ಕಾಂಗ್ರೆಸ್‌ ಸರ್ಕಾರದಲ್ಲೂ 40% ಕಮಿಷನ್‌ ದಂಧೆ: ಗುತ್ತಿಗೆದಾರರ ಸಂಘದ ಆರೋಪ
x

ಕಾಂಗ್ರೆಸ್‌ ಸರ್ಕಾರದಲ್ಲೂ 40% ಕಮಿಷನ್‌ ದಂಧೆ: ಗುತ್ತಿಗೆದಾರರ ಸಂಘದ ಆರೋಪ

ಹಿಂದಿನ ಬಿಜೆಪಿ ಆಡಳಿತದಲ್ಲಿ ಸಾರ್ವಜನಿಕ ಪ್ರತಿನಿಧಿಗಳು ಲಂಚ ಕೇಳುತ್ತಿದ್ದರು, ಈಗ ಅಧಿಕಾರಿಗಳ ಸರದಿ ಎಂದ ಕೆಂಪಣ್ಣ


ಬೆಂಗಳೂರು: ಹಿಂದಿನ ಸರ್ಕಾರದಲ್ಲಿದ್ದ ಶೇ.40 ಕಮಿಷನ್ ದಂಧೆ ಇದೀಗ ಕಾಂಗ್ರೆಸ್ ಸರ್ಕಾರದಲ್ಲಿಯೂ ಮುಂದುವರಿದಿದೆ ಎಂದು ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಗುರುವಾರ ಆರೋಪ ಮಾಡಿದ್ದಾರೆ.

ಈ ಬಗ್ಗೆ ಚಾಮರಾಜಪೇಟೆಯ ಗುತ್ತಿಗೆದಾರರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಧಿಕಾರಿಗಳಿಂದಲೇ ರಾಜ್ಯದಲ್ಲಿ ಭ್ರಷ್ಟಾಚಾರ ಬೇರೂರಿದೆ. ಮಿತಿಮೀರಿದ ಭ್ರಷ್ಟಾಚಾರಿ ಅಧಿಕಾರಿಗಳಿದ್ದಾರೆ. ಬಿಬಿಎಂಪಿ, ನೀರಾವರಿ ಸೇರಿದಂತೆ ಎಲ್ಲಾ ಇಲಾಖೆಯಲ್ಲಿಯೂ ಭ್ರಷ್ಟ ಅಧಿಕಾರಿಯಾಗಳಿದ್ದಾರೆಂದು ಆರೋಪಿಸಿದರು.

ರಾಜ್ಯ ಸರ್ಕಾರದಲ್ಲಿ ಅಧಿಕಾರಿಗಳು ವ್ಯಾಪಕ ಭ್ರಷ್ಟಾಚಾರ ನಡೆಸುತ್ತಿದ್ದಾರೆ ಎಂದು ಆರೋಪಿಸಿದ ಅವರು, ಈ ಹಿಂದೆ (ಹಿಂದಿನ ಬಿಜೆಪಿ ಆಡಳಿತದಲ್ಲಿ) ಸಾರ್ವಜನಿಕ ಪ್ರತಿನಿಧಿಗಳು ಲಂಚ ಕೇಳುತ್ತಿದ್ದರು, ಈಗ ಅವರ ಸರದಿ ಬಂದಿದೆ ಎಂದರು.

"ಕರ್ನಾಟಕದಲ್ಲಿ ಅಧಿಕಾರಿಗಳಿಂದ ಭ್ರಷ್ಟಾಚಾರ ನಡೆಯುತ್ತಿದೆ, ಇಲ್ಲಿಯವರೆಗೂ ಯಾವ ಶಾಸಕರು, ಸಂಸದರು, ಸಚಿವರು ನಮ್ಮ ಬಳಿ ಹಣ ಕೇಳಿಲ್ಲ, ಹಿಂದಿನ ಶಾಸಕರು ನಮಗೆ ಕಾಮಗಾರಿ ಗುತ್ತಿಗೆ ನೀಡಲು ನಿಗದಿತ ಮೊತ್ತ ಕೇಳುತ್ತಿದ್ದರು. ಈಗ ಆ ಪರಿಸ್ಥಿತಿ ಇಲ್ಲ. ಅಧಿಕಾರಿಗಳು ಬಂದು ಕೇಳುತ್ತಾರೆ- ಕೆಲಸ ಬೇಕಾದರೆ ಹಣ ಕೊಡಿ" ಎಂದು ಕೆಂಪಣ್ಣ ಹೇಳಿದರು.

‘ಹಣವನ್ನು ಯಾರಿಗೆ ನೀಡಬೇಕು ಎಂದು ಕೇಳಿದರೆ, ಅವರು (ಅಧಿಕಾರಿಗಳು)- ನಿಮಗೆ ಅದು ಏಕೆ ಬೇಕು (ತಿಳಿದುಕೊಳ್ಳಲು)? ನಿಮಗೆ ಕೆಲಸ ಬೇಕಾದರೆ ಹಣ ನೀಡಿ” ಎನ್ನುತ್ತಾರೆ ಎಂದು ತಿಳಿಸಿದರು.

ಹಿಂದಿನ ಬಿಜೆಪಿ ಆಡಳಿತದಲ್ಲಿ ಸಚಿವರು, ಚುನಾಯಿತ ಪ್ರತಿನಿಧಿಗಳು ಮತ್ತು ಇತರರು ಕಿರುಕುಳ ನೀಡಿದ್ದರು. ಈ ಹಿಂದೆ ಗುತ್ತಿಗೆ ನೀಡಲು ಮತ್ತು ಬಿಲ್‌ ಕ್ಲಿಯರ್‌ ಮಾಡಲು 40 ಪರ್ಸೆಂಟ್ ಕಮಿಷನ್‌ಗೆ ಬೇಡಿಕೆಯಿಡುತ್ತಿದ್ದರು ಎಂದು ಆರೋಪಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೆಂಪಣ್ಣ ಅವರ ನೇತೃತ್ವದ ರಾಜ್ಯ ಗುತ್ತಿಗೆದಾರರ ಸಂಘವು ಪತ್ರವನ್ನೂ ಬರೆದಿದ್ದರು.

Read More
Next Story