ದುರ್ಬಲರ ಮೇಲಿನ ದೌರ್ಜನ್ಯ ತಡೆಯಿರಿ: ಪೊಲೀಸರಿಗೆ ಸಿಎಂ ಸಿದ್ದರಾಮಯ್ಯ ಸೂಚನೆ
x

ದುರ್ಬಲರ ಮೇಲಿನ ದೌರ್ಜನ್ಯ ತಡೆಯಿರಿ: ಪೊಲೀಸರಿಗೆ ಸಿಎಂ ಸಿದ್ದರಾಮಯ್ಯ ಸೂಚನೆ

ಅವರು ಶನಿವಾರ ರಾಜಭವನದಲ್ಲಿ ನಡೆದ, ಗೃಹ ಇಲಾಖೆಯ ವಿಶಿಷ್ಟ ಸೇವಾ ರಾಷ್ಟ್ರಪತಿ ಪದಕ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.


"ರಾಜ್ಯದಲ್ಲಿ ಜಾತಿ ವ್ಯವಸ್ಥೆ ಇನ್ನೂ ಜೀವಂತವಾಗಿದ್ದು, ದುರ್ಬಲ ವರ್ಗದವರ ಮೇಲೆ ನಿರಂತರವಾಗಿ ದೌರ್ಜನ್ಯಗಳು ನಡೆಯುತ್ತಿವೆ. ಇದನ್ನು ತಡೆಗಟ್ಟುವಲ್ಲಿ ಪೊಲೀಸರು ಸಾಮಾಜಿಕ ಬದ್ಧತೆಯಿಂದ ಕೆಲಸ ಮಾಡಬೇಕು," ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಖಡಕ್ ಸೂಚನೆ ನೀಡಿದರು.

ಅವರು ಶನಿವಾರ ರಾಜಭವನದಲ್ಲಿ ನಡೆದ, ಗೃಹ ಇಲಾಖೆಯ ವಿಶಿಷ್ಟ ಸೇವಾ ರಾಷ್ಟ್ರಪತಿ ಪದಕ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.


ಡಿಸಿಆರ್‌ಇ ಠಾಣೆಗಳ ಕಾರ್ಯವೈಖರಿಗೆ ಅಸಮಾಧಾನ

"ಪ್ರತಿ ಜಿಲ್ಲೆಯಲ್ಲಿ ದೌರ್ಜನ್ಯ ತಡೆಗಟ್ಟಲೆಂದೇ ಸ್ಥಾಪಿಸಲಾಗಿರುವ ಡಿಸಿಆರ್‌ಇ (ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ) ಪೊಲೀಸ್ ಠಾಣೆಗಳ ಕಾರ್ಯವೈಖರಿ ತೃಪ್ತಿದಾಯಕವಾಗಿಲ್ಲ. ಇವುಗಳ ಕಾರ್ಯಕ್ಷಮತೆಯನ್ನು ಗಂಭೀರವಾಗಿ ಪರಿಗಣಿಸಿ, ದುರ್ಬಲರಿಗೆ ಸುರಕ್ಷತೆ ಒದಗಿಸುವ ಸರ್ಕಾರದ ಉದ್ದೇಶವನ್ನು ಸಫಲಗೊಳಿಸಬೇಕು," ಎಂದು ಸಿಎಂ ತಾಕೀತು ಮಾಡಿದರು.

"ಇತರ ರಾಜ್ಯಗಳಿಗೆ ಹೋಲಿಸಿದರೆ, ನಮ್ಮಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ಶಿಕ್ಷೆಯ ಪ್ರಮಾಣ ಅತ್ಯಂತ ಕಡಿಮೆಯಿದೆ. ಈ ಬಗ್ಗೆ ಪೊಲೀಸರು ಗಂಭೀರವಾಗಿ ಗಮನಹರಿಸಬೇಕು," ಎಂದು ಅವರು ಚಾಟಿ ಬೀಸಿದರು.

ಸಾಮಾಜಿಕ ಬದ್ಧತೆ ಅತ್ಯಗತ್ಯ

"ಕಾನೂನು ಸುವ್ಯವಸ್ಥೆ ಕಾಪಾಡುವುದರ ಜೊತೆಗೆ, ಸಮಾಜದಲ್ಲಿನ ಅಸಮಾನತೆಯನ್ನು ತೊಡೆದುಹಾಕಿ, ಸಂವಿಧಾನಬದ್ಧ ರಕ್ಷಣೆಯನ್ನು ಎಲ್ಲರಿಗೂ ತಲುಪಿಸುವುದು ಪೊಲೀಸರ ಜವಾಬ್ದಾರಿಯಾಗಿದೆ. ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡರೆ ಬಹಳಷ್ಟು ಅಪರಾಧಗಳನ್ನು ತಡೆಯಲು ಸಾಧ್ಯ," ಎಂದರು.

"ಬಲಾಢ್ಯರ ಕೈಯಲ್ಲಿ ಅಧಿಕಾರವಿದ್ದರೆ ದುರ್ಬಲರ ಜೀವನ ದುಸ್ತರವಾಗುತ್ತದೆ ಎಂದು ಡಾ. ಬಿ.ಆರ್. ಅಂಬೇಡ್ಕರ್ ಹೇಳಿದ್ದರು. ಆ ಮಾತು ಸದಾ ನೆನಪಿನಲ್ಲಿರಲಿ. ಸಾಮಾನ್ಯ ಜನರಿಗೆ ನ್ಯಾಯ ಸಿಗುವಂತೆ ಮಾಡುವುದು ನಿಮ್ಮ ಕರ್ತವ್ಯ," ಎಂದು ಮುಖ್ಯಮಂತ್ರಿಗಳು ಹೇಳಿದರು.

ಪದಕ ವಿಜೇತ ಅಧಿಕಾರಿಗಳನ್ನು ಅಭಿನಂದಿಸಿದ ಅವರು, "ನಿಮ್ಮ ಸೇವಾ ಮನೋಭಾವ, ಪ್ರಾಮಾಣಿಕತೆ ಮತ್ತು ಪರಿಶ್ರಮ ಇತರರಿಗೆ ಮಾದರಿಯಾಗಬೇಕು. ಪ್ರತಿಯೊಬ್ಬ ಪೊಲೀಸ್ ಸಿಬ್ಬಂದಿಯೂ ಆತ್ಮವಿಮರ್ಶೆ ಮಾಡಿಕೊಂಡು ಉತ್ತಮ ಸೇವೆ ಸಲ್ಲಿಸಬೇಕು," ಎಂದು ಕರೆ ನೀಡಿದರು.

Read More
Next Story