ಬಂಧನಕ್ಕೂ ಮುನ್ನವೇ ತಾತನ ಭೇಟಿಗೆ ಬೇಡಿಕೆಯಿಟ್ಟ ಪ್ರಜ್ವಲ್!?
x

ಬಂಧನಕ್ಕೂ ಮುನ್ನವೇ ತಾತನ ಭೇಟಿಗೆ ಬೇಡಿಕೆಯಿಟ್ಟ ಪ್ರಜ್ವಲ್!?


ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣದಲ್ಲಿ ವಿದೇಶಕ್ಕೆ ಹೋಗಿ ತಲೆಮರೆಸಿಕೊಂಡಿದ್ದ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಇಂದು (ಮೇ 30, ಗುರುವಾರ) ಜರ್ಮನಿಯ ಮ್ಯೂನಿಚ್‌ನಿಂದ ಭಾರತಕ್ಕೆ ಬರಲು ಫ್ಲೈಟ್‌ ಏರಿದ್ದಾರೆ. ಭಾರತಕ್ಕೆ ತಲುಪು ಮುನ್ನವೇ ಎಸ್‌ಐಟಿ ಬಳಿ ಪ್ರಜ್ವಲ್‌ ಬೇಡಿಕೆಯೊಂದನ್ನು ಇಟ್ಟಿದ್ದಾರೆ ಎಂದು ಹೇಳಲಾಗಿದೆ.

ಪ್ರಜ್ವಲ್‌ ರೇವಣ್ಣ ಭಾರತಕ್ಕೆ ಬಂದ ಬಳಿಕ ತಮ್ಮ ತಾತ, ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡ, ತಂದೆ ಹೆಚ್‌ಡಿ ರೇವಣ್ಣ ಹಾಗೂ ತಾಯಿ ಭವಾನಿ ಅವರನ್ನು ಭೇಟಿಯಾಗಬೇಕು ಆ ಬಳಿಕ ಕ್ರಮ ಕೈಗೊಳ್ಳಿ ಎಂದು ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ. ಆದರೆ ಪ್ರಜ್ವಲ್‌ ಬೇಡಿಕೆಯನ್ನು ಎಸ್‌ಐಟಿ ನಿರಾಕರಿಸಿದೆ ಎಂದು ಮೂಲಗಳು ತಿಳಿಸಿವೆ.

ಜರ್ಮನಿಯ ಮ್ಯೂನಿಚ್‌ನಿಂದ ಬೆಂಗಳೂರಿಗೆ ಲುಫ್ತಾನ್ಸಾ ಏರ್‌ಲೈನ್ಸ್‌ನ ಬ್ಯುಸಿನೆಸ್‌ ಕ್ಲಾಸ್‌ ಟಿಕೆಟ್‌ ಪಡೆದು, ಇಂದು (ಗುರುವಾರ) ಮಧ್ಯಾಹ್ನ 3.30ಕ್ಕೆ ಮ್ಯೂನಿಚ್‌ನಿಂದ ಹೊರಟು ಮಧ್ಯರಾತ್ರಿ 11:20ಕ್ಕೆ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬರಲಿದ್ದಾರೆ. ಮೊದಲು ವಲಸೆ ವಿಭಾಗದ (ಇಮಿಗ್ರೇಷನ್‌) ಅಧಿಕಾರಿಗಳು ಅವರನ್ನು ವಶಕ್ಕೆ ತೆಗೆದುಕೊಂಡು ನಂತರ ಎಸ್‌ಐಟಿಗೆ ಒಪ್ಪಿಸಲಿದ್ದಾರೆ. ಬಂಧನಕ್ಕೆ ಎಸ್‌ಐಟಿ ಅಧಿಕಾರಿಗಳು ಕೆಐಎಎಲ್‌ನಲ್ಲೇ ಬೀಡು ಬಿಟ್ಟಿದ್ದಾರೆ. ಆದರೆ, ಟಿಕೆಟ್‌ ಬುಕ್ಕಿಂಗ್‌ಗೆ ತಮ್ಮ ಮೊಬೈಲ್‌ ಸಂಖ್ಯೆ, ಇ-ಮೇಲ್‌ ವಿಳಾಸ ನಮೂದಿಸಿಲ್ಲ. ಪ್ರಜ್ವಲ್‌, ವಿಚಾರಣೆಗೆ ಹಾಜರಾಗುವ ಮುಂಚೆಯೇ ಅಧಿಕಾರಿಗಳು ಅವರನ್ನು ವಶಕ್ಕೆ ಪಡೆಯಲಿದ್ದಾರೆ.

ಪ್ರಜ್ವಲ್ ರೇವಣ್ಣ ಬಂಧನಕ್ಕೆ ನ್ಯಾಯಾಲಯ ವಾರೆಂಟ್ ನೀಡಿರುವುದರಿಂದ ಅವರನ್ನು ಬಂಧಿಸಲು ವಿಶೇಷ ತನಿಖಾ ದಳ-ಎಸ್‌ಐಟಿ ಬಂಧಿಸಲು ಸಿದ್ಧತೆ ಮಾಡಿಕೊಂಡಿದೆ. ಇನ್ನು ಮುಂಜಾಗ್ರತಾ ಕ್ರಮವಾಗಿ ಕೆಂಪೇಗೌಡ ಏರ್ಪೋರ್ಟ್‌ನಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ಈ ಕುರಿತು ಬೆಂಗಳೂರು ಪೊಲೀಸ್‌ ಆಯುಕ್ತ ಬಿ. ದಯಾನಂದ್‌ ಹಾಗೂ ಎಸ್‌ಐಟಿ ಅಧಿಕಾರಿಗಳು ಜಂಟಿ ಸಭೆ ಕರೆದು ಸಿದ್ಧತೆ ಮಾಡಿಕೊಂಡಿದ್ದಾರೆ.

Read More
Next Story