎಸ್ ಪ್ರೌಢಶಾಲೆಯ ಶಿಕ್ಷಕರು ತೋರಿದ ಪ್ರೀತಿ ಮತ್ತು ಸಹಾಯವನ್ನು ಮರೆಯುವಂತಿಲ್ಲ. ಶಿಕ್ಷಕರು ನಮ್ಮ ಕಷ್ಟಗಳನ್ನು ಅರ್ಥಮಾಡಿಕೊಂಡು ಪ್ರೀತಿಯಿಂದ ಕಲಿಸಿದ್ದರಿಂದ, 8 ಮತ್ತು 9 ನೇ ತರಗತಿಗಳನ್ನು ಪಾಸಾದೆ. ಆದಾಗ್ಯೂ, ಪಬ್ಲಿಕ್ ಪರೀಕ್ಷೆಯಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ ವಿಷಯ ಕಷ್ಟವಾಗಿದ್ದರಿಂದ ಅನುತ್ತೀರ್ಣನಾಗಿದ್ದೆ. ಆಗ ಎನ್‌ಸಿಆರ್‌ ಹಾಗೂ ಎಸ್‌ಕೆಆರ್‌ ಹೆಸರಿನ ಶಿಕ್ಷಕರು ವಿಶೇಷ ತರಗತಿಗಳನ್ನು ನಡೆಸಿದರು. ಆ ತರಗತಿಗಳ ಸಹಾಯದಿಂದಲೇ ನಾನು ಉತ್ತೀರ್ಣನಾಗಲು ಸಾಧ್ಯವಾಯಿತು.

ನಟನಾ ವೃತ್ತಿಗೆ ಎಪಿಎಸ್ ಪ್ರೌಢಶಾಲೆಯೇ ಅಡಿಪಾಯ

ನನ್ನ ನಟನೆಗೆ ಅಡಿಪಾಯ ದೊರೆತಿದ್ದೇ ಎಪಿಎಸ್ ಪ್ರೌಢಶಾಲೆಯಲ್ಲಿ. ಅಲ್ಲಿ ಪ್ರತಿ ವರ್ಷ ನಡೆಯುತ್ತಿದ್ದ ಅಂತರ್‌ ಪ್ರೌಢಶಾಲಾ ನಾಟಕ ಸ್ಪರ್ಧೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದೆ. ಕೆಲವೊಮ್ಮೆ ಶಿಕ್ಷಕರ ಪ್ರಸ್ತುತಿಗೆ ತಡವಾದಾಗ, ನಾನು ಬಂದು ಸ್ಕ್ರಿಪ್ಟ್ ಓದುತ್ತಿದ್ದೆ ಮತ್ತು ನಟಿಸಿ ಕಥೆಯನ್ನು ಹೇಳುತ್ತಿದ್ದೆ. ನಾಟಕದ ಬಗ್ಗೆ ನನಗೆ ಹೀಗೆಯೇ ತಿಳಿಯಿತು. ಒಂದು ಬಾರಿ 'ಆದಿ ಶಂಕರ ಮತ್ತು ಚಂಡಾಳ' ನಾಟಕದಲ್ಲಿ ಚಂಡಾಳ ಪಾತ್ರವನ್ನು ನಿರ್ವಹಿಸಿದ್ದೆ. ಈ ಪಾತ್ರಕ್ಕಾಗಿ ವಿದ್ಯಾರ್ಥಿಗಳಿಂದ ಅಪಾರ ಮೆಚ್ಚುಗೆ ದೊರೆಯಿತು. ಅಂತರ್‌ ಪ್ರೌಢಶಾಲಾ ನಾಟಕ ಸ್ಪರ್ಧೆಯಲ್ಲಿ ಭಾಗವಹಿಸಿ, ತಮ್ಮ ನಾಟಕಕ್ಕಾಗಿ ಪ್ರಶಸ್ತಿಯನ್ನು ಪಡೆದಿದ್ದೆ ಮತ್ತು ವೈಯಕ್ತಿಕವಾಗಿ ಅತ್ಯುತ್ತಮ ನಟ ಪ್ರಶಸ್ತಿಯನ್ನೂ ನನಗೆ ನೀಡಲಾಗಿತ್ತು. "ಆಗ ನಾನು ನಟನಾಗಿ ಗುರುತಿಸಲ್ಪಟ್ಟೆ. ಅದು ನನ್ನ ವೃತ್ತಿಯಾಯಿತು. ಈಗ, ನಾನು ಸಾಧ್ಯವಾದಷ್ಟು ನಟಿಸುವ ಮೂಲಕ ಜನರನ್ನು ಸಂತೋಷಪಡಿಸುತ್ತಿದ್ದೇನೆ," ಎಂದು ತಿಳಿಸಿದರು.

ಶಾಲೆಯ ನೆನಪುಗಳು

ಶಾಲೆಯ ಕಟ್ಟಡ, ಅದರ ಮುಂದಿದ್ದ ದೊಡ್ಡ ಮೈದಾನ, ಅಲ್ಲಿ ಆಡಿದ ಕ್ರಿಕೆಟ್, ಫುಟ್ಬಾಲ್, ಕಬಡ್ಡಿ ಆಟಗಳು, ಹನುಮಂತನಗರದಲ್ಲಿರುವ ತಮ್ಮ ಮನೆಯಿಂದ ಬಸ್‌ನಲ್ಲಿ ಶಾಲೆಗೆ ಹೋಗುತ್ತಿದ್ದ ದಿನಗಳು ಸೇರಿದಂತೆ ಎಲ್ಲಾ ನೆನಪುಗಳು ಇನ್ನೂ ತಮ್ಮ ಮನಸ್ಸಿನಲ್ಲಿ ಹಸಿರಾಗಿವೆ ಎಂದು ತಿಳಿಸಿದರು.


Read More
Next Story