
ಸರ್ಕಾರದ ಗಮನಕ್ಕೆ... ವಿಧಾನಸೌಧ ಮುಂದೆಯೇ ರಸ್ತೆಗುಂಡಿ...ಸ್ವಲ್ಪ ಈ ಕಡೆ ನೋಡಿ ಸ್ವಾಮಿ!!
ಆದರೆ, ದ ಫೆಡರಲ್ ಕರ್ನಾಟಕ ನಡೆಸಿದ ʼಗ್ರೌಂಡ್ ರಿಪೋರ್ಟ್"ನಲ್ಲಿ ಸ್ವತಃ ರಾಜ್ಯದ ಶಕ್ತಿಸೌಧ ವಿಧಾನಸೌಧ ಎದುರೇ ರಸ್ತೆ ಗುಂಡಿಗಳು ಕಂಡುಬಂದಿವೆ!
ಬೆಂಗಳೂರಿನಲ್ಲಿ ರಸ್ತೆಗುಂಡಿಗಳಿಂದ ದೇಶದ ಐಟಿ ಸಿಟಿ ಗರಿಮೆಗೆ ಕುಂದಾಗಿದೆ ಎಂದು ಐಟಿ-ಬಿಟಿ ಕ್ಷೇತ್ರದ ದಿಗ್ಗಜರಾದ ಟಿ. ವಿ. ಮೋಹನದಾಸ್ ಪೈ, ಕಿರಣ್ ಮುಜಮ್ದಾರ್ ಷಾ ಮತ್ತಿತರರು ಸರ್ಕಾರದ ಕಾರ್ಯವೈಖರಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ದೆಹಲಿಯಲ್ಲಿ ಪ್ರಧಾನ ಮಂತ್ರಿ ಮನೆ ಬಳಿಯೂ ಅದೇ ರೀತಿಯ ಸಮಸ್ಯೆ ಇದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಟೀಕಿಸದ್ದರಲ್ಲದೆ, ಗುಂಡಿ ಮುಚ್ಚುವ ಬಗ್ಗೆ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಅಧಿಕಾರಿಗಳಿಗೆ ಕಟ್ಟಪ್ಪಣೆ ವಿಧಿಸಿದ್ದಾರೆ.
ಮುಚ್ಚಿದ ಗುಂಡಿ ತೇಪೆ ಹೋಗಿ ಮತ್ತೆ ಗುಂಡಿಗಳೇ ಎದ್ದುಕಾಣುತ್ತಿವೆ. ಬಹುತೇಕ ಕಡೆ ಗುಂಡಿಮುಕ್ತ ರಸ್ತೆಗಳ ಬದಲಿಗೆ ಗುಂಡಿಯುಕ್ತ ರಸ್ತೆಗಳೇ ರಾರಾಜಿಸುತ್ತಿವೆ.
ಆದರೆ, ದ ಫೆಡರಲ್ ಕರ್ನಾಟಕ ನಡೆಸಿದ ʼಗ್ರೌಂಡ್ ರಿಪೋರ್ಟ್"ನಲ್ಲಿ ಸ್ವತಃ ರಾಜ್ಯದ ಶಕ್ತಿಸೌಧ ವಿಧಾನಸೌಧ ಎದುರೇ ರಸ್ತೆ ಗುಂಡಿಗಳು ಕಂಡುಬಂದಿವೆ!
ವಿಧಾನಸೌಧ ಮುಂದೆಯೇ ರಸ್ತೆ ಗುಂಡಿ
ಸಿಲಿಕಾನ್ ಸಿಟಿ ಬೆಂಗಳೂರಿನ ಮರ್ಯಾದೆ ಮತ್ತೊಮ್ಮೆ ಬೀದಿಪಾಲಾಗಿದೆ. ರಾಜ್ಯದ ಆಡಳಿತದ ಶಕ್ತಿ ಕೇಂದ್ರವಾದ ವಿಧಾನಸೌಧದ ಮುಂದೆಯೇ ಗುಂಡಿಗಳು ಪ್ರತ್ಯಕ್ಷವಾಗಿವೆ!
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಐಟಿ ಕ್ಷೇತ್ರದ ಉದ್ಯಮಿಗಳು ಹೇಳಿಕೆ, ಪ್ರತಿಹೇಳಿಕೆಗಳಿಗೆ ಈ ಗುಂಡಿಗಳು ಅಣಕವಾದಂತೆ ಕಂಡುಬಂದಿದೆ.
ಪ್ರತಿದಿನ ಸಚಿವರು, ಶಾಸಕರು, ಉನ್ನತ ಅಧಿಕಾರಿಗಳು ಸಂಚರಿಸುವ ಈ ರಸ್ತೆಯಲ್ಲೇ ಇಂತಹ ದುಸ್ಥಿತಿ ನಿರ್ಮಾಣವಾಗಿದ್ದರೂ, ಬಿಬಿಎಂಪಿ ಕಣ್ಮುಚ್ಚಿ ಕುಳಿತಿದೆ. ಈ ಗುಂಡಿಯಿಂದಾಗಿ ವಾಹನ ಸವಾರರು ಪರದಾಡುತ್ತಿದ್ದು, ಟ್ರಾಫಿಕ್ ಜಾಮ್ ಮತ್ತು ಅಪಘಾತದ ಭೀತಿ ಎದುರಾಗಿದೆ. ಇಲ್ಲೇ ಹೀಗಾದರೆ, ಬೇರೆ ರಸ್ತೆಗಳ ಕಥೆ ಏನಾಗಿರಲಿಕ್ಕಿಲ್ಲ ಎಂಬ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
'ದ ಫೆಡರಲ್ ಕರ್ನಾಟಕ' ಈ ಕುರಿತು ನಡೆಸಿದ ವಿಶೇಷ ಗ್ರೌಂಡ್ ರಿಪೋರ್ಟ್‌ನ ಲಿಂಕ್ ಈ ಕೆಳಗೆ ಇದೆ.