ಮಾರುಕಟ್ಟೆಗೆ ಬಂತು ರಾಗಿ ಅಂಬಲಿ, ಪ್ರೊಬಯಾಟಿಕ್ ಮಜ್ಜಿಗೆ !
x
ರಾಗಿ ಅಂಬಲಿ, ಪ್ರೊಬಯಾಟಿಕ್‌ ಮಜ್ಜಿಗೆ

ಮಾರುಕಟ್ಟೆಗೆ ಬಂತು ರಾಗಿ ಅಂಬಲಿ, ಪ್ರೊಬಯಾಟಿಕ್ ಮಜ್ಜಿಗೆ !

ಕರ್ನಾಟಕದಲ್ಲಿ ಈ ಬಾರಿ ಕಂಡು ಕೇಳರಿಯದ ಬಿಸಿಲ ಝಳ ಇದೆ. ಇದೀಗ ಮಾರುಕಟ್ಟೆಗೆ ರಾಗಿ ಅಂಬಲಿ ಹಾಗೂ ಪ್ರೊಬಯಾಟಿಕ್‌ ಮಜ್ಜಿಗೆ ಬಂದಿದ್ದು, ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.


ಕರ್ನಾಟಕದಲ್ಲಿ ಈ ಬಾರಿ ಕಂಡು ಕೇಳರಿಯದ ಬಿಸಿಲಿದೆ. ಬಿಸಿಲು ಹೆಚ್ಚಾಗಿರುವುದರಿಂದ ಮಜ್ಜಿಗೆ ಸೇರಿದಂತೆ ತಂಪು ಪಾನೀಯಗಳಿಗೆ ಭಾರೀ ಬೇಡಿಕೆ ಇದೆ. ಇದೀಗ ಮೈಸೂರು ಹಾಲು ಉತ್ಪಾದಕರ ಒಕ್ಕೂಟ(Mymul) ಗ್ರಾಹಕರಿಗೆ ಗುಡ್‌ನ್ಯೂಸ್‌ ಕೊಟ್ಟಿದ್ದು, ಆರೋಗ್ಯಕಾರಿ ಉತ್ಪನ್ನವಾಗಿರುವ ರಾಗಿ ಅಂಬಲಿ ಹಾಗೂ ಪ್ರೊಬಯಾಟಿಕ್ ಮಜ್ಜಿಗೆ ಪ್ಯಾಕೇಟ್‌ಗಳನ್ನು ಪರಿಚಯಿಸಿದೆ.

ಏಪ್ರಿಲ್ ಮೊದಲ ವಾರದಿಂದ ಈ ಉತ್ಪನ್ನಗಳನ್ನು ಪರಿಚಯಿಸಲಾಗಿದ್ದು, ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹುರಿದ ರಾಗಿ ಹಿಟ್ಟಿಗೆ ಮಜ್ಜಿಗೆ ಹಾಗೂ ಜೀರಿಗೆಯನ್ನು ಮಿಶ್ರಣ ಮಾಡಿ, ರುಚಿ ಮತ್ತು ಆರೋಗ್ಯಕರ ರಾಗಿ ಅಂಬಲಿ ಪ್ಯಾಕೇಟ್ ಪರಿಚಯಿಸಲಾಗಿದೆ. 200 ಎಂಎಲ್‌ನ ಒಂದು ಪ್ಯಾಕೇಟ್‌ಗೆ 10 ರೂಪಾಯಿ ನಿಗದಿ ಮಾಡಲಾಗಿದೆ. ಮೈಸೂರು ಡೇರಿಯಿಂದ ಮತ್ತೊಂದು ಹೊಸ ಉತ್ಪನ್ನ ಪ್ರೊಬಯಾಟಿಕ್ ಮಜ್ಜಿಗೆ ಪರಿಚಯಿಸಲಾಗಿದ್ದು, 200 ಎಂಎಲ್‌ನ ಒಂದು ಪ್ಯಾಕೇಟ್‌ಗೆ 10 ರೂಪಾಯಿ ಇದೆ.

ಹೊಸ ಮಾದರಿಯ ರಾಗಿ ಅಂಬಲಿ ಹಾಗೂ ಪ್ರೊಬಯಾಟಿಕ್ ಮಜ್ಜಿಗೆಗೆ ಗ್ರಾಹಕರಿಂದ ಉತ್ತಮ ಸ್ಪಂದನೆ ಸಿಕ್ಕಿದೆ ಎಂದು ಮೈಸೂರು ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ವಿಜಯಕುಮಾರ್ ತಿಳಿಸಿದ್ದಾರೆ.

ರೈತರಿಂದ ನೇರವಾಗಿ ರಾಗಿ ಖರೀದಿ ಮಾಡುತ್ತಿದ್ದೇವೆ. ರಾಗಿ ಪುಡಿ ಮಾಡಲು ಅವಶ್ಯವಿರುವ ಯಂತ್ರಗಳನ್ನು ಅಳವಡಿಸಿಕೊಂಡಿದ್ದೇವೆ. ಅಂಬಲಿ, ಮಜ್ಜಿಗೆ ಮತ್ತು ಜೀರಿಗೆ ಮಿಶ್ರಣದಿಂದ ಉತ್ಪನ್ನ ತಯಾರಿಸಲಾಗುತ್ತಿದೆ. ಈ ಉತ್ಪನ್ನಗಳಿಂದ ದೇಹದ ಉಷ್ಣಾಂಶ ನಿಯಂತ್ರಣಕ್ಕೆ ಸಹಕಾರಿಯಾಗಲಿದೆ. ಸದ್ಯ ಒಂದು ಸಾವಿರ ಲೀಟರ್ ರಾಗಿ ಅಂಬಲಿ ತಯಾರಿಸುತ್ತಿದ್ದೇವೆ. ಬೇಡಿಕೆಗೆ ಅನುಗುಣವಾಗಿ ಮುಂದೆ ರಾಗಿ ಅಂಬಲಿ ಪ್ಯಾಕೇಟ್‌ಗಳ ಪ್ರಮಾಣ ಹೆಚ್ಚಳ ಮಾಡುವ ಚಿಂತನೆ ಇದೆ. ಅಲ್ಲದೇ ಮುಂದಿನ ದಿನಗಳಲ್ಲಿ ವಿವಿಧ ರುಚಿಗಳಲ್ಲೂ ರಾಗಿ ಅಂಬಲಿ ಉತ್ಪನ್ನ ಬಿಡುಗಡೆ ಮಾಡಲಾಗುವುದು ಎಂದರು.

Read More
Next Story