
Beer Price Hike | ಮದ್ಯ ಪ್ರಿಯರಿಗೆ ಬೆಲೆ ಏರಿಕೆ ಶಾಕ್ ; ಅಬಕಾರಿ ಸುಂಕ ಮತ್ತೆ ಶೇ 10ರಷ್ಟು ಹೆಚ್ಚಳಕ್ಕೆ ಸರ್ಕಾರ ನಿರ್ಧಾರ
ಪ್ರಸ್ತುತ, ರಾಜ್ಯದಲ್ಲಿ ಬಿಯರ್ ಮೇಲಿನ ತೆರಿಗೆಯು ಉತ್ಪಾದನಾ ವೆಚ್ಚದ ಶೇ 195 ರಷ್ಟಿದೆ. ಇದೀಗ ಮತ್ತೆ ಶೇ 10 ರಷ್ಟು ಹೆಚ್ಚುವರಿ ಅಬಕಾರಿ ಸುಂಕ ಏರಿಸುವ ಮೂಲಕ ಮದ್ಯಪಾನ ಪ್ರಿಯರ ಮೇಲೆ ಬರೆ ಎಳೆದಿದೆ.
ಮದ್ಯ ಪ್ರಿಯರಿಗೆ ರಾಜ್ಯ ಸರ್ಕಾರ ಬೆಲೆ ಏರಿಕೆಯ ಶಾಕ್ ನೀಡಿದೆ. ಎಲ್ಲಾ ಬಿಯರ್‌ಗಳ ಮೇಲಿನ ಹೆಚ್ಚುವರಿ ಅಬಕಾರಿ ತೆರಿಗೆಯನ್ನು ಶೇ 10 ರಷ್ಟು ಹೆಚ್ಚಳ ಮಾಡಲು ಸರ್ಕಾರ ತೀರ್ಮಾನಿಸಿದೆ.
ಪ್ರಸ್ತುತ, ರಾಜ್ಯದಲ್ಲಿ ಬಿಯರ್ ಮೇಲಿನ ತೆರಿಗೆಯು ಉತ್ಪಾದನಾ ವೆಚ್ಚದ ಶೇ 195 ರಷ್ಟಿದೆ. ಇದೀಗ ಮತ್ತೆ ಶೇ 10 ರಷ್ಟು ಹೆಚ್ಚುವರಿ ಅಬಕಾರಿ ಸುಂಕ ಏರಿಸುವ ಮೂಲಕ ಮದ್ಯಪಾನ ಪ್ರಿಯರ ಮೇಲೆ ಬರೆ ಎಳೆದಿದೆ.
ಪ್ರೀಮಿಯಂ ಅಥವಾ ಇತರ ಬಿಯರ್ ಬ್ರಾಂಡ್‌ಗಳ ಬೆಲೆಯು ಉತ್ಪಾದನಾ ವೆಚ್ಚವನ್ನು ಅವಲಂಬಿಸಿ ಪ್ರತಿ ಬಾಟಲ್ಗೆ ಸುಮಾರು 10 ರೂ. ಹೆಚ್ಚಾಗಬಹುದು.
ಮಧ್ಯಮ ಶ್ರೇಣಿಯ ಮತ್ತು ಅಗ್ಗದ ಸ್ಥಳೀಯ ಬಿಯರ್‌ಗಳಿಗೆ ಪ್ರತಿ ಬಾಟಲ್ಗೆ 5 ರೂ. ವರೆಗೆ ದರ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಈ ಹಿಂದೆ ರಾಜ್ಯದಲ್ಲಿ ಬಿಯರ್ ಮೇಲೆ ಎರಡು ಹಂತದ ತೆರಿಗೆ ವ್ಯವಸ್ಥೆ ಇತ್ತು. ಕೆಳ ಹಂತದ ಬ್ರಾಂಡ್‌ಗಳಿಗೆ ಲೀಟರ್‌ಗೆ 130 ರೂ. ವರೆಗೆ ತೆರಿಗೆ ವಿಧಿಸಲಾಗುತ್ತಿತ್ತು. ಇತರ ಬ್ರಾಂಡ್‌ಗಳಿಗೆ ಶೇಕಡಾವಾರು ತೆರಿಗೆ ವಿಧಿಸಲಾಗುತ್ತಿತ್ತು. ಈ ವ್ಯವಸ್ಥೆಯನ್ನು ಈಗ ರದ್ದುಗೊಳಿಸಿದ್ದು, ಎಲ್ಲಾ ಬಿಯರ್‌ಗಳಿಗೆ ಏಕರೂಪದ ಶೇ 205 ರ ತೆರಿಗೆ ನಿಗದಿಪಡಿಸಲು ಕರಡು ನಿಯಮದಲ್ಲಿ ಉಲ್ಲೇಖಸಲಾಗಿದೆ.
ತೆರಿಗೆ ವ್ಯವಸ್ಥೆಯನ್ನು ಸರಳೀಕರಣಗೊಳಿಸುವ ಗುರಿಯೊಂದಿಗೆ ಈ ಕ್ರಮ ಕೈಗೊಳ್ಳಲಾಗಿದೆ. ಕಡಿಮೆ ತೆರಿಗೆ ಶ್ರೇಣಿಯನ್ನು ತೆಗೆದುಹಾಕಿ, ಎಲ್ಲಾ ಬಿಯರ್ ಬ್ರಾಂಡ್‌ಗಳಿಗೆ ಒಂದೇ ರೀತಿಯ ತೆರಿಗೆ ವಿಧಿಸಲು ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಮೂರನೇ ಬಾರಿಗೆ ಬಿಯರ್ ದರ ಏರಿಕೆ
ಪ್ರಸ್ತಾವಿತ ಬಿಯರ್ ಮೇಲಿನ ತೆರಿಗೆ ದರ ಹೆಚ್ಚಳ ಮಾಡಿದಾರೆ ಮೂರು ವರ್ಷಗಳ ಅವಧಿಯಲ್ಲಿ ಬಿಯರ್ ಮೇಲಿನ ತೆರಿಗೆಯನ್ನು ಮೂರನೇ ಬಾರಿ ಹೆಚ್ಚಳ ಮಾಡಿದಂತಾಗಲಿದೆ.
2023 ರ ಜುಲೈನಲ್ಲಿ ರಾಜ್ಯ ಸರ್ಕಾರವು ಹೆಚ್ಚುವರಿ ಅಬಕಾರಿ ಸುಂಕವನ್ನು ಶೇ 175 ರಿಂದ 185 ಕ್ಕೆ ಹೆಚ್ಚಿಸಿತ್ತು. 2025 ರ ಜನವರಿ 20 ರಂದು ಮತ್ತೊಂದು ಪರಿಷ್ಕರಣೆ ಮಾಡಲಾಗಿತ್ತು. ಆಗ ಹೆಚ್ಚುವರಿ ಅಬಕಾರಿ ಸುಂಕವನ್ನು ಶೇ 195 ಕ್ಕೆ ಹೆಚ್ಚಳ ಮಾಡಿತ್ತು. ಇದೀಗ ಮತ್ತೆ ತೆರಿಗೆ ಹೆಚ್ಚಳಕ್ಕೆ ನಿರ್ಧರಿಸಿದೆ.
ತೆರಿಗೆ ದರ ಹೆಚ್ಚಳದ ಜೊತೆಗೆ ಮೂಲ ಅಬಕಾರಿ ಸುಂಕವನ್ನೂ ಪರಿಷ್ಕರಿಸಲಾಗಿದೆ. ಫ್ಲಾಟ್ ರೇಟ್ ಬದಲಿಗೆ ಆಲ್ಕೋಹಾಲ್ ಪ್ರಮಾಣದ ಅಂಶ ಆಧರಿಸಿದ ಶ್ರೇಣೀಕೃತ ವ್ಯವಸ್ಥೆ ಪರಿಚಯಿಸಲಾಗಿದೆ. ಶೇ 5 ಅಥವಾ ಅದಕ್ಕಿಂತ ಕಡಿಮೆ ಆಲ್ಕೋಹಾಲ್ ಹೊಂದಿರುವ ಬಿಯರ್‌ಗೆ ಪ್ರತಿ ಬಲ್ಕ್ ಲೀಟರ್‌ಗೆ 12 ರೂ., ಶೇ 5 ರಿಂದ 8 ರಷ್ಟು ಆಲ್ಕೋಹಾಲ್ ಹೊಂದಿರುವ ಬಿಯರ್‌ಗೆ 20 ರೂ. ನಿಗದಿಪಡಿಸಲಾಗಿದೆ.