ತಾಕತ್ತಿದ್ದರೆ ಮಕ್ಕಳನ್ನು ಶಾಖೆಗೆ ಸೇರಿಸಿ ಗೋಮೂತ್ರ ಕುಡಿಸಿ: ಬಿಜೆಪಿ ನಾಯಕರಿಗೆ ಪ್ರಿಯಾಂಕ್ ಖರ್ಗೆ ನೇರ ಸವಾಲು
x

ಪ್ರಿಯಾಂಕ್‌ ಖರ್ಗೆ

ತಾಕತ್ತಿದ್ದರೆ ಮಕ್ಕಳನ್ನು ಶಾಖೆಗೆ ಸೇರಿಸಿ ಗೋಮೂತ್ರ ಕುಡಿಸಿ: ಬಿಜೆಪಿ ನಾಯಕರಿಗೆ ಪ್ರಿಯಾಂಕ್ ಖರ್ಗೆ ನೇರ ಸವಾಲು

ಆರ್.ಎಸ್.ಎಸ್ ವಿಚಾರದಲ್ಲಿ ಹೆಚ್ಚು ಮಾತನಾಡುತ್ತಿರುವ ಬಿಜೆಪಿ ನಾಯಕರಿಗೆ ಪ್ರಿಯಾಂಕ್‌ ಖರ್ಗೆ ಅವರು ನೇರ ಸವಾಲೆಸೆದರು. ಅವರಿಗೆ ತಾಕತ್ತಿದ್ದರೆ ತಮ್ಮ ಮಕ್ಕಳನ್ನು ಶಾಖೆಗಳಿಗೆ ಸೇರಿಸಲಿ ಎಂದು ವಾಗ್ದಾಳಿ ನಡೆಸಿದರು.


Click the Play button to hear this message in audio format

ರಾಜ್ಯ ಸರ್ಕಾರದ ವೈಫಲ್ಯ ಮುಚ್ಚಿಕೊಳ್ಳಲು ಆರ್‌ಎಸ್‌ಎಸ್‌ ವಿಚಾರ ಪ್ರಸ್ತಾಪಿಸಲಾಗುತ್ತಿದೆ ಎಂಬ ಬಿಜೆಪಿ ನಾಯಕರ ಆರೋಪಗಳಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರು ತಿರುಗೇಟು ನೀಡಿದ್ದಾರೆ. ತಮ್ಮ ನಿಲುವು ಸಮರ್ಥಿಸಿಕೊಂಡ ಅವರು, ಗನ ಬೇರೆಡೆ ಸೆಳೆಯಲು ವಿವಾದ ಮಾಡಲಾಗಿದೆ ಎಂತಲೇ ಅಂದುಕೊಳ್ಳಲಿ, ಅದರಿಂದೇನು ನಷ್ಟ? ನಮ್ಮ ಬೇಡಿಕೆ ಕಾನೂನುಬಾಹಿರ ಇದೆಯಾ?, ಅಸಂವಿಧಾನಿಕವಾಗಿ ಇದೆಯಾ? ಎಂದು ಪ್ರಶ್ನಿಸಿದ್ದಾರೆ.

ಸರ್ಕಾರಿ ಸಂಸ್ಥೆಗಳಲ್ಲಿ ಸಮವಸ್ತ್ರ ನೀತಿ ತರುವ ತಮ್ಮ ಪ್ರಯತ್ನವನ್ನು ಖರ್ಗೆ ಸಮರ್ಥಿಸಿಕೊಂಡರು. "ನಾವಿರುವುದು ಒಂದು ಯೂನಿಫಾರ್ಮ್ ತರುವುದಕ್ಕೆ ಹೊರತು, ಯಾವುದೇ ಸಂಘಟನೆಯ ಹೆಸರನ್ನು ಉಲ್ಲೇಖಿಸಲು ಅಲ್ಲ. ನಾವು ತರುತ್ತಿರುವ ಕಾನೂನು ಪಾಲನೆ ಕಡ್ಡಾಯವಾಗಬೇಕು ಎಂದು ಸ್ಪಷ್ಟಪಡಿಸಿದರು.

‘ಗೋಮೂತ್ರ’ ಕುಡಿಸಲು ಸವಾಲು

ಆರ್‌ಎಸ್‌ಎಸ್‌ ವಿಚಾರದಲ್ಲಿ ಹೆಚ್ಚು ಮಾತನಾಡುತ್ತಿರುವ ಬಿಜೆಪಿ ನಾಯಕರಿಗೆ ಖರ್ಗೆ ಅವರು ನೇರ ಮತ್ತು ವಿವಾದಾತ್ಮಕ ಸವಾಲೆಸೆದರು. ಅವರಿಗೆ ತಾಕತ್ತಿದ್ದರೆ ತಮ್ಮ ಮಕ್ಕಳನ್ನು ಶಾಖೆಗಳಿಗೆ ಸೇರಿಸಲಿ. ಈ ಶಾಖೆಗಳಲ್ಲಿ ಅವರ ಮಕ್ಕಳು ಯಾಕಿಲ್ಲ? ಗೋ ರಕ್ಷಣೆಗೆ ಯಾಕಿಲ್ಲ?, ತ್ರಿಶೂಲ ದೀಕ್ಷೆ ಕೊಟ್ಟು ಯಾವಾಗ ನಿಮ್ಮ ಮಕ್ಕಳನ್ನ ರಸ್ತೆಗೆ ಬಿಡ್ತೀರಾ?ಎಂದು ವ್ಯಂಗ್ಯವಾಡಿದರು.

ಎಲ್ಲಾ ಬಿಜೆಪಿ ನಾಯಕರ ಮಕ್ಕಳು ಗಣವೇಶ ಧರಿಸಿ ಗೋಮೂತ್ರ ಕುಡಿಯಲಿ, ಆಗ ನಾನು ಮಾತು ನಿಲ್ಲಿಸುತ್ತೇನೆ ಎಂದು ತಿರುಗೇಟು ನೀಡಿದರು.

ಕಾನೂನು ಪಾಲನೆ ಕಡ್ಡಾಯದ ಎಚ್ಚರಿಕೆ

ಸಾರ್ವಜನಿಕ ಸ್ಥಳಗಳಾದ ಸರ್ಕಾರಿ ಶಾಲೆ, ಮೈದಾನ, ಮತ್ತು ಉದ್ಯಾನವನಗಳಲ್ಲಿ ಹೇಗೆ ವರ್ತಿಸಬೇಕು ಎಂಬುದರ ಬಗ್ಗೆ ಸರ್ಕಾರ ಕಾನೂನು ಜಾರಿಗೊಳಿಸುತ್ತಿದೆ. ಕಾನೂನು ಪಾಲನೆ ಮಾಡಲೇಬೇಕು, ಇಲ್ಲವಾದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ. ಯಾವುದೇ ಕಾರ್ಯಕ್ರಮಕ್ಕೆ ಕಡ್ಡಾಯವಾಗಿ ಅನುಮತಿ ತೆಗೆದುಕೊಳ್ಳಬೇಕು ಎಂದು ಖರ್ಗೆ ಎಚ್ಚರಿಸಿದರು.

ಕಲಬುರಗಿಯಲ್ಲಿ ಅ.23 ರಂದು ನಡೆಸಲು ಉದ್ದೇಶಿಸಿರುವ ಪಥಸಂಚಲನಕ್ಕೆ ಬಿಜೆಪಿಯವರು ಅನುಮತಿ ಪಡೆಯಲಿ ಎಂದು ಹೇಳಿದ ಅವರು, 2013 ರಲ್ಲಿ ಆಗಿನ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಬರೆದ ಪತ್ರವನ್ನು ಉಲ್ಲೇಖಿಸಿ, ಆ ಪತ್ರದ ಆಧಾರದ ಮೇಲೆಯೇ ತಾವು ಕಾನೂನು ಜಾರಿ ಮಾಡುತ್ತಿದ್ದೇವೆ ಎಂದರು. ಆಗ ಬಿಜೆಪಿ ನಾಯಕರು ಏಕೆ ವಿರೋಧ ಮಾಡಲಿಲ್ಲ? ಎಂದು ಪ್ರಶ್ನಿಸಿದರು.

ಸುಧಾ ಮೂರ್ತಿ ಸಮೀಕ್ಷೆ ನಿರಾಕರಣೆಗೆ ಅಸಮಾಧಾನ

ಇನ್ಫೋಸಿಸ್ ಸಂಸ್ಥಾಪಕ ಸುಧಾಮೂರ್ತಿ ಅವರು ರಾಜ್ಯದ ಸಾಮಾಜಿಕ-ಆರ್ಥಿಕ ಸಮೀಕ್ಷೆಯಲ್ಲಿ ಭಾಗವಹಿಸಲು ನಿರಾಕರಿಸಿರುವ ಕುರಿತು ಪ್ರತಿಕ್ರಿಯಿಸಿದ ಸಚಿವ ಪ್ರಿಯಾಂಕ್ ಖರ್ಗೆ ಅವರು ತೀವ್ರ ಅಸಮಾಧಾನ ಹೊರಹಾಕಿದರು.

ಇದು ನಾಗರಿಕರ ಜವಾಬ್ದಾರಿ. ಬಡವರಾಗಲಿ ಅಥವಾ ಶ್ರೀಮಂತರಾಗಲಿ, ಸರ್ಕಾರದಿಂದ ಸಮೀಕ್ಷೆ ನಡೆಯುವಾಗ ಹೆಚ್ಚು ಜನ ಭಾಗವಹಿಸಿದರೆ ಸರಿಯಾದ ದತ್ತಾಂಶ ಸಿಗುತ್ತದೆ. ಇದು ಪ್ರತಿಯೊಬ್ಬ ನಾಗರಿಕರ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.

ಸಮೀಕ್ಷೆಯು ಮುಂದಿನ ಯೋಜನೆಗಳನ್ನು ರೂಪಿಸಲು ಸಹಾಯ ಮಾಡುತ್ತದೆ. ಮಾಹಿತಿ ಮುಚ್ಚಿಡುವುದರಲ್ಲಿ ಏನಿದೆ? ಎಷ್ಟು ಪ್ರಶ್ನೆಗೆ ಉತ್ತರ ಬೇಕೋ ಅಷ್ಟು ಕೊಡಬಹುದು. ಭಾಗಿಯೇ ಆಗಲ್ಲ ಅನ್ನುವುದು ಎಷ್ಟು ಸರಿ? ಎಂದು ಪ್ರಶ್ನಿಸಿದರು.

ಸುಧಾ ಮೂರ್ತಿಯವರ ಈ ನಿರ್ಧಾರಕ್ಕೆ ಕೆಲವು ಅವಿವೇಕಿ ಸಂಸದರ ಮಾತು ಪ್ರಭಾವ ಬೀರಿದೆ ಎಂದು ಪರೋಕ್ಷವಾಗಿ ಬಿಜೆಪಿ ನಾಯಕರ ಮೇಲೆ ಆರೋಪ ಮಾಡಿದರು.

ಅವರು ನನಗೇನು ಎಚ್ಚರಿಕೆ ಕೊಡೋದು, ನಾನು ಆಗಲೇ ಎಚ್ಚರ ಆಗಿದಿನಿ. ಪ್ರಬುದ್ಧತೆ ನನಗೆ ಬಂದಿದೆ. ಅದಕ್ಕೆ ಈ ಕೆಲಸ ಮಾಡ್ತಾ ಇದ್ದೀನಿ. ಕಾನೂನು ಅರಿವನ್ನು ಇವರಿಗೆ ಹೇಳ್ತಾ ಇದ್ದೀನಿ. ಫಾಲೋ ದಿ ಲಾ, ಫಾಲೋ ದಿ ಲೈನ್ ಅಷ್ಟೆ ಎಂದು ತಿಳಿಸಿದರು.

Read More
Next Story