Prime Minister Modi holds grand road show in Krishnanagar, Udupi, thousands participate
x

ಉಡುಪಿಯ ರೋಡ್‌ ಶೋನಲ್ಲಿ ಭಾಗವಹಿಸಿದ್ದ ಪ್ರಧಾನಿ ಮೋದಿ

ಕೃಷ್ಣನಗರಿ ಉಡುಪಿಯಲ್ಲಿ ಪ್ರಧಾನಿ ಮೋದಿ ಭರ್ಜರಿ ರೋಡ್‌ ಶೋ; ಸಾವಿರಾರು ಮಂದಿ ಭಾಗಿ

ಆದಿ ಉಡುಪಿಯ ಹೆಲಿಪ್ಯಾಡ್‌ಗೆ ಬಂದಿಳಿದ ಪ್ರಧಾನಿ ಮೋದಿ ಅವರು ಬಿಗಿ ಭದ್ರತೆಯ ನಡುವೆ, ನಗರದ ಬನ್ನಂಜೆ ವೃತ್ತದಿಂದ ಕಲ್ಸಂಕ ವೃತ್ತದವರೆಗೆ ರೋಡ್ ಶೋ ನಡೆಸಿ, ಜನರತ್ತ ಕೈಬೀಸಿದರು.


Click the Play button to hear this message in audio format

ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ ಪಾಲ್ಗೊಳ್ಳಲು ಶುಕ್ರವಾರ (ನ.28) ಉಡುಪಿಗೆ ಬಂದಿಳಿದಿರುವ ಪ್ರಧಾನಿ ನರೇಂದ್ರ ಮೋದಿ ಅವರು ನಗರದಲ್ಲಿ ರೋಡ್ ಶೋ ನಡೆಸಿದರು.

ಪ್ರಧಾನಿ ಮೋದಿ ಅವರನ್ನು ನೋಡಲು ಸಾವಿರಾರು ಸಂಖ್ಯೆಯಲ್ಲಿ ರಸ್ತೆಯ ಇಕ್ಕೆಲಗಳಲ್ಲಿ ನಿಂತು ಹರ್ಷೋದ್ಘಾರ ಮೊಳಗಿಸಿದರು. ಶುಕ್ರವಾರ(ನ.28) ಬೆಳಿಗ್ಗೆ ಆದಿ ಉಡುಪಿಯ ಹೆಲಿಪ್ಯಾಡ್‌ಗೆ ಬಂದಿಳಿದ ಪ್ರಧಾನಿ ಮೋದಿ ಅವರು ಬಿಗಿ ಭದ್ರತೆಯ ನಡುವೆ, ನಗರದ ಬನ್ನಂಜೆ ವೃತ್ತದಿಂದ ಕಲ್ಸಂಕ ವೃತ್ತದವರೆಗೆ ರೋಡ್ ಶೋ ನಡೆಸಿ, ಜನರತ್ತ ಕೈಬೀಸಿದರು.

ಪ್ರಧಾನಿ ಮೋದಿ ರೋಡ್ ಶೋ ವೀಕ್ಷಿಸಲು ಜನರು ಬೆಳಿಗ್ಗೆಯೇ ಜಿಲ್ಲೆಯ ವಿವಿಧೆಡೆಗಳಿಂದ ಬಂದು ರಸ್ತೆಯ ಎರಡೂ ಬದಿಯಲ್ಲಿ ನಿಂತಿದ್ದರು. ಭದ್ರತೆ ದೃಷ್ಟಿಯಿಂದ ಪೊಲೀಸರು ನಗರ ವ್ಯಾಪ್ತಿಯಲ್ಲಿ ವಾಹನ ಸಂಚಾರ ನಿಷೇಧಿಸಿದ್ದರಿಂದ ಜನರು ವಾಹನ ಪಾರ್ಕಿಂಗ್ ಸ್ಥಳಗಳಿಂದ ನಡೆದುಕೊಂಡೇ ರೋಡ್ ಶೋ ಸ್ಥಳಗಳಿಗೆ ಬಂದಿದ್ದರು.

ರೋಡ್‌ ಶೋ ವೇಳೆ ನಗರದ ಕೆಲವೆಡೆ ನಿರ್ಮಿಸಿದ್ದ ವೇದಿಕೆಗಳಲ್ಲಿ ಕರಾವಳಿಯ ಸಂಸ್ಕೃತಿಯನ್ನು ಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರದರ್ಶನಗೊಂಡವು. ಬಿಜೆಪಿ ಕಾರ್ಯಕರ್ತರು ಮೋದಿಗೆ ಸ್ವಾಗತ ಕೋರುವ ಬ್ಯಾನರ್‌ ಹಾಗೂ ಭಿತ್ತಿಪತ್ರಗಳನ್ನು ರಸ್ತೆಯುದ್ದಕ್ಕೂ ಹಾಕಿದ್ದರು. ಶಾಲಾ-ಕಾಲೇಜು ವಿದ್ಯಾರ್ಥಿಗಳು, ಮಹಿಳೆಯರು ಸೇರಿದಂತೆ ಸಾವಿರಾರು ಸಾರ್ವಜನಿಕರು ರೋಡ್‌ ಶೋ ವೀಕ್ಷಿಸಿದರು.

Read More
Next Story