ಮತ್ತೆ ಹಕ್ಕು ಚಲಾಯಿಸಿದ ನವುಲೆ ಕೆರೆ: ಕೆಎಸ್ ಸಿಎ ಸ್ಟೇಡಿಯಂನಲ್ಲಿ ಜಲಪಕ್ಷಿಗಳ ಕಲರವ
x

ಮತ್ತೆ ಹಕ್ಕು ಚಲಾಯಿಸಿದ ನವುಲೆ ಕೆರೆ: ಕೆಎಸ್ ಸಿಎ ಸ್ಟೇಡಿಯಂನಲ್ಲಿ ಜಲಪಕ್ಷಿಗಳ ಕಲರವ

ರಣಜಿ, ಕೆಪಿಎಲ್ ನಂಥಹ ಪ್ರತಿಷ್ಠಿತ ಕ್ರಿಕೆಟ್ ಮ್ಯಾಚ್ ಗಳು ನಡೆಯುತ್ತಿದ್ದ ಪಿಚ್ ನಲ್ಲಿ ಈಗ ಬಾತುಕೋಳಿ, ನೀರುಕೋಳಿ, ನೀರು ಕಾಗೆ, ಹೆಜ್ಜಾರ್ಲೆಯಂತಹ ನೀರಹಕ್ಕಿಗಳು ಜಲಕ್ರೀಡೆಯಾಡುತ್ತಿವೆ. ಕಳೆದ ಒಂದು ವಾರದಿಂದ ನಿರಂತರ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಶಿವಮೊಗ್ಗದ ಪ್ರತಿಷ್ಠಿತ ಕೆಎಸ್‌ಸಿಎ(ಕರ್ನಾಟಕ ಸ್ಟೇಟ್ ಕ್ರಿಕೆಟ್ ಅಸೋಸಿಯೇಷನ್) ಕ್ರೀಡಾಂಗಣದ ಮೇಲೆ ಆ ಜಾಗದ ಮೂಲ ಹಕ್ಕುದಾರ ನವುಲೆ ಕೆರೆ ಮತ್ತೆ ಹಕ್ಕು ಚಲಾಯಿಸಿದೆ.


ರಣಜಿ, ಕೆಪಿಎಲ್ ನಂಥಹ ಪ್ರತಿಷ್ಠಿತ ಕ್ರಿಕೆಟ್ ಮ್ಯಾಚ್ ಗಳು ನಡೆಯುತ್ತಿದ್ದ ಪಿಚ್ ನಲ್ಲಿ ಈಗ ಬಾತುಕೋಳಿ, ನೀರುಕೋಳಿ, ನೀರು ಕಾಗೆ, ಹೆಜ್ಜಾರ್ಲೆಯಂತಹ ನೀರಹಕ್ಕಿಗಳು ಜಲಕ್ರೀಡೆಯಾಡುತ್ತಿವೆ.

ಕಳೆದ ಒಂದು ವಾರದಿಂದ ನಿರಂತರ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಶಿವಮೊಗ್ಗದ ಪ್ರತಿಷ್ಠಿತ ಕೆಎಸ್‌ಸಿಎ(ಕರ್ನಾಟಕ ಸ್ಟೇಟ್ ಕ್ರಿಕೆಟ್ ಅಸೋಸಿಯೇಷನ್) ಕ್ರೀಡಾಂಗಣದ ಮೇಲೆ ಆ ಜಾಗದ ಮೂಲ ಹಕ್ಕುದಾರ ನವುಲೆ ಕೆರೆ ಮತ್ತೆ ಹಕ್ಕು ಚಲಾಯಿಸಿದೆ.

ಹಾಗಾಗಿ, ರಣಜಿ, ಕೆಪಿಎಲ್ ನಂಥಹ ಪ್ರತಿಷ್ಠಿತ ಕ್ರಿಕೆಟ್ ಮ್ಯಾಚ್ ಗಳು ನಡೆಯುತ್ತಿದ್ದ ಪಿಚ್ ನಲ್ಲಿ ಈಗ ಬಾತುಕೋಳಿ, ನೀರುಕೋಳಿ, ನೀರು ಕಾಗೆ, ಹೆಜ್ಜಾರ್ಲೆಯಂತಹ ನೀರಹಕ್ಕಿಗಳು ಜಲಕ್ರೀಡೆಯಾಡುತ್ತಿವೆ.

ಇದೇ ಮೊದಲೇನಲ್ಲ!

ಹಾಗೆ ನೋಡಿದರೆ ಜಲಪಕ್ಷಿಗಳ ಜಲಕ್ರೀಡೆಗೆ ನೂರಾರು ಕೋಟಿ ವೆಚ್ಚದ ಈ ಕ್ರೀಡಾಂಗಣ ನೆಲೆಯಾಗುತ್ತಿರುವುದು ಇದು ಮೊದಲೇನಲ್ಲ.

2016-17ರ ಹೊತ್ತಿಗೆ ಕ್ರೀಡಾಂಗಣ ಕಾಮಗಾರಿ ಪೂರ್ಣಗೊಂಡು ಕ್ರೀಡಾ ಚಟುವಟಿಕೆಗೆ ಚಾಲನೆ ನೀಡಿದಾಗಿನಿಂದಲೂ ಮಳೆ ಜೋರಾದಾಗೆಲ್ಲಾ 'ಸುಸಜ್ಜಿತ ಸ್ವಿಮ್ಮಿಂಗ್ ಪೂಲ್' ಸೃಷ್ಟಿಯಾಗುವುದು ಸಾಮಾನ್ಯ. 2019, 2021 ಮತ್ತು, 2022ರಲ್ಲಿ ಕೂಡ ಕ್ರೀಡಾಂಗಣ ಜಲ ದಿಗ್ಭಂಧನಕ್ಕೆ ಒಳಗಾಗಿತ್ತು.

ಅಂದರೆ ಮಲೆನಾಡಿನ ಸಹಜ ಮಳೆಗಾಲದಲ್ಲಿ ಯಾವಾಗೆಲ್ಲಾ ಸಾಮಾನ್ಯ ವಾಡಿಕೆಯ ಮಳೆಯಾಗುವುದೋ ಅವಾಗೆಲ್ಲಾ ಈ ಕ್ರೀಡಾಂಗಣ ನೀರು ತುಂಬಿಕೊಂಡು ತನ್ನ ಮೂಲ ಸ್ವರೂಪವಾದ ಕೆರೆಯಾಗಿ ಬದಲಾಗುತ್ತದೆ. ನವುಲೆಯ ಕೆರೆ ತನ್ನ ಮೂಲ ಮಾಲೀಕತ್ವದ ಜಾಗದ ಮೇಲೆ ಹಕ್ಕು ಚಲಾಯಿಸುತ್ತದೆ.


ಕೆರೆ ಯಾಕೆ ಒತ್ತುವರಿ ಮಾಡುತ್ತೆ?

ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಂಗಣ ನಿರ್ಮಿಸಿರುವ ಈ ಜಾಗ ವಾಸ್ತವವಾಗಿ ಶಿವಮೊಗ್ಗದ ದೊಡ್ಡ ಕೆರೆಗಳಲ್ಲಿ ಒಂದಾದ ನವುಲೆ ಕೆರೆಗೆ ಸೇರಿದ್ದು. ಬರೋಬ್ಬರಿ 31 ಎಕರೆ ಕೆರೆಯ ಜಾಗದಲ್ಲಿ ಬಹುತೇಕ ಜಾಗವನ್ನು (26 ಎಕರೆ ಜಾಗ) ಈ ಕ್ರೀಡಾಂಗಣ ಕಬಳಿಸಿದೆ.

ಹಾಗಾಗಿ ಪ್ರತಿ ವರ್ಷವೂ ಈ ಜಾಗಕ್ಕಾಗಿ ಕೆಎಸ್ ಸಿಎ ಮತ್ತು ನವುಲೆ ಕರೆ ನಡುವೆ ಇಲ್ಲಿ ಪಂದ್ಯ ನಡೆಯುತ್ತದೆ. ಬೇಸಿಗೆ ಏಳೆಂಟು ತಿಂಗಳು ಕೆಎಸ್ ಸಿಎ ಪಂದ್ಯ ವಿಜೇತನಾದರೆ ಆಗ ಅಲ್ಲಿ ಚೆಂಡು ಮತ್ತು ಬ್ಯಾಟಿನ ಕಲರವವಾದರೆ, ಮಳೆಗಾಲದ ಮೂರ್ನಾಲ್ಕು ತಿಂಗಳು ಕೆರೆ ಮ್ಯಾಚ್ ಗೆಲ್ಲುತ್ತದೆ. ಆಗ ಅಲ್ಲಿ ಕೆರೆಯ ಬಂಧುಬಳಗವಾದ ಜಲಚರಗಳ ಕಲರವ ಮೊಳಗುತ್ತದೆ.

ಪರಿಸರವಾದಿಗಳು ಎಚ್ಚರಿಸಿದ್ದರು

ನಗರದ ಪ್ರಮುಖ ಕೆರೆಯಾದ ನವುಲೆ ಕೆರೆಗೆ ಬೊಮ್ಮನಕಟ್ಟೆ, ಕಲ್ಲುಗಂಗೂರು, ಬಸವನಗಂಗೂರು ಮುಂತಾದ ಊರುಗಳ ಸರಣಿ ಕೆರೆಯ ಸಂಪರ್ಕವಿದೆ. ಹಾಗಾಗಿ ಸಾಮಾನ್ಯ ಮಳೆಗಾಲದಲ್ಲೂ ಕೆರೆಗೆ ಮೇಲಿನ ಕೆರೆಗಳಿಂದ ಭಾರೀ ನೀರು ಹರಿದುಬರುತ್ತದೆ.

ತೀರಾ ಬರಗಾಲದಲ್ಲಿ ಮಾತ್ರ ಕೆರೆ ಒಣಗಿ ಬಡವಾಗುತ್ತದೆ. ಹೀಗೆ ಬೇಸಿಗೆಯಲ್ಲಿ ಬತ್ತಿದ ಕೆರೆಯನ್ನೇ ಮಾನದಂಡವಾಗಿ ಪರಿಗಣಿಸಿ 2006-07ರಲ್ಲಿ ಇಲ್ಲಿ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣಕ್ಕೆ ಶಿವಮೊಗ್ಗ ನಗರಾಭಿವೃದ್ಧಿ ಪ್ರಾಧಿಕಾರದ ಮೂಲಕ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿತ್ತು.

ಅದರ ಬೆನ್ನಲ್ಲೇ ಅಂದು ಡಿಸಿಎಂ ಆಗಿ ಶಿವಮೊಗ್ಗದಲ್ಲಿ ಹೊಸ ಅಭಿವೃದ್ಧಿ ಶಕೆ ಆರಂಭಿಸಿದ್ದ ಬಿಎಸ್ ಯಡಿಯೂರಪ್ಪ, ಕೆಎಸ್ ಸಿಎ ಗೆ 30 ವರ್ಷದ ಲೀಜ್ ಮೇಲೆ ಜಾಗ ನೀಡಿ ಸುಸಜ್ಜಿತ ಕ್ರೀಡಾಂಗಣ ನಿರ್ಮಾಣಕ್ಕೆ ಚಾಲನೆ ನೀಡಿದ್ದರು.

ಆದರೆ ಶಿವಮೊಗ್ಗದ ಪರಿಸರಪ್ರಿಯರು ಅಂದೇ ಕೆರೆ ಜಾಗದ ಒತ್ತುವರಿ ವಿರುದ್ಧ ಬೀದಿ ಹೋರಾಟ ನಡೆಸಿದ್ದರು. ಜೀವಂತ ಕೆರೆಯನ್ನು ಕ್ರೀಡಾಂಗಣ ಮಾಡುವುದು ಕಾನೂನುಬಾಹಿರ, ಅಲ್ಲದೆ ಕೆರೆ ತನ್ನ ಜಾಗವನ್ನು ಮತ್ತೆ ಪಡೆದುಕೊಳ್ಳಲಿದೆ ಎಂದೂ ಎಚ್ಚರಿಸಿದ್ದರು.

ಆ ಎಚ್ಚರಿಕೆ ಇದೀಗ ಪ್ರತಿ ವರ್ಷ ನಿಜವಾಗುತ್ತಲೇ ಇದೆ. ಕ್ರೀಡಾಂಗಣ ತನ್ನಿಂತಾನೆ ಸ್ವಿಮ್ಮಿಂಗ್ ಪೂಲ್ ಆಗಿ ಬದಲಾಗುತ್ತಲೇ ಇದೆ.

Read More
Next Story