ಕ್ರೀಡೆ, ಕಲೆ ಮತ್ತು ಶಿಕ್ಷಣ ತರಬೇತಿ ನೀಡುವ ಓರಿಯೆಂಟಿಂಗ್​ ಅಕಾಡೆಮಿ ಆರಂಭ
x

ಅಂತಾರಾಷ್ಟ್ರೀಯ ಮಟ್ಟದ ಅಥ್ಲೀಟ್​ ಅರ್ಜುನ ದೇವಯ್ಯ ಮತ್ತು ಕರ್ನಾಟಕ ರಾಜ್ಯ ಹಾಕಿ ಸಂಸ್ಥೆಯ ಕಾರ್ಯದರ್ಶಿ ಕೃಷ್ಣಮೂರ್ತಿ ಅವರು ಬೆಂಗಳೂರುನಲ್ಲಿ ನಡೆದ ಒರಿಯೆಂಟಿಂಗ್ ಅಕಾಡೆಮಿ ಉದ್ಘಾಟಿಸಿದರು. 

ಕ್ರೀಡೆ, ಕಲೆ ಮತ್ತು ಶಿಕ್ಷಣ ತರಬೇತಿ ನೀಡುವ ಓರಿಯೆಂಟಿಂಗ್​ ಅಕಾಡೆಮಿ ಆರಂಭ

ಫೆಬ್ರವರಿ 2017ರಲ್ಲಿ ಸ್ಥಾಪನೆಯಾಗಿರುವ ಓರಿಯೆಂಟಿಂಗ್ ಕಾರ್ಯಕ್ರಮವು ವೈಯಕ್ತಿಕ ಮತ್ತು ವೃತ್ತಿಪರ ಬೆಳವಣಿಗೆಯ ಕ್ಷೇತ್ರಗಳಲ್ಲಿ ಗಣನೀಯ ಪ್ರಗತಿ ಸಾಧಿಸಿದೆ.


ಅನುಭವಾತ್ಮಕ ಕಲಿಕೆಯಲ್ಲಿ ಮುಂಚೂಣಿಯಲ್ಲಿರುವ 'ಪವರ್ ಫಾರ್ವರ್ಡ್ ಸರ್ವಿಸಸ್' ಸಂಸ್ಥೆಯು ಬುಧವಾರ (ಏಪ್ರಿಲ್ 2ರಂದು) 4 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟ ಮಕ್ಕಳಿಗಾಗಿ ಕ್ರೀಡೆ, ಕಲೆ ಮತ್ತು ಶಿಕ್ಷಣವನ್ನೊಳಗೊಂಡ ಓರಿಯೆಂಟಿಂಗ್​ ಅಕಾಡೆಮಿಯನ್ನು ಆರಂಭಿಸಿದೆ.

ಈ ಹೊಸ ಉದ್ಯಮವು ಅಮೆರಿಕದ ಮೇರಿಲ್ಯಾಂಡ್​ನಲ್ಲಿ ಪ್ರಧಾನ ಕಚೇರಿ ಹೊಂದಿದ್ದು, ಓರಿಯೆಂಟಿಂಗ್ ಕಾರ್ಯಕ್ರಮ ಬೆಂಗಳೂರಿಗೂ ವಿಸ್ತರಣೆಯಾಗಿದೆ. ಹಿಂದೆ ಸಂಸ್ಥೆಯು ಯುವಕರಿಗೆ ಹಾಗೂ ಕಾರ್ಪೊರೇಟ್ ಸಂಸ್ಥೆಗಳಿಗೆ ಸೇವೆ ನೀಡುತ್ತಿತ್ತು.

ಅಕಾಡೆಮಿಯು, 'ಮಗುವನ್ನು ರೂಪಿಸುವಲ್ಲಿ ಗೌರವ ಮತ್ತು ಗಂಭೀರತೆ ಒಳಗೊಂಡಿರಬೇಕು,' ಎಂಬ ತತ್ವದಲ್ಲಿ ನಿಂತಿದೆ ಎಂದು ಪವರ್ ಫಾರ್ವರ್ಡ್ ಸರ್ವಿಸಸ್‌ನ ಸಂಸ್ಥಾಪಕಿ ಮತ್ತು ವ್ಯವಸ್ಥಾಪಕ ನಿರ್ದೇಶಕಿ ಡೈಸಿ ರಿಚರ್ಡ್ ಹೇಳಿದ್ದಾರೆ. "ನಮ್ಮ ಗುರಿ ಯುವ ಪ್ರತಿಭೆಗಳಿಗೆ ಸರ್ವತೋಮುಖ ಬೆಳವಣಿಗೆಗೆ ಪೂರಕ ವೇದಿಕೆಯನ್ನು ಒದಗಿಸುವುದು. ಅನುಭವಾತ್ಮಕ ಕಲಿಕೆ ಕಾರ್ಯಕ್ರಮಗಳ ಯಶಸ್ವಿ ತಂತ್ರಗಳನ್ನು ಒಳಗೊಂಡಿರುತ್ತದೆ" ಎಂದು ಹೇಳಿದರು.

ಫೆಬ್ರವರಿ 2017ರಲ್ಲಿ ಸ್ಥಾಪನೆಯಾಗಿರುವ ಓರಿಯೆಂಟಿಂಗ್ ಕಾರ್ಯಕ್ರಮವು ವೈಯಕ್ತಿಕ ಮತ್ತು ವೃತ್ತಿಪರ ಬೆಳವಣಿಗೆಯ ಕ್ಷೇತ್ರಗಳಲ್ಲಿ ಗಣನೀಯ ಪ್ರಗತಿ ಸಾಧಿಸಿದೆ. ಕರ್ನಾಟಕ, ತಮಿಳುನಾಡು ಮತ್ತು ನವದೆಹಲಿಯಾದ್ಯಂತ 3,000ಕ್ಕೂ ಹೆಚ್ಚು ವ್ಯಕ್ತಿಗಳ ಮೇಲೆ ಪ್ರಭಾವ ಬೀರಿದೆ. ಈ ಪ್ರಭಾವಿ ಕಲಿಕೆ ಮಾದರಿಯನ್ನು ಚಿಕ್ಕ ಮಕ್ಕಳಿಗೆ ವಿಸ್ತರಿಸುವ ಗುರಿಯನ್ನು ಸಂಸ್ಥೆ ಹೊಂದಿದೆ.

ತರಬೇತು ತಂಡದಲ್ಲಿ ಯಾರಿದ್ದಾರೆ?

ಅಕಾಡೆಮಿಯಲ್ಲಿ ಪರಿಣತಿ ಪಡೆದಿರುವ ತಂಡವಿದೆ. ಮಾಜಿ ಆರ್‌ಬಿಐ ಅಧಿಕಾರಿ ಮತ್ತು ಕ್ರೀಡಾ ಉತ್ಸಾಹಿ ಕಣ್ಣನ್ ಕೃಷ್ಣಮೂರ್ತಿ, ಕಾನೂನು ಸೇವೆಗಳ ನಿರ್ದೇಶಕ ಡಾ. ಎಂ. ಜೆಬಕುಮಾರ್, ಮಾಧ್ಯಮ ಕಾರ್ಯನಿರ್ವಾಹಕ ಮತ್ತು ಪರಿಸರವಾದಿ ಜೋಸೆಫ್ ಹೂವರ್, ವಿಮಾ ಉದ್ಯಮ ಅನುಭವಿ ವಿಜಯ್ ಎಸ್. ಪಾಲ್ಸನ್, ಮಾಜಿ ಆರ್‌ಬಿಐ ಅಧಿಕಾರಿ ಮತ್ತು ರಾಷ್ಟ್ರೀಯ ಹಾಕಿ ಅಂಪೈರ್ ಸುರೇಶ್ ಗುರಪ್ಪ,ಐಟಿ ಕಂಪನಿ ನಿರ್ವಹಣಾ ಅನುಭವಿ ಟೋನಿ ನಾಥನ್ ತರಬೇತು ತಂಡದಲ್ಲಿದ್ದಾರೆ.

ಅಕಾಡೆಮಿಯು ಬೌದ್ಧಿಕ ಬೆಳವಣಿಗೆಯ ಜೊತೆಗೆ ದೈಹಿಕ ಮತ್ತು ಕಲಾತ್ಮಕ ಬೆಳವಣಿಗೆಯನ್ನು ಉತ್ತೇಜಿಸುವ ಸಮಗ್ರ ಶಿಕ್ಷಣ ಮಾದರಿಗಳಿಗೆ ಹೆಚ್ಚುತ್ತಿರುವ ಅಗತ್ಯವನ್ನು ಪೂರೈಸುತ್ತದೆ.

Read More
Next Story